ಸಚಿವ ಸಂತೋಷ್ ಲಾಡ್ 
ರಾಜಕೀಯ

ಸಿಎಂ ಸ್ಥಾನಕ್ಕೆ ಖರ್ಗೆ 'ಮೋಸ್ಟ್ ಎಲಿಜಿಬಲ್ ಪರ್ಸನ್': ಸಚಿವ ಸಂತೋಷ್ ಲಾಡ್

ಖರ್ಗೆ ಸಾಹೇಬ್ರು ನಡೆದುಕೊಂಡು ಬಂದಂತಹ ದಾರಿ, ಅವರು ಪಕ್ಷಕ್ಕೆ ತೋರಿಸಿರುವ ನಿಷ್ಠೆ, ಇಡೀ ಭಾರತ ದೇಶದಲ್ಲಿ ಅವರಂತಹ ಇನ್ನೋರ್ವ ವ್ಯಕ್ತಿ ಸಿಗಲಾರರು.

ಬೆಳಗಾವಿ: ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅರ್ಹ ವ್ಯಕ್ತಿ ಎಂದು ಸಚಿವ ಸಂತೋಷ್ ಲಾಡ್ ಅವರು ಸೋಮವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಗುವ ಅವಕಾಶ ಸಿಗಲಿಲ್ಲ ಎಂದು ಖರ್ಗೆಯವರು ಬೇರೆಯವರಿಗೆ ಉದಾಹರಣೆ ನೀಡಲು ಹೇಳಿದ್ದಾರೆ. ಇಂತಹ ಅವಕಾಶ ತಪ್ಪಿದರೂ ನಾನು ಎಐಸಿಸಿ ಅಧ್ಯಕ್ಷನಾಗಿದ್ದೇನೆ ಎಂಬ ಅರ್ಥದಲ್ಲಿ ಹೇಳಿದ್ದಾರೆ. ಅದನ್ನು ಯಾವ ರೀತಿಯಲ್ಲಿ ಬೇಕಾದರೂ ಅರ್ಥೈಸಿಕೊಳ್ಳಬಹುದು. ನನ್ನ ಪ್ರಕಾರ, ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎನ್ನುವ ರೀತಿಯಲ್ಲಿ ಖರ್ಗೆ ಸಾಹೇಬ್ರು ಹೇಳಿದ್ದು ಎಂದು ಹೇಳಿದರು.

ಮುಖ್ಯಮಂತ್ರಿ ಹುದ್ದೆಗೆ ನನ್ನ ಪ್ರಕಾರ ಮಲ್ಲಿಕಾರ್ಜುನ ಖರ್ಗೆಯವರು ಅತ್ಯಂತ ಅರ್ಹ ವ್ಯಕ್ತಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಖರ್ಗೆ ಸಾಹೇಬ್ರು ನಡೆದುಕೊಂಡು ಬಂದಂತಹ ದಾರಿ, ಅವರು ಪಕ್ಷಕ್ಕೆ ತೋರಿಸಿರುವ ನಿಷ್ಠೆ, ಇಡೀ ಭಾರತ ದೇಶದಲ್ಲಿ ಅವರಂತಹ ಇನ್ನೋರ್ವ ವ್ಯಕ್ತಿ ಸಿಗಲಾರರು.

2004ರಲ್ಲಿ ಅವರ ಜೊತೆಗೆ ತಿರುಗಾಡುವ ಅವಕಾಶ ಸಿಕ್ಕಿತ್ತು, ಬೆಳಗಾವಿಯಲ್ಲಿ ಮೊದಲ ಬಾರಿಗೆ ಅಧಿವೇಶನ ನಡೆದಿತ್ತು. ರಾತ್ರಿ 10 ಗಂಟೆಯಾದರೂ ಅವರು ಸದನದಲ್ಲಿ ಇರುತ್ತಿದ್ದರು. ಸದನದಲ್ಲಿ ಸುಮ್ಮನೆ ಅವರು ಕಾಟಾಚಾರಕ್ಕೆ ತಮ್ಮನ್ನು ತೊಡಗಿಸಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದರು,

ಮಹಾದಾಯಿ ವಿವಾದದ ಕುರಿತು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಅಧಿಕಾರದಲ್ಲಿದ್ದರೂ ಮಹಾದಾಯಿ ನದಿ ವಿವಾದವನ್ನು ಪರಿಹರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಕೇಂದ್ರ ಸರ್ಕಾರ ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಈಗ, ಟೆಂಡರ್‌ಗಳನ್ನು ನೀಡಲಾಗಿರುವುದರಿಂದ ಸಿಎಂ ಕೆಲಸ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ, ಯೋಜನೆ ಪ್ರಾರಂಭವಾಗಿದೆ ಎಂದು ಹೇಳಿಕೊಂಡು ಸಿಹಿತಿಂಡಿಗಳನ್ನು ವಿತರಿಸಿತು. ಈಗೇಕೆ ಯೋಜನೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಇದಕ್ಕೆ ಉತ್ತರಿಸಲಿ ಎಂದರು.

ಬಳಿಕ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, 11 ವರ್ಷಗಳಿಂದ ಇಡೀ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ರಾಷ್ಟ್ರೀಯ ‌ಮಾಧ್ಯಮಗಳ ಪ್ರೈಮ್ ಟೈಮಲ್ಲಿ ಏನು ಬರುತ್ತದೋ ಅದನ್ನೇ ನೋಡಿ ಸುಮ್ಮನಾಗುವುದು. ರಾಷ್ಟ್ರೀಯ ಮಾಧ್ಯಮದ ಕೆಲ ನಿರೂಪಕರು ಬಿಜೆಪಿ ವಕ್ತಾರರಂತೆ ಮಾತನಾಡುತ್ತಾರೆ. ಪಾರ್ಲಿಮೆಂಟ್ ಸೆಷನ್ ನಡೆದಿದೆ. ಇಂತಹ ಸಮಯದಲ್ಲಿ ಪ್ರಧಾನಿ ಅವರು ವಿದೇಶಕ್ಕೆ ಏಕೆ ಹೋಗಬೇಕಿತ್ತು. 90 ದೇಶ ಒಳಗೊಂಡಂತೆ 180 ಸಲ ಮೋದಿ ಅವರು ವಿದೇಶ ಪ್ರವಾಸ ಮಾಡಿದ್ದಾರೆ.

ಪಾರ್ಲಿಮೆಂಟ್ ಸೆಷನ್ ನಡೆಯಬೇಕಾದರೆ ವಿದೇಶ ಪ್ರವಾಸ ಏಕೆ ಮಾಡಬೇಕು? ಸದನದಲ್ಲಿ ಇದ್ದು ಉತ್ತರ ಕೊಡಬಾರದಾ? ಇದನ್ನು ಕೇಳುವ ಅವಕಾಶ ಇಲ್ಲವೇ? ಬಡವರಿಗೆ,‌ ಕಟ್ಟ ಕಡೆಯ ವ್ಯಕ್ತಿಗೂ ಪ್ರಶ್ನಿಸುವ ಅಧಿಕಾರ ಇದೆ, ಆದರೆ ಅವರಿಗೆ ಕೇಳಬಾರದು. ಮೋದಿ ಸಾಹೇಬರನ್ನು ಯಾರೂ, ಏನೂ ಪ್ರಶ್ನಿಸಬಾರದು, ಬಿಜೆಪಿ ವಿರುದ್ಧ ಮಾತನಾಡಬಾರದು ಅಷ್ಟೇ ಎಂದು ಕಿಡಿಕಾರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT