ಡಿಸಿಎಂ ಡಿಕೆಶಿವಕುಮಾರ್-ಸಚಿವ ಕೆಎನ್ ರಾಜಣ್ಣ- ಸಿಎಂ ಸಿದ್ದರಾಮಯ್ಯ 
ರಾಜಕೀಯ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಪೂರ್ಣಾವಧಿ ಸಿಎಂ ಆಗಿ: ಡಿಕೆಶಿಗೆ ಸಚಿವ ರಾಜಣ್ಣ ಸಲಹೆ

ಮಾರ್ಚ್ ನಂತರ ರಾಜ್ಯದಲ್ಲಿ "ಅಧಿಕಾರ ಹಂಚಿಕೆ" ಸೂತ್ರದಡಿಯಲ್ಲಿ ನಾಯಕತ್ವ ಬದಲಾವಣೆಯಾಗುವ ಸಾಧ್ಯತೆ ಇದೆ ಎಂಬ ಊಹಾಪೋಹಗಳ ನಡುವೆಯೇ ರಾಜಣ್ಣ ಅವರ ಈ ಸಲಹೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಸ್ತುತ ಸರ್ಕಾರದ ಉಳಿದ ಎರಡೂವರೆ ವರ್ಷಗಳ ಅವಧಿಗಾಗಿ ಸಿಎಂ ಹುದ್ದೆಯ ಮೇಲೆ ಕಣ್ಣಿಡುವ ಬದಲು, ತಮ್ಮ ನಾಯಕತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಪೂರ್ಣಾವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಸಚಿವ ಕೆ.ಎನ್. ರಾಜಣ್ಣ ಅವರು ಶುಕ್ರವಾರ ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಆಯ್ದ ದಲಿತ ಮತ್ತು ಎಸ್‌ಟಿ ಸಚಿವರೊಂದಿಗೆ ಭೋಜನಕೂಟ ನಡೆಸಿದ ನಂತರ ಕೆಎನ್ ರಾಜಣ್ಣ ಈ ಹೇಳಿಕೆ ನೀಡಿದ್ದು, ಕಾಂಗ್ರೆಸ್‌ನಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಮಾರ್ಚ್ ನಂತರ ರಾಜ್ಯದಲ್ಲಿ "ಅಧಿಕಾರ ಹಂಚಿಕೆ" ಸೂತ್ರದಡಿಯಲ್ಲಿ ನಾಯಕತ್ವ ಬದಲಾವಣೆಯಾಗುವ ಸಾಧ್ಯತೆ ಇದೆ ಎಂಬ ಊಹಾಪೋಹಗಳ ನಡುವೆಯೇ ರಾಜಣ್ಣ ಅವರ ಈ ಸಲಹೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಸಿದ್ದರಾಮಯ್ಯ ಅವರ ಆಪ್ತಮಿತ್ರರೆಂದು ಪರಿಗಣಿಸಲಾದ ಸಹಕಾರ ಸಚಿವ ರಾಜಣ್ಣ ಅವರು ಸಿಎಂ ಸಿಎಂ ಭೋಜನಕೂಟದ ಸಭೆಯಲ್ಲಿ ಭಾಗವಹಿಸಿದ್ದರು.

"ಒಬ್ಬ ಮನುಷ್ಯನಾಗಿ, ಅಧಿಕಾರದ ಆಸೆ ಸಹಜ. ಅವರು(ಶಿವಕುಮಾರ್) ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಆಸಕ್ತಿ ಅಥವಾ ಆಸೆ ಇರುವುದು ತಪ್ಪು ಎಂದು ನನಗೆ ಅನಿಸುವುದಿಲ್ಲ. ಹಿಂದಿನ(2023) ಚುನಾವಣೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನೇತೃತ್ವದಲ್ಲಿ ನಡೆದಿದೆ. ಮತ್ತು ಜನರು ನಮ್ಮನ್ನು(ಕಾಂಗ್ರೆಸ್) ಆಶೀರ್ವದಿಸಿದರು" ಎಂದು ರಾಜಣ್ಣ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಹೈಕಮಾಂಡ್ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿದೆ. ಅವರು ಸಿಎಂ ಆಗಿದ್ದಾರೆ ಮತ್ತು ಅವರು ಬಯಸಿದರೆ ಭವಿಷ್ಯದಲ್ಲಿ ನಾಯಕನನ್ನು ಬದಲಾಯಿಸುವ ಅಧಿಕಾರವನ್ನು ಹೊಂದಿದ್ದಾರೆ ಮತ್ತು ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದರು.

"ಶಿವಕುಮಾರ್ ಅವರ ನೇತೃತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಹೋಗೋಣ ಮತ್ತು ಅವರ ನೇತೃತ್ವದಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವುದರಿಂದ, ಅವರು ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಲಿ, ಈಗ ಎರಡೂವರೆ ವರ್ಷಕ್ಕಾಗಿ ಏಕೆ ಹೋರಾಡಬೇಕು?" ಎಂದರು.

ನಾನು ಕೇವಲ ಎರಡೂವರೆ ವರ್ಷ ಅಧಿಕಾರಕ್ಕಾಗಿ ಹೋರಾಡಬೇಡಿ. ಐದು ವರ್ಷ ಪೂರ್ಣಾವಧಿ ಸಿಎಂ ಆಗಲು ಹೋರಾಡಿ ಎಂದು ಅವರಿಗೆ ಸಲಹೆ ನೀಡುತ್ತನೆ ಎಂದರು.

ನೀವು ಶಿವಕುಮಾರ ಅವರ ಸಂಪುಟದಲ್ಲಿ ಅವಕಾಶ ಸಿಕ್ಕರೆ ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಇನ್ನು ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ಯಾರ ಸಂಪುಟದಲ್ಲೂ ಸಚಿವರಾಗುವ ನಿರೀಕ್ಷೆಯಿಲ್ಲ ಎಂದರು.

ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೋಮ ಹವನದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಮಗೆ ಹೋಮ ಹವನದ ಮೇಲೆ ನಂಬಿಕೆ ಇಲ್ಲ. ಡಿ.ಕೆ ಶಿವಕುಮಾರ್ ಗೆ ದೇವರ ಮೇಲೆ ನಂಬಿಕೆ ಇದೆ, ಅದಕ್ಕೆ ಮಾಡಿಸಿರಬಹುದು. ನನ್ನ ಮೇಲೆಯೂ ಹಿಂದೆ ವಾಮಾಚಾರ ಮಾಡಿಸಿದ್ದರು, ಅದನ್ನು ನಾನು ಅನುಭವಿಸಿದ್ದೆ. ಆದರೆ ಅದನೆಲ್ಲಾ ನಾನು ನಂಬಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಕ್ಬಾಲ್ ಹುಸೇನ್ ಮಾತು ನಂಬಬೇಡಿ, ಅವನಿಗೆ ಮಾತಾಡೋ ಚಟ: 'ಮಾನಸಪುತ್ರ'ನ ವಿರುದ್ಧ ಡಿಕೆಶಿ ಸಿಡಿಮಿಡಿ

Video: ಜ. 6 ರಂದು ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ: ಡಿಕೆಶಿ ‘ಮಾನಸಪುತ್ರ’ನಿಂದ ಸ್ಫೋಟಕ ಹೇಳಿಕೆ

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ನಗರ, ಪಂಚಾಯಿತಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ ಯುಡಿಎಫ್, ತಿರುವನಂತಪುರಂನಲ್ಲಿ NDA ಭದ್ರ!

Lionel Messi: ಮೆಸ್ಸಿ ಫ್ಯಾನ್ಸ್ ದಾಂಧಲೆ; ಆಯೋಜಕರ ಬಂಧನ, ಹಣ ವಾಪಸ್​ಗೆ ಸೂಚನೆ

ಮೇಕೆದಾಟು ಅಣೆಕಟ್ಟು ಯೋಜನೆ: ಇದೇ ಕರ್ನಾಟಕದ ಪ್ರಮುಖ ಗುರಿ! ಡಿಎಂಕೆಯ ದ್ರೋಹವನ್ನು ಕ್ಷಮಿಸಲು ಸಾಧ್ಯವಿಲ್ಲ- ಪಳನಿಸ್ವಾಮಿ

SCROLL FOR NEXT