ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ 
ರಾಜಕೀಯ

Karnataka Politics: 'ನನ್ ಹತ್ರ ಯಾವ್ ಬಣ್ಣನೂ ಇಲ್ಲ.. ನಾನು ಎಲ್ಲ 140 ಶಾಸಕರಿಗೂ ಅಧ್ಯಕ್ಷ': ಡಿಕೆ ಶಿವಕುಮಾರ್, Video

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಬಣದ ಸಚಿವ ರಹಸ್ಯ ಸಭೆ ನಡೆಸಿದ್ದು, ಕರ್ನಾಟಕ ಕಾಂಗ್ರೆಸ್​​​ನಲ್ಲಿ ಮಹತ್ವದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಹಲವು ಕೇಳಿಬರುತ್ತಿರುವ ನವೆಂಬರ್ ಕ್ರಾಂತಿ ಕುರಿತು ಕುತೂಹಲಕಾರಿ ಹೇಳಿಕೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, 'ನನ್ ಹತ್ರ ಯಾವ್ ಬಣ್ಣನೂ ಇಲ್ಲ.. ನಾನು ಎಲ್ಲ 140 ಶಾಸಕರಿಗೂ ಅಧ್ಯಕ್ಷ' ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​ ಸರ್ಕಾರಕ್ಕೆ ಎರಡೂವರೆ ವರ್ಷ ಭರ್ತಿಯಾಗುತ್ತಿದ್ದಂತೆ ಅಧಿಕಾರ ಹಂಚಿಕೆಯ ಜಟಾಪಟಿ ನಡೆದಿದ್ದು, ಡಿಕೆ ಶಿವಕುಮಾರ್ ಬಣದ ಕೆಲ ಸಚಿವರು, ಶಾಸಕರು ಹೈಕಮಾಂಡ್ ನಾಯಕರ ಭೇಟಿಗೆ ದೆಹಲಿಗೆ ತೆರಳಿದ್ದಾರೆ.

ಇದರ ಬೆನಲ್ಲೇ ಇತ್ತ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಬಣದ ಸಚಿವ ರಹಸ್ಯ ಸಭೆ ನಡೆಸಿದ್ದು, ಕರ್ನಾಟಕ ಕಾಂಗ್ರೆಸ್​​​ನಲ್ಲಿ ಮಹತ್ವದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಇನ್ನು ಈ ಬಣ ರಾಜಕೀಯ ಚಟುವಟಿಕೆಗಳ ಬಗ್ಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ್ದಾರೆ.

ನಾನು ಎಲ್ಲ 140 ಶಾಸಕರಿಗೂ ಅಧ್ಯಕ್ಷ

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಕಳೆದ ಎರಡೂವರೆ ವರ್ಷಗಳಿಂದ ಸಾಕಷ್ಟು ಔತಣಕೂಟ ನಡೆದಿದೆ. ನಾಲ್ವರು ಡಿಸಿಎಂ ಮಾಡಬೇಕು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಿಸಬೇಕು.

ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳಬೇಕೆಂದು ಸಾಕಷ್ಟು ಡಿನ್ನರ್ ಸಭೆ ನಡೆದಿವೆ. ಸಚಿವರ ಡಿನ್ನರ್ ಕೂಡ ಅದರ ಒಂದು ಭಾಗವೇ ಇದು ಎಂದು ಮಾರ್ಮಿಕವಾಗಿ ಹೇಳಿದರು.

ನನ್ ಹತ್ರ ಯಾವ್ ಬಣ್ಣನೂ ಇಲ್ಲ. ನನ್ ಹತ್ರ ಯಾವ್ ಬಣನೂ ಇಲ್ಲ.. ನಾನು 140 ಶಾಸಕರಿಗೆ ಅಧ್ಯಕ್ಷ. ನನಗೆ 140 ಜನನೂ ಪ್ರಮುಖ. ನಾನು ಯಾವ ಗುಂಪನ್ನೂ ಕರೆದುಕೊಂಡು ಹೋಗಲು ಇಷ್ಟವಿಲ್ಲ. ಬಣ ರಾಜಕೀಯ ನನ್ನ ರಕ್ತದಲ್ಲೇ ಇಲ್ಲ ಎಂದರು.

ಇದೇ ವೇಳೆ 5 ವರ್ಷ ನಾನೇ ಸಿಎಂ ಆಗಿರುತ್ತೇನೆಂದು ಸಿದ್ದರಾಮಯ್ಯ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯ ಸಂಪುಟ ಪುನಾರಚನೆ ಮಾಡಬೇಕು ಎಂದು ಹೇಳಿದ್ದಾರೆ. ಹೀಗಾಗಿ ಎಲ್ಲ ಶಾಸಕರೂ ತಮಗೆ ಮಂತ್ರಿ ಸ್ಥಾನಬೇಕು ಎಂದು ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಕೇಂದ್ರದ ನಾಯಕರನ್ನು ಭೇಟಿ ಮಾಡಿ ತಮ್ಮ ಮನವಿ ಮಾಡುತ್ತಿದ್ದಾರೆ ಎಂದರು.

ಅಂತೆಯೇ ಸಿಎಂ ಸಿದ್ದರಾಮಯ್ಯ ಅವರಿಗೆ ಶುಭಾಶಯ ಹೇಳುತ್ತೇನೆ. ಅವರಿಗೆ ಎಲ್ಲವೂ ಒಳ್ಳೆಯದಾಗಲಿ ಎಂದು ಹಾರೈಸಿದರು. ಈ ಮೂಲಕ ಸಿಎಂ ಆಗಿ ತಾವೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದುಬೈ ಏರ್ ಶೋ ವೇಳೆ ದುರಂತ; ಭಾರತದ ತೇಜಸ್ ಯುದ್ಧ ವಿಮಾನ ಪತನ, ಪೈಲಟ್ ಸಾವು! ತನಿಖೆಗೆ IAF ಆದೇಶ

ರಾಜ್ಯ ರಾಜಕಾರಣದಲ್ಲಿ ದಿಢೀರ್ ಬೆಳವಣಿಗೆ; ಶಾಸಕರಿಗೆ ಡಿಸಿಎಂ ಗಾಳ?: ಪರಪ್ಪನ ಅಗ್ರಹಾರಕ್ಕೆ ಡಿಕೆ ಶಿವಕುಮಾರ್ ಭೇಟಿ!

ಹೈಕಮಾಂಡ್ ಎಂದೂ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಲ್ಲ; ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ

ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಹೇಳಿಕೆ ನೀಡಬೇಡಿ: ಕಾಂಗ್ರೆಸ್ ಶಾಸಕರಿಗೆ ಸುರ್ಜೇವಾಲ ವಾರ್ನ್

'ನಾನು ಇನ್ನು ಮುಂದೆ ಈ SIR ಕೆಲಸ ಮಾಡಲು ಸಾಧ್ಯವಿಲ್ಲ': ಕೆಲಸದ ಒತ್ತಡದಿಂದ ಗುಜರಾತ್ ಶಿಕ್ಷಕ ಆತ್ಮಹತ್ಯೆ

SCROLL FOR NEXT