ಡಿ ವಿ ಸದಾನಂದಗೌಡ 
ರಾಜಕೀಯ

ಮೆಟ್ರೋ ದರ ಏರಿಕೆ: ಬೊಟ್ಟು ಮಾಡುವುದು ಬಿಟ್ಟು, ಕೇಂದ್ರದ ಮೇಲೆ ಒತ್ತಡ ಹೇರಿ; ರಾಜ್ಯ ಸರ್ಕಾರಕ್ಕೆ ಸದಾನಂದಗೌಡ ಆಗ್ರಹ

ಮೆಟ್ರೋ ದರ ಏರಿಕೆ ಸಂಬಂಧ ರಾಜ್ಯ ಸರ್ಕಾರ ವಿಶೇಷ ಒತ್ತಡ ಹಾಕುವುದು ಪ್ರಥಮ ಜವಾಬ್ದಾರಿ. ಕೇಂದ್ರದ ಮೇಲೆ ಬೊಟ್ಟು ಮಾಡುವುದನ್ನು ಬಿಡಿ. ಮೆಟ್ರೋ ದರ ಕಡಿಮೆ ಆಗಬೇಕು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ರಾಜ್ಯ ಸರಕಾರ ಮೊದಲು ಒತ್ತಡ ಹಾಕಬೇಕು.

ಮೈಸೂರು: ಮೆಟ್ರೋ ದರ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುವುದನ್ನು ಬಿಡಿ ಎಂದು ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಚಿವ ಡಿವಿ ಸದಾನಂದಗೌಡ ಅವರು ಬುಧವಾರ ವಾಗ್ದಾಳಿ ನಡೆಸಿದ್ದಾರೆ.

ಟಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ಮಾತನಾಡಿದ ಅವರು, ಮೆಟ್ರೋ ದರ ಏರಿಕೆ ಸಂಬಂಧ ರಾಜ್ಯ ಸರ್ಕಾರ ವಿಶೇಷ ಒತ್ತಡ ಹಾಕುವುದು ಪ್ರಥಮ ಜವಾಬ್ದಾರಿ. ಕೇಂದ್ರದ ಮೇಲೆ ಬೊಟ್ಟು ಮಾಡುವುದನ್ನು ಬಿಡಿ. ಮೆಟ್ರೋ ದರ ಕಡಿಮೆ ಆಗಬೇಕು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ರಾಜ್ಯ ಸರಕಾರ ಮೊದಲು ಒತ್ತಡ ಹಾಕಬೇಕು. ರಾಜ್ಯ ಸರ್ಕಾರ ಕರೆದರೆ ಕೇಂದ್ರದ ಬಳಿಗೆ ನಾವೂ ಜೊತೆಯಾಗಿ ಹೋಗುತ್ತೇವೆಂದು ಹೇಳಿದರು.

ಉದಯಗಿರಿ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಯಾವಾಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತದೆಯೋ ಆಗೆಲ್ಲಾ ಒಂದು ಕೋಮಿನ ಜನರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ. ಪರಮೇಶ್ವರ್'ಗೆ ಕಾನೂನು ಸುವ್ಯವಸ್ಥೆ ನಿಭಾಯಿಸಲು ಬರುತ್ತಿಲ್ಲ. ಸಿಎಂ ತಲೆಯಲ್ಲಿ ಬರೀ ಮುಡಾ ತುಂಬಿದೆ. ಸಿದ್ದರಾಮಯ್ಯ ಹೆಸರಿನಲ್ಲಿ ಇರುವ ಸಿದ್ದ ಎಂಬುದನ್ನು ತೆಗೆಯಬೇಕಾದ ಸ್ಥಿತಿ ಬಂದಿದೆ. ಆ ಮಟ್ಟಕ್ಕೆ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆದಾಗ ಬದಲಾಗಿದ್ದಾರೆ.

