ಡಾ ಪರಮೇಶ್ವರ್ 
ರಾಜಕೀಯ

ಪರಮೇಶ್ವರ್ ಅವರೇ.. ಕಾರಾಗೃಹಗಳು ಕಳ್ಳಬಟ್ಟಿ ಕಾರ್ಖಾನೆಗಳಾಗಿ ಮಾರ್ಪಟ್ಟಿರುವುದು ಗೊತ್ತಿದೆಯೋ? ಎಂದಿನಂತೆ "ಗೊತ್ತಿಲ್ಲ" ಎಂದು ಜಾರಿಕೊಳ್ಳುತ್ತೀರೋ?

ಅಪರಾಧ ಮಾಡುವ ಖೈದಿಗಳಿಗೆ ಭಯ ಹುಟ್ಟಿಸಬೇಕಿದ್ದ ಜೈಲುಗಳು ಕಾಂಗ್ರೆಸ್‌ ಸರ್ಕಾರದಲ್ಲಿ ಐಶಾರಾಮಿ ವಸತಿಗೃಹಗಳಾಗಿ ಬದಲಾಗಿರುವುದು ದುರಂತ. ಇಷ್ಟೆಲ್ಲಾ ನಡೆಯುತ್ತಿದ್ದರೂ ಗೊತ್ತಿಲ್ಲ ಗೃಹಸಚಿವ ಪರಮೇಶ್ವರ್ ಅವರಿಗೆ ಈ ವಿಷಯವೇ ಗೊತ್ತಿರುವುದಿಲ್ಲ.

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮದ್ಯ ತಯಾರಿ ಮಾಡಿದ್ದಾರೆ ಎನ್ನಲಾದ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಪರಪ್ಪನ ಅಗ್ರಹಾರ ರೆಸಾರ್ಟ್ಸ್‌ & ಹೋಮ್‌ ಸ್ಟೇ ಮೂಲಕ ಖೈದಿಗಳಿಗೆ ರಾಜಾತಿಥ್ಯ ನೀಡಿದ್ದ ಕಾಂಗ್ರೆಸ್‌ ಸರ್ಕಾರ ಈಗ ಅಲ್ಲೊಂದು ಡಿಸ್ಟಿಲರೀಸ್‌ ತೆರೆಯುವ ಮೂಲಕ ಮದ್ಯ ತಯಾರಿ ಉದ್ಯಮ ನಡೆಸುತ್ತಿದೆ ಎಂದು ವ್ಯಂಗ್ಯವಾಡಿದೆ.

ಅಪರಾಧ ಮಾಡುವ ಖೈದಿಗಳಿಗೆ ಭಯ ಹುಟ್ಟಿಸಬೇಕಿದ್ದ ಜೈಲುಗಳು ಕಾಂಗ್ರೆಸ್‌ ಸರ್ಕಾರದಲ್ಲಿ ಐಶಾರಾಮಿ ವಸತಿಗೃಹಗಳಾಗಿ ಬದಲಾಗಿರುವುದು ದುರಂತ. ಇಷ್ಟೆಲ್ಲಾ ನಡೆಯುತ್ತಿದ್ದರೂ ಗೊತ್ತಿಲ್ಲ ಗೃಹಸಚಿವ ಪರಮೇಶ್ವರ್ ಅವರಿಗೆ ಈ ವಿಷಯವೇ ಗೊತ್ತಿರುವುದಿಲ್ಲ ಎಂದು ಕಿಡಿಕಾರಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪೋಸ್ಟ್ ಮಾಡಿ, ಐಟಿ ಬಿಟಿ ಕಂಪನಿಗಳಿಗೆ ಬೈ ಬೈ. ಕಳ್ಳಬಟ್ಟಿ ಫ್ಯಾಕ್ಟರಿಗಳಿಗೆ ಜೈ ಜೈ ಎಂದು ವ್ಯಂಗ್ಯವಾಡಿದ್ದಾರೆ.

ಒಂದು ಕಡೆ ಕಾಂಗ್ರೆಸ್ ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ಮುಳುಗಿದ್ದರೆ, ಮತ್ತೊಂದು ಕಡೆ ಆಡಳಿತ ನಿಷ್ಕ್ರಿಯತೆಯಿಂದ ಜೈಲುಗಳು ಕಳ್ಳಬಟ್ಟಿ ತಯಾರಿಕಾ ಫ್ಯಾಕ್ಟರಿಗಳಾಗಿ ಮಾರ್ಪಟ್ಟಿವೆ. ಗೃಹ ಸಚಿವ ಪರಮೇಶ್ವರ್ ಅವರೇ, ಕಾರಾಗೃಹಗಳು ಕಳ್ಳಬಟ್ಟಿ ಕಾರ್ಖಾನೆಗಳಾಗಿ ಮಾರ್ಪಟ್ಟಿರುವ ವಿಷಯ ತಮಗೆ ಗೊತ್ತಿದೆಯೋ ಅಥವಾ ಎಂದಿನಂತೆ "ಗೊತ್ತಿಲ್ಲ" ಎಂದು ಜಾರಿಕೊಳ್ಳುತ್ತೀರೋ? ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