ಶಾಸಕ ಮುನಿರತ್ನ ಮತ್ತು ಕುಸುಮಾ ಹನುಮಂತರಾಯಪ್ಪ 
ರಾಜಕೀಯ

ಕುಸುಮ ಡಿಕೆಶಿ ಪಕ್ಕದಲ್ಲೇ ಇರ್ತಾರೆ, ಡಿ.ಕೆ ರವಿ ಬದುಕಿದ್ದರೆ ನಾನು ಜೈಲಿಗೆ ಹೋಗ್ತಿರಲಿಲ್ಲ: ಶಾಸಕ ಮುನಿರತ್ನ

ಡಿ.ಕೆ. ರವಿ ಬದುಕಿದ್ದಿದರೆ ನಾನು ಜೈಲಿಗೆ ಹೋಗುತ್ತಿರಲಿಲ್ಲ. ಈ ಪರಿಸ್ಥಿತಿಯೂ ಎದುರಾಗುತ್ತಿರಲಿಲ್ಲ. ಕುಸುಮಾ ಅವರಿಗೆ ಶಾಸಕರಾಗುವ ಹುಚ್ಚು ಹಿಡಿದಿದೆ. ಹೀಗಾಗಿ, ಡಿ. ಕೆ.ಶಿವಕುಮಾರ್ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ.

ಬೆಂಗಳೂರು: ಒಂದು ಹೆಣ್ಣಿಗೋಸ್ಕರ ಮತ್ತು ಆ ಹೆಣ್ಣನ್ನು ಎಂಎಲ್‌ಎ ಮಾಡಬೇಕೆಂಬ ಜಿದ್ದಿಗೆ ಬಿದ್ದು ಇಡೀ ಕ್ಷೇತ್ರವನ್ನು ಹಾಳು ಮಾಡಿದ್ದಾರೆ ಎಂದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರನ್ನು ಹಿಂದೆ ತಳ್ಳಿ ಚುನಾವಣೆಯಲ್ಲಿ ಪರಾಜಿತಗೊಂಡ ಅಭ್ಯರ್ಥಿ ಕುಸುಮಾ ಕರೆದುಕೊಂಡು ಶಿವಕುಮಾರ್ ಪಾದಯಾತ್ರೆ ಮಾಡಿ ಸಾರ್ವಜನಿಕ ಕುಂದು ಕೊರತೆ ಸ್ವೀಕರಿಸುತ್ತಾರೆ ಎಂದರೆ ಏನು ಹೇಳಬೇಕು. ಒಂದು ಹೆಣ್ಣಿಗೋಸ್ಕರ ಈ ಹೋಗುವುದಾ ಎಂದು ಪ್ರಶ್ನಿಸಿದರು.

ಇಷ್ಟೊಂದು ಜಿದ್ದಿಗೆ ಬಿದ್ದಿರುವುದಕ್ಕೆ ಎರಡೇ ಕಾರಣಗಳಿವೆ. ಒಂದು, ಈ ಕುಸುಮಾ ಅವರನ್ನು ಶಾಸಕಿ ಮಾಡಬೇಕು. ಇನ್ನೊಂದು ಡಿ.ಕೆ.ಸುರೇಶ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಬೇಕು. ಸರ್ಕಾರಿ ಕಾರ್ಯಕ್ರಮಕ್ಕೆ ಶಾಸಕರನ್ನು ಆಹ್ವಾನ ನೀಡಲಾಗಿದೆ ಎಂದು ಕುಸುಮಾ ಹೇಳಿದ್ದಾರೆ. ಸರ್ಕಾರಿ ಆಹ್ವಾನದ ಬಗ್ಗೆ ಹೇಳುವುದಕ್ಕೆ ಇವರು ಯಾರೆಂದು ಪ್ರಶ್ನಿಸಿದರು.

ಡಿ.ಕೆ. ರವಿ ಬದುಕಿದ್ದಿದರೆ ನಾನು ಜೈಲಿಗೆ ಹೋಗುತ್ತಿರಲಿಲ್ಲ. ಈ ಪರಿಸ್ಥಿತಿಯೂ ಎದುರಾಗುತ್ತಿರಲಿಲ್ಲ. ಕುಸುಮಾ ಅವರಿಗೆ ಶಾಸಕರಾಗುವ ಹುಚ್ಚು ಹಿಡಿದಿದೆ. ಹೀಗಾಗಿ, ಡಿ. ಕೆ.ಶಿವಕುಮಾರ್ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮೊಟ್ಟೆ ಹೊಡಿಸಿ, ರೇಪ್ ಕೇಸ್ ಹಾಕಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ, ರಾಜಣ್ಣ, ರೇವಣ್ಣರಿಗೆ ಹನಿ ಟ್ರ್ಯಾಪ್ ಮಾಡಿಸಿದ್ದಾರೆ. ಎಷ್ಟು ಮನೆ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಆರ್‌ಎಸ್‌ಎಸ್‌ 100ನೇ ವರ್ಷದ ಕಾರ್ಯಕ್ರಮ ಮುಗಿಸಿಕೊಂಡು ಬಂದರೆ, ಶಾಸಕರನ್ನು ಏಯ್ ಕರಿ ಟೋಪಿ ಎಂದು ಉಪ ಮುಖ್ಯಮಂತ್ರಿ ಕರೆಯುತ್ತಾರೆ. ಇದು ಆರ್‌ಆರ್ ನಗರ ಕ್ಷೇತ್ರದ ಮತದಾರರಿಗೆ ಮಾಡಿದ ಅವಮಾನವಾಗಿದೆ. ಕನಕಪುರದ ದೌಜನ್ಯವನ್ನು ಬೆಂಗಳೂರಿನಲ್ಲೂ ಮಾಡುತ್ತಿದ್ದಾರೆ ಎಂದು ದೂರಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟಿ20 ವಿಶ್ವಕಪ್ 2026: ಮಕಾಡೆ ಮಲಗಿದ USA ಬ್ಯಾಟಿಂಗ್, ಭಾರತಕ್ಕೆ ಭರ್ಜರಿ ಜಯ, ಶುಭಾರಂಭ!

ಟಿ20 ವಿಶ್ವಕಪ್ 2026: USA ವಿರುದ್ಧ ಸೂರ್ಯ ಭರ್ಜರಿ ಬ್ಯಾಟಿಂಗ್, Babar Azam ದಾಖಲೆ ಧ್ವಂಸ

ಟಿ20 ವಿಶ್ವಕಪ್ 2026: ಅಮೆರಿಕ ವಿರುದ್ಧ ಗೋಲ್ಡನ್ ಡಕೌಟ್, ಹೀನಾಯ ದಾಖಲೆ ಬರೆದ Abhishek Sharma!

ನಂಬಿಕೆಯೇ ಭಾರತದ ಬಲಿಷ್ಠ ಕರೆನ್ಸಿ: ಮಲೇಷ್ಯಾದಲ್ಲಿ ಪ್ರಧಾನಿ ಮೋದಿ

ಭಾರತ-ಅಮೆರಿಕ ಒಪ್ಪಂದ ನಮ್ಮ ರೈತರ ಹಿತಾಸಕ್ತಿ ರಕ್ಷಿಸುತ್ತದೆ; ರಷ್ಯಾ ತೈಲ ಖರೀದಿ ಬಗ್ಗೆ MEA ಮಾಹಿತಿ: ಗೋಯಲ್

SCROLL FOR NEXT