ಪರಮೇಶ್ವರ್ ಕೇವಲ ಕುರ್ಚಿಗೆ ಅಂಟಿಕೊಂಡು ಕುಳಿತಿದ್ದಾರೆ. ರಾಜಣ್ಣ, ಜಾರಕಿಹೊಳಿ, ಪರಮೇಶ್ವರ್ ಯಾರು ಮಂತ್ರಿ ಕೆಲಸ ಮಾಡುತ್ತಿಲ್ಲ. ಬರೀ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇದು ಅತ್ಯಂತ ಭ್ರಷ್ಟ ಸರ್ಕಾರ. ಎರಡು ಕಡೆ ಪುಣ್ಯಸ್ನಾನ ಮಾಡಿ ಡಿ ಕೆ ಶಿವಕುಮಾರ್ ಅವರ ಪಾಪ ಸ್ವಲ್ಪ ಪರಿಹಾರ ಆಗಿರಬಹುದು. ಸ್ವಯಂಕೃತ ಅಪರಾಧದಿಂದ ಸಿದ್ದರಾಮಯ್ಯ ಕೆಳಗೆ ಇಳಿಯುತ್ತಾರೆ. ಹೈಕಮಾಂಡ್ ಬೆಂಬಲದಿಂದಷ್ಟೇ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬಹುದು ಎಂದು ತಿಳಿಸಿದರು.

ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ವಿಚಾರ ಕುರಿತು ಪ್ರತಿಕ್ರಿಯಿಸಿ, ನನ್ನ ಪಕ್ಷಕ್ಕೆ ಈ ಪರಿಸ್ಥಿತಿ ಬರಬಾರದಿತ್ತು. ನಮ್ಮಲ್ಲಿ ಆಂತರಿಕ ಅವ್ಯವಸ್ಥೆ ಇದೆ. ನಮ್ಮ ಪಕ್ಷ ರಾಜ್ಯದಲ್ಲಿ ದಯಾನೀಯ ಸ್ಥಿತಿ‌ಯಲ್ಲಿದೆ. ಹೈಕಮಾಂಡ್ ಮಧ್ಯ ಪ್ರವೇಶಿಸಬೇಕು. ಸಾಕು ಇನ್ನೂ ಈ ಮೌನ‌. ನಮ್ಮ ಜಗಳ ಹೆಚ್ಚಾಗಿದ್ದು, ಕಾಂಗ್ರೆಸ್ ಗೆ ಸ್ವಲ್ಪ ಪ್ಲಸ್ ಪಾಯಿಂಟ್ ಆಗಿದೆ. ಒಂದು ವಾರ ಕಾಯಿರಿ.‌ ಎಲ್ಲಾ ಸರಿ ಆಗುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆಪರೇಷನ್ ಸಿಂಧೂರ' ವೇಳೆ ಭಾರತ 'ಇನ್ನಷ್ಟು ಹಾನಿ ಮಾಡಬಹುದಿತ್ತು': ರಾಜನಾಥ್ ಸಿಂಗ್

Goa nightclub fire: ರೆಸ್ಟೋರೆಂಟ್‌ ಮಾಲೀಕ, ಕಾರ್ಯಕ್ರಮ ಆಯೋಜಕರ ವಿರುದ್ಧ FIR; ಸರಪಂಚ್ ಬಂಧನ!

News headlines 07-12-2025 | ಚಳಿಗಾಲದ ವಿಧಾನಮಂಡಲ ಅಧಿವೇಶನ; 21 ವಿಧೇಯಕ ಮಂಡನೆ ಸಾಧ್ಯತೆ; ಮೆಕ್ಕೆಜೋಳ ರೈತರಿಗೆ ಗುಡ್ ನ್ಯೂಸ್; ನಿಷೇಧಿತ ವಸ್ತು ಪೂರೈಕೆಗೆ ಯತ್ನ; ಜೈಲಿನ ವಾರ್ಡನ್ ಬಂಧನ

40 ಸೆಕೆಂಡ್ ನಲ್ಲಿ ಎಲ್ಲವೂ ಭಸ್ಮ; 25 ಜನರ ಸಾವಿಗೆ ಕಾರಣವಾದ ಗೋವಾ ನೈಟ್‌ಕ್ಲಬ್ ಅಗ್ನಿ ಅವಘಡದ ಭಯಾನಕ ಕ್ಷಣ, Video

Shocking: ಫ್ಯಾಮಿಲಿ ಕೋರ್ಟ್ ಆವರಣದಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಓರ್ವನ ಬಂಧನ

SCROLL FOR NEXT