ಸಾಂದರ್ಭಿಕ ಚಿತ್ರ  
ರಾಜಕೀಯ

EVM ನಿಷೇಧ: ಕರ್ನಾಟಕ ಸರ್ಕಾರದ ಹೊಸ ನಿರ್ಧಾರ ಚುನಾವಣಾ ಸಮಗ್ರತೆಯ ಚರ್ಚೆಗೆ ನಾಂದಿ!

ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂಗಳನ್ನು ನಿಷೇಧಿಸಿ ಕಾಗದದ ಮತಪತ್ರಗಳಿಗೆ ಮರಳುತ್ತಿದೆ, ಇದು ಚುನಾವಣಾ ಸಮಗ್ರತೆಯ ಕುರಿತಾದ ರಾಷ್ಟ್ರೀಯ ಚರ್ಚೆಗೆ ತಿರುವು ನೀಡಿದೆ.

ಬೆಂಗಳೂರು: 1982 ರಲ್ಲಿ ಭಾರತದಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು (ಇವಿಎಂ) ಮೊದಲು ಪರಿಚಯಿಸಲಾಯಿತು. ಆದರೆ ಈಗ ಕರ್ನಾಟಕವು ದೇಶದ ಉಳಿದ ಭಾಗಗಳಿಗಿಂತ ಮೊದಲ ಬಾರಿಗೆ ಇವಿಎಂ ಮತ ಯಂತ್ರಗಳ ಜೊತೆಗೆ ಸಂಬಂಧ ಕಡಿದುಕೊಳ್ಳುತ್ತಿದೆ.

ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂಗಳನ್ನು ನಿಷೇಧಿಸಿ ಕಾಗದದ ಮತಪತ್ರಗಳಿಗೆ ಮರಳುತ್ತಿದೆ, ಇದು ಚುನಾವಣಾ ಸಮಗ್ರತೆಯ ಕುರಿತಾದ ರಾಷ್ಟ್ರೀಯ ಚರ್ಚೆಗೆ ತಿರುವು ನೀಡಿದೆ.

ಇವಿಎಂಗಳು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಘೋಷಿಸಿದ್ದಾರೆ. ಮಹಾರಾಷ್ಟ್ರ ಚುನಾವಣೆಯ ಬಗ್ಗೆ ವಿವರಿಸಿ ಅಂತಿಮ ಹಂತದಲ್ಲಿ ಅಸಹಜವಾಗಿ ಹೆಚ್ಚಿನ ಸಂಖ್ಯೆಯ ಮತಗಳು ಚಲಾವಣೆಯಾಗಿವೆ ಎಂದು ವರದಿಯಾಗಿದೆ ಎಂದಿದ್ದಾರೆ.

ಭಾರತದ ಚುನಾವಣಾ ಆಯೋಗ (ಇಸಿಐ) "ದಪ್ಪ ಚರ್ಮದ ಮತ್ತು ದುರಹಂಕಾರಿ"ಯಾಗಿ ಬೆಳೆಯುತ್ತಿದೆ ಎಂದು ಪಾಟೀಲ್ ಆರೋಪಿಸಿದರು. ಪ್ರಜಾಪ್ರಭುತ್ವದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಈ ನಿರ್ಧಾರದ ಅರ್ಥ ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ, ಕರ್ನಾಟಕದ ಸುಮಾರು ಶೇ. 60 ರಷ್ಟು ಮತದಾರರು ಕೈಯಿಂದ ಮತ ಚಲಾಯಿಸಲಿದ್ದಾರೆ.

