ಮುಖ್ಯಮಂತ್ರಿ ಸಿದ್ದರಾಮಯ್ಯ 
ರಾಜಕೀಯ

BJPಯವರೇ.. ನಿಮಗೆ ಮಾನ ಮಾರ್ಯಾದೆ-ನೈತಿಕತೆಗೆ ಅರ್ಥ ಗೊತ್ತಿದೆಯೇ? ಕೈ ತೋರಿಸಿ ಯಾಕೆ ಅವಲಕ್ಷಣ ಮಾಡಿಸಿಕೊಳ್ಳುತ್ತೀರೋ‌ ಗೊತ್ತಿಲ್ಲ: ಕಾಂಗ್ರೆಸ್

ನಮ್ಮ ಸರ್ಕಾರದ ಕೊನೆಯಲ್ಲಿ ಅಂದರೆ ಮೇ 2018 ರ ಅಂತ್ಯಕ್ಕೆ ಸಾರಿಗೆ ನಿಗಮಗಳಲ್ಲಿ ಭವಿಷ್ಯ ನಿಧಿ ಮೊತ್ತ ಬಾಕಿ ಇದ್ದದ್ದು ರೂ14.71 ಕೋಟಿ ಅದೇ 2023 ರ ಮೇ ಅಂತ್ಯಕ್ಕೆ ತಮ್ಮ ಸರ್ಕಾರ ಸಾರಿಗೆ ನಿಗಮಗಳಲ್ಲಿ ಭವಿಷ್ಯ ನಿಧಿ ಮೊತ್ತ ರೂ 1380.59 ಕೋಟಿ.

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಸಾಲ ಪಡೆಯುತ್ತಿರುವ ಕುರಿತು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರವಾಗಿ ವಾಗ್ದಾಳಿ ನಡೆಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಅವರೇ ನಿಜವಾಗಲೂ ತಮಗೆ ಸ್ವಲ್ಪವಾದರೂ ಮಾನ ಮಾರ್ಯಾದೆ ಅಥವಾ ನೈತಿಕತೆಗೆ ಅರ್ಥ ಗೊತ್ತಿದೆಯೇ? ನಾವು ಈಗಾಗಲೇ ಹತ್ತು ಹಲವು ಬಾರಿ ಹೇಳಿದ್ದೇವೆ. ಸಾರಿಗೆ ಸಂಸ್ಥೆಗಳು ಲೋನ್ ತೆಗೆದುಕೊಳ್ಳಲೇಬೇಕು ಯಾಕೆಂದರೆ, ತಮ್ಮ ಪಕ್ಷದ ದುರಾಡಳಿತದ ಅವಧಿಯಲ್ಲಿನ ರೂ.5900 ಕೋಟಿ ಸಾಲ‌ ತೀರಿಸುವ ಅನಿವಾರ್ಯತೆ ಇದೆ. ಈ ಲೋನ್ ತೆಗೆದುಕೊಳ್ಳುತ್ತಿರುವುದು ತಮ್ಮ ಕಾಲದಲ್ಲಿನ ಬಾಕಿ ಉಳಿಸಿ ಹೋಗಿದ್ದ ನೌಕರರ ಭವಿಷ್ಯ ನಿಧಿ ಮೊತ್ತ ಮತ್ತು ಡೀಸೆಲ್ ಬಾಕಿ ಮೊತ್ತ ಪಾವತಿಸಲು ಎಂಬುದನ್ನು ತಮಗೆ ಪ್ರತಿ ಬಾರಿ ಹೇಳಲು ಅಸಹ್ಯವಾಗುತ್ತಿದೆ ಎಂದು ಕಿಡಿಕಾರಿದೆ.

ನಮ್ಮ ಸರ್ಕಾರದ ಕೊನೆಯಲ್ಲಿ ಅಂದರೆ ಮೇ 2018 ರ ಅಂತ್ಯಕ್ಕೆ ಸಾರಿಗೆ ನಿಗಮಗಳಲ್ಲಿ ಭವಿಷ್ಯ ನಿಧಿ ಮೊತ್ತ ಬಾಕಿ ಇದ್ದದ್ದು ರೂ14.71 ಕೋಟಿ ಅದೇ 2023 ರ ಮೇ ಅಂತ್ಯಕ್ಕೆ ತಮ್ಮ ಸರ್ಕಾರ ಸಾರಿಗೆ ನಿಗಮಗಳಲ್ಲಿ ಭವಿಷ್ಯ ನಿಧಿ ಮೊತ್ತ ರೂ 1380.59 ಕೋಟಿ. ನಾವು ನಿಮ್ಮಗಳ ರೀತಿ ಸಾರಿಗೆ ಸಂಸ್ಥೆಗಳನ್ನು ಸಂಕಷ್ಟದ ಸುಳಿಯಲ್ಲಿ ಸಿಲುಕಿಸಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರವೇ ನಾಲ್ಕು ನಿಗಮಗಳಿಗೆ ರೂ. 2000 ಕೋಟಿ ಲೋನ್ ತೆಗೆದುಕೊಳ್ಳಲು ಅನುಮತಿ‌ ನೀಡಿದೆ.

ನಾವು ಏನೆಲ್ಲಾ ಹೇಳಬಹುದೋ ಎಲ್ಲವನ್ನೂ ಹೇಳಿ ಆಯಿತು‌‌. ಸಾಮಾನ್ಯ ಜ್ಞಾನ, ಸಾಮಾನ್ಯ ಗಣಿತ ಬಾರದ ಅಜ್ಞಾನಿಗಳು ಎಂದೂ ಸಹ ಹೇಳಿದ ಮೇಲೂ ಸರಿಯಾದ‌ ಮಾಹಿತಿ ಕಲೆಹಾಕಿಯಾದರೂ ಮಾತನಾಡಬಾರದೇ? ಕೈ ತೋರಿಸಿ ಯಾಕೆ ಅವಲಕ್ಷಣ ಮಾಡಿಸಿಕೊಳ್ಳುತ್ತಾರೋ‌ ಗೊತ್ತಿಲ್ಲ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಆಡಳಿತದಲ್ಲಿ ರಾಜ್ಯ ರೂ 2 ಲಕ್ಷ ಕೋಟಿ ಸಾಲ ಮಾಡಿದ್ದು, ದೇಶದ‌ 67 ವರ್ಷಗಳ ಇತಿಹಾಸದಲ್ಲಿ ಆಗಿರದಷ್ಟು ಸಾಲ ಇಂದಿನ ಕೇಂದ್ರ ಸರ್ಕಾರ 2014-2025 ರ ಅವಧಿಗೆ ರೂ 149 ಲಕ್ಷ ಕೋಟಿಗಳ ಸಾಲ, ಇದಾವುದರ ಬಗ್ಗೆ ಚಕಾರವೆತ್ತಲು ಸಾಹಸ ಮಾಡದ ಇವರು ಸುಳ್ಳು ಅಂಕಿ ಅಂಶಗಳನ್ನು ನೀಡುತ್ತಾ ಜನರನ್ನು ದಾರಿ ತಪ್ಪಿಸುತ್ತಾ, ಟ್ಟೀಟ್ ಮಾಡುವುದೇ ದೊಡ್ಡ ಸಾಧನೆ ಎಂದು ತಿಳಿದಿರುವುದು ಹಾಸ್ಯಾಸ್ಪದ ಎಂದು ವಾಗ್ದಾಳಿ ನಡೆಸಿದೆ.

ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಬಿಜೆಪಿ, ಸಾರಿಗೆ ನಿಗಮಗಳು ಭರ್ಜರಿ ಲಾಭದಲ್ಲಿವೆ ಎಂದು ಪುಂಗಿ ಊದಿದ ಸಚಿವ ರಾಮಲಿಂಗಾ ರೆಡ್ಡಿಯವರೇ, ಇದೇನು ಸಾಲದ ಸುಳಿಯಲ್ಲಿ ಸಾರಿಗೆ ನಿಗಮಗಳನ್ನು ಸಿಲುಕಿಸುತ್ತಿದ್ದೀರಿ. ಕೆಎಸ್‌ಆರ್‌ಟಿಸಿ ನಂತರ ಇದೀಗ ಬಿಎಂಟಿಸಿ ಬರೋಬ್ಬರಿ 589.20 ಕೋಟಿ ರೂ. ಸಾಲಕ್ಕಾಗಿ ಭಿಕ್ಷೆ ಬೇಡುತ್ತಿದೆ. ರಾಜ್ಯದ ನಾಲ್ಕು ನಿಗಮಗಳು ಒಟ್ಟು 2,000 ಕೋಟಿ ರೂ. ಸಾಲ ಪಡೆಯಲಿವೆ. ಕನ್ನಡಿಗರ ತೆರಿಗೆ ಹಣವನ್ನು ಲೂಟಿ ಮಾಡಿ ಖಜಾನೆ ಖಾಲಿ ಮಾಡಿರುವ ಕಾಂಗ್ರೆಸ್ ಸರ್ಕಾರ ಇದೀಗ ಸಾರಿಗೆ ನಿಗಮಗಳ ಮೂಲಕ ಸಾಲದ ರೂಪದಲ್ಲಿ ಲೂಟಿ ಹೊಡೆಯಲು ಮುಂದಾಗಿದೆ ಎಂದು ಕಿಡಿಕಾರಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ಯಾನರ್‌ ವಿಚಾರಕ್ಕೆ ಜನಾರ್ದನ ರೆಡ್ಡಿ ಮನೆ ಮುಂದೆ ಗಲಾಟೆ, ಫೈರಿಂಗ್; ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು

ಕುರ್ಚಿ ಕದನಕ್ಕೆ ಬಿಗ್ ಟ್ವಿಸ್ಟ್‌; ಈ ಬಾರಿಯೂ ನಾನೇ ಬಜೆಟ್ ಮಂಡಿಸುತ್ತೇನೆ, ಸಿದ್ಧತೆ ಆರಂಭ: CM ಸಿದ್ದರಾಮಯ್ಯ

ರಾಹುಲ್ ಗಾಂಧಿ ಪ್ರಭು ಶ್ರೀರಾಮನಿದ್ದಂತೆ: ಶೋಷಿತರಿಗೆ ನ್ಯಾಯ ಒದಗಿಸುತ್ತಿದ್ದಾರೆ - ನಾನಾ ಪಟೋಲೆ

ಕೋಗಿಲು ತೆರವು: ಕೇವಲ 90 ಜನರಿಗೆ ಮಾತ್ರ ಮನೆ ಹಂಚಿಕೆ - ಸಚಿವ ಭೈರತಿ ಸುರೇಶ್

ಬಾಂಗ್ಲಾದೇಶದಲ್ಲಿ ಜೈಶಂಕರ್ ಹ್ಯಾಂಡ್ ಶೇಕ್: ಪಾಕ್ ವರದಿಗಳು ದೊಡ್ಡ "ಜೋಕ್" ಎಂದ ಮಾಜಿ ರಾಯಭಾರಿ!

SCROLL FOR NEXT