ನವದೆಹಲಿ: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆ ಕದನ ಕ್ಷಣಕ್ಕೊಂದು ಕುತೂಹಲ ಕೆರಳಿಸುತ್ತಿದೆ.ಸಿದ್ದರಾಮಯ್ಯ ಬಣ ಮತ್ತು ಡಿ ಕೆ ಶಿವಕುಮಾರ್ ಬಣ ಎಂದು ಬಣಗಳ ನಡುವೆ ಕಿತ್ತಾಟ ನಡೆಯುತ್ತಿದೆ.
ಈ ಮಧ್ಯೆ ಡಿ ಕೆ ಶಿವಕುಮಾರ್ ಅವರನ್ನು ಅಮಿತ್ ಶಾ ಅವರು ಸಂಪರ್ಕಿಸಿದ್ದಾರೆ ಎಂಬ ಸುದ್ದಿ, ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತವೆ. ಮಾಜಿ ಸಚಿವ ಕೆಎನ್ ರಾಜಣ್ಣ ಅವರ ಪುತ್ರ ಎಂಎಲ್‌ಸಿ ರಾಜೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಇತ್ತೀಚೆಗೆ ಭೇಟಿ ಮಾಡಿದ್ದಾರೆ. ಇದು ಹೊಸ ಚರ್ಚೆಗೆ ಗ್ರಾಸವಾಗಿದೆ.
ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಇದು ಸಹಜವಾಗಿ ಕರ್ನಾಟಕದ ರಾಜಕಾರಣದಲ್ಲಿ ಕುತೂಹಲ ಎಬ್ಬಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಮತ್ತಿತರ ಕೂಗಿನ ನಡುವೆ ರಾಜಣ್ಣ ಪುತ್ರನ ದೆಹಲಿ ಪ್ರಯಾಣ ಹಾಗೂ ದಿಢೀರನೆ ಅಮಿತ್ ಶಾ ಅವರ ಭೇಟಿ ಸಹಜವಾಗಿಯೇ ಕುತೂಹಲ ಕೆರಳಿಸಿದೆ.
ಇತ್ತೀಚೆಗೆ, ರಾಜಣ್ಣ ಅವರು, "ಮುಂದೆ ನಾನು ಯಾವ ಪಕ್ಷದ ಬಾವುಟ ಹಿಡಿಯಬೇಕು ಎಂಬುದನ್ನು ಸದ್ಯದಲ್ಲೇ ತೀರ್ಮಾನಿಸುತ್ತೇನೆ" ಎಂದಿದ್ದರು. ಆ ಕಾರಣಕ್ಕಾಗಿಯೇ, ರಾಜಣ್ಣ ಪುತ್ರ ಅವರ ಅಮಿತ್ ಶಾ ಭೇಟಿ ಕುತೂಹಲ ಕೆರಳಿಸಿದೆ.
ಅಮಿತ್ ಶಾ ಭೇಟಿ ಮಾಡಿದ್ದೇಕೆ?
ನಮ್ಮ ರಾಷ್ಟ್ರೀಯ ಕ್ರಿಪ್ಕೊದ ಅಧ್ಯಕ್ಷರ ಚುನಾವಣೆಯಿತ್ತು. ಎಲೆಕ್ಷನ್ ಸಂದರ್ಭದಲ್ಲಿ ನಾನು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆ. ನಮ್ಮ ರಾಷ್ಟ್ರದ 10 ಮಂದಿ ನಿರ್ದೇಶಕರಲ್ಲಿ ನಾನು ಕೂಡ ಒಬ್ಬ. ದಕ್ಷಿಣ ಭಾರತದಿಂದ ನಾನು ಕೂಡ ಒಬ್ಬ ನಿರ್ದೇಶಕನಾಗಿದ್ದರಿಂದ ಆ ವಿಚಾರದಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿದ್ದೆ. ಅಮಿತ್ ಶಾ ಅವರನ್ನು ಅರ್ಧ ಗಂಟೆ ಭೇಟಿಯಾಗಿ ಮಾತನಾಡಿಲ್ಲ, ಅಷ್ಟು ದೊಡ್ಡ ರಾಜಕಾರಣಿ ನಾನಲ್ಲ, ಎರಡು ನಿಮಿಷ ಕಾಲ ರಾಜ್ಯ ರಾಜಕೀಯ ಬಗ್ಗೆ ಮಾತನಾಡಿದೆವು, 15 ದಿನಗಳ ಹಿಂದೆ ಭೇಟಿಯಾಗಿದ್ದೆ ಎಂದರು.
ಕಾಂಗ್ರೆಸ್ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಪಕ್ಷದಲ್ಲಿರುವ ಗೊಂದಲವನ್ನು ನಿವಾರಣೆ ಮಾಡಬೇಕೆಂದು ಎಲ್ಲರ ಅಭಿಪ್ರಾಯವಾಗಿದೆ. ಆದಷ್ಟು ಬೇಗ ಸಮಸ್ಯೆ, ಗೊಂದಲ ಬಗೆಹರಿಯುತ್ತದೆ ಎಂಬ ವಿಶ್ವಾಸವಿದೆ ಎಂದರು.