ಇವಿಎಂ ಯಂತ್ರಗಳ ಬಳಕೆ ನಂತರದಶಕದಲ್ಲಿಯೇ ಭಾರತದಲ್ಲಿ ಮೊದಲ ಬಾರಿ ಕಾಗದದ ಮತದಾನದ ಪ್ರಯೋಗ ಇದಾಗಿದ್ದು, ಇವಿಎಂಗಳ ಮೇಲಿನ ಅಪನಂಬಿಕೆ ಈಗಾಗಲೇ ಹೆಚ್ಚಿರುವ ಸಮಯದಲ್ಲಿ ತಾವು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಹಲವಾರು ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳು ಕೂಡ ಇವಿಎಂ ನಿಷೇಧಿಸಿ ಮತ ಪತ್ರ ಬಳಕೆಗೆ ಮುಂಜಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಜರ್ಮನಿ, ನೆದರ್‌ಲ್ಯಾಂಡ್ಸ್ ಮತ್ತು ಐರ್ಲೆಂಡ್‌ನಂತಹ ದೇಶಗಳು ಪಾರದರ್ಶಕತೆಯ ಕಾಳಜಿಯಿಂದಾಗಿ ಎಲೆಕ್ಟ್ರಾನಿಕ್ ಮತದಾನದಿಂದ ದೂರ ಉಳಿದಿವೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಒಂದು ಕಾಲದಲ್ಲಿ ಎಲೆಕ್ಟ್ರಾನಿಕ್ ಮತದಾನದ ಪ್ರವರ್ತಕನಾಗಿತ್ತು ಭಾರತ, ಆದರೆ ಈಗ ರಾಜಕೀಯವಾಗಿ ಪ್ರಭಾವಶಾಲಿಯಾಗಿರುವ ರಾಜ್ಯಗಳು ಇವಿಎಂ ಯಂತ್ರಗಳ ಕಾರ್ಯ ನಿರ್ವಹಣೆ ಬಗ್ಗೆ ಪ್ರಶ್ನೆ ಎತ್ತುತ್ತಿವೆ.

ಚುನಾವಣಾ ಪಾರದರ್ಶಕತೆ ಬಗ್ಗೆ ಮಾತನಾಡಿದ ಕಾರ್ಯಕರ್ತ ವೆಂಕಟೇಶ್ ನಾಯಕ್ ಕರ್ನಾಟಕ ಸಚಿವ ಸಂಪುಟದ ಈ ಕ್ರಮವು ವಿರೋಧ ಪಕ್ಷಗಳ 'ಇವಿಎಂ ಹಟಾವೋ' ಬೇಡಿಕೆಯ ಕಡೆಗೆ ಮೊದಲ ಪ್ರಾಯೋಗಿಕ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಇವಿಎಂ ವಿರೋಧಿ ಅಭಿಯಾನದ ಪ್ರಮುಖ ಧ್ವನಿಯಾದ ನಿವೃತ್ತ ಐಎಎಸ್ ಅಧಿಕಾರಿ ಎಂಜಿ ದೇವಸಹಾಯಂ ಕರ್ನಾಟಕದ ನಿರ್ಧಾರವನ್ನು ಶ್ಲಾಘಿಸಿದ್ದಾರೆ. "2024 ರ ಚುನಾವಣೆಗಳಿಗೆ ಮುಂಚಿತವಾಗಿ ನಾವು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇವೆ ಎಂದಿದ್ದಾರೆ.

ಅವರು ನಮ್ಮನ್ನು ನಿರ್ಲಕ್ಷಿಸಿದ್ದಾರೆ. ಈಗ ಕನಿಷ್ಠ ಸ್ಥಳೀಯ ಚುನಾವಣೆಗಳಿಗೆ, ಜನರಿಗೆ ಪಾರದರ್ಶಕತೆ ಸಿಗುತ್ತದೆ. ಆದರೆ ಮತದಾರರ ನಂಬಿಕೆಯನ್ನು ಪುನಃಸ್ಥಾಪಿಸಬೇಕಾದರೆ ಇದು ಎಲ್ಲಾ ಚುನಾವಣೆಗಳಿಗೂ ವಿಸ್ತರಿಸಬೇಕು ಎಂದಿದ್ದಾರೆ.

ಇವಿಎಂಗಳು ಸುರಕ್ಷಿತವಾಗಿವೆ, ವಿವಿಪಿಎಟಿ ಪೇಪರ್ ಟ್ರಯಲ್‌ನಿಂದ ಬೆಂಬಲಿತವಾಗಿವೆ ಎಂದು ಇಸಿಐ ತಿಳಿಸಿದೆ. ಸುಪ್ರೀಂ ಕೋರ್ಟ್ ಪದೇ ಪದೇ ಅವುಗಳ ವಿಶ್ವಾಸಾರ್ಹತೆಯನ್ನು ಎತ್ತಿಹಿಡಿದಿದೆ, ಆದರೆ ಅನುಮಾನಗಳು ಸಾಯುತ್ತಿಲ್ಲ ಎಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ 'ಮತ ಚೋರಿ' ಬಗ್ಗೆ ಪ್ರಕಟವಾದ ಸುದ್ದಿಗಳು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥ; ