ಜಿ.ಟಿ ದೇವೇಗೌಡ 
ರಾಜಕೀಯ

ಕಾಂಗ್ರೆಸ್‌ ಸರ್ಕಾರ ಸುಭದ್ರ, ಅದೃಷ್ಟ ಒಲಿದು ಬಂದಾಗ ಡಿಕೆಶಿ CM ಆಗ್ತಾರೆ: ಜಿ.ಟಿ ದೇವೇಗೌಡ

1996 ರಿಂದ 2004 ರವರೆಗೆ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಅಂದುಕೊಂಡು ಬಂದರೂ ಅದು ಆಗಲಿಲ್ಲ. ಈಗ ಡಿ ಕೆ ಶಿವಕುಮಾರ್ ನಡೆ ಬಗ್ಗೆ ಹೆಚ್ಚಿನ ವಿಚಾರ ನನಗೆ ಗೊತ್ತಿಲ್ಲ.

ಮೈಸೂರು: ಸದ್ಯ ಕಾಂಗ್ರೆಸ್‌ ಸರ್ಕಾರ ಸುಭದ್ರವಾಗಿದೆ. ಅದೃಷ್ಟ ಒಲಿದು ಬಂದಾಗ ಡಿ.ಕೆ ಶಿವಕುಮಾರ್‌ ಸಿಎಂ ಆಗುತ್ತಾರೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಭಾರೀ ಭದ್ರವಾಗಿದೆ. ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಇದ್ದಾರೆ. 138 ಸ್ಥಾನದಿಂದ ಕಾಂಗ್ರೆಸ್ ಸುಭ್ರದ್ರವಾಗಿದೆ.

ಅದೃಷ್ಟ ಒಲಿದು ಬಂದಾಗ ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರೆ. 1996 ರಿಂದ 2004 ರವರೆಗೆ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಅಂದುಕೊಂಡು ಬಂದರೂ ಅದು ಆಗಲಿಲ್ಲ. ಈಗ ಡಿ ಕೆ ಶಿವಕುಮಾರ್ ನಡೆ ಬಗ್ಗೆ ಹೆಚ್ಚಿನ ವಿಚಾರ ನನಗೆ ಗೊತ್ತಿಲ್ಲ. ಆ ರಾಜಕೀಯದ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಡಿ ಕೆ ಶಿವಕುಮಾರ್ ಜೊತೆ ಮಾತನಾಡಿಲ್ಲ' ಎಂದು ಮೈಸೂರಿನಲ್ಲಿ ಶಾಸಕ ಜಿ ಟಿ ದೇವೇಗೌಡ ಹೇಳಿದ್ದಾರೆ.

ನನ್ನ ಕ್ಷೇತ್ರ ತುಂಬಾ ವಿಶಾಲವಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಸಮಸ್ಯೆಗಳ ಆಗರವಾಗಿದೆ. ಮಹಾನಗರ ಪಾಲಿಕೆಯ ಹಲವು ವಾರ್ಡುಗಳು ಸೇರಿದಂತೆ ರಿಂಗ್ ರಸ್ತೆ ಸುತ್ತಲಿನ ಪ್ರದೇಶಗಳು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸೇರಿವೆ.

ಹಾಗಾಗಿ ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸಲು ಹೆಚ್ಚು ಆದ್ಯತೆ ನೀಡಿದ್ದೇನೆಂದು ಸಮಜಾಯಿಷಿ ನೀಡಿದರು. ಮುಂಬರುವ ಜಿಲ್ಲಾ ತಾಲ್ಲೂಕು ಪಂಚಾಯ್ತಿ ಚುನಾವಣೆ ವೇಳೆ ಜೆಡಿಎಸ್ ಪರ ಪ್ರಚಾರ ಕೈಗೊಳ್ಳುತ್ತೀರಾ? ಎಂಬ ಪ್ರಶ್ನೆಗೆ ಚುನಾವಣೆ ಘೋಷಣೆ ಆದಾಗ ನೋಡೋಣ' ಎಂದು ಪ್ರತಿಕ್ರಿಯಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯನ್ನು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದೆ. ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ಮಾಡ್ತಿದ್ದೇನೆ.

ರಾಜ್ಯ ಬಜೆಟ್ ಬರ್ತಿದೆ. ಯಾವೆಲ್ಲ ಕೆಲಸ ಆಗಬೇಕು, ಕುಡಿಯುವ ನೀರು, ನಗರಾಭಿವೃದ್ದಿ ಪ್ರಾಧಿಕಾರ ಸ್ಥಳೀಯ ಪಂಚಾಯತಿಗಳಿಗೆ ವರ್ಗಾವಣೆ ಆಗಿದೆ. ಆದರೆ ಸ್ಥಳೀಯ ಆಡಳಿತದಲ್ಲಿ ಹಣವಿಲ್ಲ. ಹೀಗಾಗಿ ಸಿಎಂ ಗಮನಕ್ಕೆ ಈ ವಿಚಾರ ತರುತ್ತೇನೆ. ಅದಕ್ಕೂ ಮುನ್ನ ಸಭೆ ಮಾಡುತ್ತಿದ್ದೇನೆ' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾಚಿಕೆಗೇಡಿನ ಸಂಗತಿ'; ಎಲ್ಲಾ ಪಕ್ಷಗಳ ದೊಡ್ಡ ಕುಳಗಳು 'ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿ': ಪರಮೇಶ್ವರ್

MP: ಗಣರಾಜ್ಯೋತ್ಸವದಂದು ತಟ್ಟೆಗಳ ಬದಲಿಗೆ ಹಾಳೆಗಳ ಮೇಲೆ ಮಕ್ಕಳಿಗೆ ಉಪಹಾರ, ಶಿಕ್ಷಣ ವ್ಯವಸ್ಥೆಗೆ ನಾಚಿಕೆಗೇಡು!

U19 ವಿಶ್ವಕಪ್: ಜಿಂಬಾಬ್ವೆ ತಂಡವನ್ನು 204 ರನ್ ಗಳಿಂದ ಮಣಿಸಿದ ಭಾರತ; ಸೂಪರ್ ಸಿಕ್ಸ್‌ನಲ್ಲಿ ನಂಬರ್ 1 ಸ್ಥಾನ!

ಉಡುಪಿ: ದೋಣಿ ಮುಳುಗಿ ಮೂವರು ಪ್ರವಾಸಿಗರು ಸಾವು; ಜಿಲ್ಲಾಡಳಿತದಿಂದ ಸುರಕ್ಷತಾ ಕ್ರಮ

FTA ಗೆ ಸಹಿ ಬೆನ್ನಲ್ಲೇ ಮಹತ್ವದ ಘೋಷಣೆ: ಭಾರತದಲ್ಲಿ ಮೊದಲ ಲೀಗಲ್ ಗೇಟ್‌ವೇ ಕಚೇರಿ ತೆರೆಯಲಿರುವ EU

SCROLL FOR NEXT