ಸಂತೋಷ್ ಲಾಡ್ 
ರಾಜಕೀಯ

ಜನರಿಗೆ ಕಾಫಿ-ಟೀ ಏಕೆ ಕುಡಿಸ್ತೀರಾ? ಮೂತ್ರ ಕುಡಿಸಿ: ಸಂತೋಷ್ ಲಾಡ್ ಹೇಳಿಕೆಗೆ ವಿಜಯೇಂದ್ರ ಆಕ್ರೋಶ

ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ…. ಎಂಬಂತೆ ಸಂತೋಷ್ ಲಾಡ್ ಅವರ ಎಲುಬಿಲ್ಲದ ನಾಲಿಗೆಯಲ್ಲಿ ಹೊಲಸು ಮಾತುಗಳು ಹೊಮ್ಮತ್ತಿದೆ ಎಂದಿದ್ದಾರೆ.

ಬೆಂಗಳೂರು: ಪದ ಸಂಸ್ಕ್ರತಿ ವ್ಯಕ್ತಿತ್ವದ ಮುಖಬಿಂಬ ಪ್ರತಿಬಿಂಬಿಸುತ್ತದೆ ಪದಸಂಸ್ಕೃತಿಯನ್ನು ಮರೆತ ಸಚಿವ ಸಂತೋಷ್ ಲಾಡ್ ಅವರು ತಮ್ಮ ಕೀಳು ಮಟ್ಟದ ವ್ಯಕ್ತಿತ್ವವನ್ನು ಅನಾವರಣ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹರಿಹಾಯಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ವಿಜಯೇಂದ್ರ ಅವರು, ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ….’ ಎಂಬಂತೆ ಸಂತೋಷ್ ಲಾಡ್ ಅವರ ಎಲುಬಿಲ್ಲದ ನಾಲಿಗೆಯಲ್ಲಿ ಹೊಲಸು ಮಾತುಗಳು ಹೊಮ್ಮತ್ತಿದೆ ಎಂದಿದ್ದಾರೆ.

ಹೆಮ್ಮೆಯ ಕರ್ನಾಟಕ ಸರ್ಕಾರದ ಜವಾಬ್ದಾರಿಯುತ ಮಂತ್ರಿ ಸ್ಥಾನದಲ್ಲಿ ಕುಳಿತು ಅದರ ಘನತೆಗೆ ಕೊಚ್ಚೆ ಬಳಿಯುವ ಮಾತುಗಳನ್ನಾಡುತ್ತಿರುವ ಸಂತೋಷ್ ಲಾಡ್ ರಂಥವರು @INCKarnataka ಸರ್ಕಾರದ ಸಚಿವರು ಎಂದು ಹೇಳಿಕೊಳ್ಳಲು ಮಾತ್ರ ಲಾಯಕ್ಕಾಗಿದ್ದಾರೆಯೇ ಹೊರತು, ಕರ್ನಾಟಕ ಸರ್ಕಾರದ ಸಚಿವರು ಎಂದು ಹೇಳಿಕೊಳ್ಳುವ ಯಾವ ಯೋಗ್ಯತೆಯೂ ಇಲ್ಲ ಎನ್ನುವುದನ್ನು ಅವರ ಈ ಹಿಂದಿನ ಮಾತುಗಳು ಹಾಗೂ ನಡವಳಿಕೆಗಳು ಸಾಕ್ಷೀಕರಿಸಿದ್ದವು ಎಂದು ಲೇವಡಿ ಮಾಡಿದ್ದಾರೆ.

ದೆಹಲಿ ಬಾಂಬ್ ಸ್ಪೋಟ ಪ್ರಕರಣದ ಹಿನ್ನೆಲೆಯಲ್ಲಿ ಬೇಜವಾಬ್ದಾರಿ ಟೀಕೆ ಮಾಡುವ ಭರದಲ್ಲಿ ಜನರಿಗೆ ಕಾಫಿ, ಟೀ ಏಕೆ ಕುಡಿಸ್ತೀರಾ.... ಕುಡಿಸಿ ಎಂಬ ಕೀಳುಮಟ್ಟದ ಪದ ಬಳಸುವ ಮೂಲಕ ಕನ್ನಡದ ಪದ ಸಂಸ್ಕ್ರತಿಯನ್ನು ಮಲಿನಗೊಳಿಸಿದ್ದಾರೆ, ಕನ್ನಡಿಗರ ಸಂಸ್ಕಾರ ನಡವಳಿಕೆಯನ್ನು ಅವಮಾನಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ತಮ್ಮ ಸರ್ಕಾರದ ಘನತೆಯ ಕುರಿತು ಕನಿಷ್ಠ ಬದ್ಧತೆಯಿದ್ದರೆ ಈ ಕೂಡಲೇ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ವಜಾ ಗೊಳಿಸುವ ಮೂಲಕ ರಾಜ್ಯದ ಗೌರವ ಉಳಿಸಲಿ ಎಂದು ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸ್ಫೋಟ ಸಂತ್ರಸ್ತರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ, ಸಂಜೆ 5.30ಕ್ಕೆ CCS ತುರ್ತು ಸಭೆ!

ಆಕೆ ಹಿಂದೆಂದೂ ಬುರ್ಖಾ ಸಹ ಧರಿಸಿರಲಿಲ್ಲ, ಶಾಹೀನ್ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾಳೆ ಎಂಬುದು ನಮಗೆ ನಂಬಲು ಇನ್ನೂ ಅಸಾಧ್ಯ- ಮಾಜಿ ಪತಿ, ಸಹೋದರ

'ಸುಮ್ನೆ ಗಾಸಿಪ್ ಬೇಡ.. ಅವಳು ನನ್ನ ಹೆಂಡತಿ': ಒಂದೇ ವರ್ಷದ ಅವಧಿಯಲ್ಲಿ Rashid Khan 2ನೇ ಮದುವೆ!

ದೆಹಲಿ ಸ್ಫೋಟ ಕೇಂದ್ರ 'ಸರ್ಕಾರದ ವೈಫಲ್ಯ': ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

H-1B visa: 'ನಮ್ಮಲ್ಲಿ ಕೊರತೆ ಇದೆ, ವಿದೇಶಿ ಪ್ರತಿಭೆಗಳೂ ಬೇಕು'; ಅಮೆರಿಕ ಅಧ್ಯಕ್ಷ ಟ್ರಂಪ್ ಯೂಟರ್ನ್

SCROLL FOR NEXT