ರಣದೀಪ್ ಸುರ್ಜೇವಾಲಾ 
ರಾಜಕೀಯ

ಸುರ್ಜೇವಾಲಾ ಕಾರ್ಯವೈಖರಿಗೆ ಕೆರಳಿ ಕೆಂಡವಾದ ಸಿದ್ದು ಬೆಂಬಲಿಗರು: ಉಸ್ತುವಾರಿ ವಿರುದ್ಧ ರಾಹುಲ್ ಗಾಂಧಿಗೆ ದೂರು?

ಸಿದ್ದರಾಮಯ್ಯ ಬೆಂಬಲಿತ ಸಚಿವರು ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಬಹುದು ಎಂದು ಹೇಳಲಾಗುತ್ತಿದೆ. ರಣದೀಪ್ ಸುರ್ಜೇವಾಲ ಅವರನ್ನು ಕರ್ನಾಟಕ ಉಸ್ತುವಾರಿಯಿಂದ ಬದಲಾಯಿಸುವ ಬಗ್ಗೆ ಕೆಲವು ಸಚಿವರು ರಾಹುಲ್ ಗಾಂಧಿಗೆ ದೂರು ನೀಡುವ ಸಾಧ್ಯತೆಯಿದೆ.

ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಕಾರ್ಯವೈಖರಿಯಿಂದ ಬೇಸತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿತ ಸಚಿವರ ಗುಂಪು, ಉಸ್ತುವಾರಿ ಅಥವಾ ಪಕ್ಷದ ಹೈಕಮಾಂಡ್ ಮುಂದೆ ತಲೆಬಾಗುವುದಿಲ್ಲ ಎಂಬ ಸಂದೇಶ ರವಾನಿಸಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಬೆಂಬಲಿತ ಸಚಿವರು ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಬಹುದು ಎಂದು ಹೇಳಲಾಗುತ್ತಿದೆ. ರಣದೀಪ್ ಸುರ್ಜೇವಾಲ ಅವರನ್ನು ಕರ್ನಾಟಕ ಉಸ್ತುವಾರಿಯಿಂದ ಬದಲಾಯಿಸುವ ಬಗ್ಗೆ ಕೆಲವು ಸಚಿವರು ರಾಹುಲ್ ಗಾಂಧಿಗೆ ದೂರು ನೀಡಲಿದ್ದಾರಾ ಎಂಬ ಪ್ರಶ್ನಗೆ ಉತ್ತರಿಸಿದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟವಾಗಿ ನಿರಾಕರಿಸಿದರು.

ಯಾರೋ ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ಕಳಂಕ ತರುತ್ತಿದ್ದಾರೆ. ಮಾಧ್ಯಮಗಳು ಒಂದು ಸುಳ್ಳು ಕಥೆಯನ್ನು ನಂಬುವ ಮೂಲಕ ತನ್ನದೇ ಆದ ವರ್ಚಸ್ಸನ್ನು ಹಾಳು ಮಾಡಿಕೊಳ್ಳಬಾರದು ಎಂದು ಅವರು ಸಲಹೆ ನೀಡಿದರು. ಅದೇ ರೀತಿ, ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಪ್ರತಿಕ್ರಿಯಿಸಿ ಈ ಬಗ್ಗೆ ತನಗೆ ಏನೂ ತಿಳಿದಿಲ್ಲ ಎಂದು ಹೇಳಿದರು. ಸೋಮವಾರ ಸಂಜೆ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಅವರು ಬೆಳಗಾವಿಗೆ ತೆರಳಿದ್ದಾರೆ.

ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ಕೂಡ ಸುರ್ಜೆವಾಲಾ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಇತ್ತೀಚೆಗೆ ನಡೆದ ಸಭೆಯಲ್ಲಿ ಗದ್ದಲ ಸೃಷ್ಟಿಸಿದ್ದರು. ಆದರೆ ಸುರ್ಜೆವಾಲಾ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ ಹಾಗೂ ಪಕ್ಷದ ಹೈಕಮಾಂಡ್‌ಗೆ ದೂರು ನೀಡಿಲ್ಲ ಎಂದು ಸತೀಶ್ ಹೇಳಿದರು.

ಆದರೆ ಸುರ್ಜೆವಾಲಾ ಡಿ.ಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿ ಕೆ ಸುರೇಶ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಸಿದ್ದರಾಮಯ್ಯ ಅವರ ಬೆಂಬಲಿಗರು 'ಸ್ವಾಭಿಮಾನಿ ಸಮಾವೇಶ' ರ್ಯಾಲಿಯನ್ನು ಒಂದು ತಿಂಗಳ ಹಿಂದೆ ಹಾಸನದಲ್ಲಿ ನಡೆಸಲು ಯೋಜಿಸಿದ್ದರಿಂದ ಘರ್ಷಣೆ ಪ್ರಾರಂಭವಾಯಿತು, ನಂತರ ಇದನ್ನು ಕಾಂಗ್ರೆಸ್ ರ್ಯಾಲಿಯಾಗಿ 'ಜನ ಕಲ್ಯಾಣ ಸಮಾವೇಶ'ವಾಗಿ ಪರಿವರ್ತಿಸಲಾಯಿತು.

ಶಿವಕುಮಾರ್ ಮತ್ತು ಸುರ್ಜೆವಾಲಾ ಸಿದ್ದರಾಮಯ್ಯ ಪರ ರ್ಯಾಲಿಯನ್ನು ಪಕ್ಷದ ರ್ಯಾಲಿಯಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಆದರೆ ಈಗ ಸುರ್ಜೆವಾಲಾ ವಿರುದ್ಧ ಕೇಳಿ ಬಂದಿರುವ ಹೊಸ ದೂರು ಏನೆಂದರೆ, ಅವರು ಪ್ರತ್ಯೇಕ ಎಸ್‌ಸಿ/ಎಸ್‌ಟಿ ಶಾಸಕರ ಸಭೆಯನ್ನು ನಡೆಸದಂತೆ ಪರಮೇಶ್ವರ ಅವರಿಗೆ ಸೂಚಿಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆಗಳಿಲ್ಲದೆ, ಸುರ್ಜೆವಾಲಾ ಸಚಿವರಿಗೆ ಸೂಚನೆಗಳನ್ನು ನೀಡುತ್ತಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ.

ಒಂದು ವೇಳೆ ಸುರ್ಜೇವಾಲಾ ವಿರುದ್ಧದ ದೂರು ನಿಜವಾಗಿದ್ದರೆ, ರಾಹುಲ್ ಗಾಂಧಿಯ ಬಳಿಗೆ ಕೊಂಡೊಯ್ಯುವ ಅವರ ಯೋಜನೆ ಸಹಾಯ ಮಾಡುವುದಿಲ್ಲ, ಏಕೆಂದರೆ ಖರ್ಗೆ ಅವರು ಅಧಿಕಾರದಲ್ಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಹೈಕಮಾಂಡ್‌ಗೆ ಅವರ ರೆಕ್ಕೆಗಳನ್ನು ಹೇಗೆ ಕತ್ತರಿಸಬೇಕೆಂದು ತಿಳಿದಿದೆ , ಸಿದ್ದರಾಮಯ್ಯ ಅವರ ಸಂಪುಟ ಪುನರಾಚನೆ ಅಥವಾ ವಿಸ್ತರಣೆ ಸಂದರ್ಭದಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದೆ ಎಂದು ತಿಳಿಸಿದ್ದಾರೆ . ಎಸ್‌ಸಿ ಸಮುದಾಯದ ನಾಯಕರಲ್ಲಿ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಮತ್ತು ಬಂಗಾರಪೇಟೆ ಶಾಸಕ ಎಸ್‌ಎನ್ ನಾರಾಯಣಸ್ವಾಮಿ ಮುಂಚೂಣಿಯಲ್ಲಿದ್ದಾರೆ ಎಂದು ಅವರು ಹೇಳಿದರು.

ಸುರ್ಜೇವಾಲಾ ಆಗಿರಲಿ ಅಥವಾ ಖರ್ಗೆ ಆಗಿರಲಿ, ಸಚಿವರಿಗೆ ಡೋಂಟ್ ಕೇರ್. ಏಕೆಂದರೆ ಪಕ್ಷವು ಮತ್ತೆ ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೆ ತಿಳಿದಿದೆ, ಹೀಗಾಗಿ ಪ್ರಸ್ತುತ ಸರ್ಕಾರದಲ್ಲಿ ಅಧಿಕಾರವನ್ನು ಪಡೆಯಲು ಬಯಸುತ್ತಾರೆ. ಅದಕ್ಕಾಗಿಯೇ ಅವರು ಮೂರು ಡಿಸಿಎಂಗಳ ರಚನೆ, ಮುಖ್ಯಮಂತ್ರಿ ಬದಲಾವಣೆ ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆಗಳಿಗಾಗಿ ಹೋರಾಡುತ್ತಿದ್ದಾರೆ" ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT