ಜಗದೀಶ್ ಶೆಟ್ಟರ್ ಮತ್ತು ಪ್ರಿಯಾಂಕ್ ಖರ್ಗೆ 
ರಾಜಕೀಯ

ದೇಶಕ್ಕಾಗಿ RSS ನ ಕನಿಷ್ಠ 10 ಕೊಡುಗೆ ತಿಳಿಸಿ: ಶೆಟ್ಟರ್ ಗೆ ತಿವಿದ ಪ್ರಿಯಾಂಕ್ ಖರ್ಗೆ

ಶೆಟ್ಟರ್ ಅವರೇ, RSS ಅಸ್ತಿತ್ವಕ್ಕೆ ಬಂದಿದ್ದು ನೂರು ವರ್ಷಗಳ ಹಿಂದೆ. ಆದರೆ ಸಾವಿರಾರು ವರ್ಷಗಳಿಂದ ‘ಹಿಂದೂ’ ಎಂದು ಗುರುತಿಸಿಕೊಂಡಿರುವ ಧರ್ಮಾಚರಣೆ ಅಸ್ತಿತ್ವದಲ್ಲಿದೆ. ಈ ಸತ್ಯ ನಿಮಗೆ ತಿಳಿದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು: ಈ ದೇಶದ ಏಳಿಗೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ನೀಡಿದ ಕನಿಷ್ಠ ಹತ್ತು ಕೊಡುಗೆಗಳನ್ನು ಸಂಸದ ಜಗದೀಶ ಶೆಟ್ಟರ್ ಅವರು ತಿಳಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಆರ್‌ಎಸ್‌ಎಸ್ ಇಲ್ಲದಿದ್ದರೆ ಭಾರತ ಮುಸ್ಲಿಂ ರಾಷ್ಟ್ರ ಆಗುತ್ತಿತ್ತು ಎಂದು ಇತ್ತೀಚೆಗೆ ಜಗದೀಶ್ ಶೆಟ್ಟರ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ ಸಾಮಾಜಿಕ ಮಾದ್ಯಮ ಎಕ್ಸ್ ನಲ್ಲಿ ಪೋಸ್ಚ್ ಹಂಚಿಕೊಂಡಿದ್ದಾರೆ. ಶೆಟ್ಟರ್ ಅವರೇ, RSS ಅಸ್ತಿತ್ವಕ್ಕೆ ಬಂದಿದ್ದು ನೂರು ವರ್ಷಗಳ ಹಿಂದೆ. ಆದರೆ ಸಾವಿರಾರು ವರ್ಷಗಳಿಂದ ‘ಹಿಂದೂ’ ಎಂದು ಗುರುತಿಸಿಕೊಂಡಿರುವ ಧರ್ಮಾಚರಣೆ ಅಸ್ತಿತ್ವದಲ್ಲಿದೆ. ಈ ಸತ್ಯ ನಿಮಗೆ ತಿಳಿದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ನಾಯಕರಿಗೆ ಆರ್‌ಎಸ್‌ಎಸ್ ಹೊಗಳುವುದು ಅನಿವಾರ್ಯವಾಗಿದೆ. ಆರ್‌ಎಸ್‌ಎಸ್ ಅವರಿಗಂತೂ ಬಸವಣ್ಣನವರ ತತ್ವದಲ್ಲಿ ನಂಬಿಕೆ ಇಲ್ಲ. ತಮಗೂ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ. ನಿಜವಾಗಿಯೂ ಬಸವ ತತ್ವದಲ್ಲಿ ನಂಬಿಕೆ ಇರುವವರು ಆರ್‌ಎಸ್‌ಎಸ್‌ ಅನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಹಿಂದೆ, ಇಂದು, ಎಂದಿಗೂ ಈ ಭಾರತ ಜಾತ್ಯತೀತ ತತ್ವಗಳ ನೆಲವಾಗಿದೆ, ಮುಂದೆಯೂ ಜಾತ್ಯತೀತ ನೆಲವಾಗಿಯೇ ಇರಲಿದೆ ಎಂದು ತಿವಿದಿದ್ದಾರೆ. ಹಿಂದೆ, ಇಂದು, ಎಂದಿಗೂ ಈ ಭಾರತ ಜಾತ್ಯತೀತ ತತ್ವಗಳ ನೆಲವಾಗಿದೆ, ಮುಂದೆಯೂ ಜಾತ್ಯತೀತ ನೆಲವಾಗಿಯೇ ಇರಲಿದೆ.

ಇಷ್ಟಕ್ಕೂ, ಹಿಂದೂ ಧರ್ಮೋದ್ದಾರದಲ್ಲಿ, ಈ ದೇಶದ ಏಳಿಗೆಯಲ್ಲಿ RSS ನೀಡಿದ ಕನಿಷ್ಠ ಹತ್ತು ಕೊಡುಗೆಗಳನ್ನು ಸನ್ಮಾನ್ಯ ಶೆಟ್ಟರ್ ಅವರು ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ, ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಉಪ್ಪಾರ ಸಮುದಾಯ STಗೆ ಸೇರ್ಪಡೆ: ಶೀಘ್ರದಲ್ಲೇ ಕೇಂದ್ರಕ್ಕೆ ಶಿಫಾರಸು - ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್, ಚಾಮುಂಡಿ ಬೆಟ್ಟವನ್ನು 'ಟೂಲ್‌ಕಿಟ್' ಆಗಿ ಬಳಸುತ್ತಿದೆ: ಆರ್ ಅಶೋಕ್

ಉಡುಪಿ: ನಾಪತ್ತೆಯಾಗಿದ್ದ ಬೆಂಗಳೂರು ಮಹಿಳೆಯ ಶವ ಸೌಪರ್ಣಿಕಾ ನದಿಯಲ್ಲಿ ಪತ್ತೆ!

SCROLL FOR NEXT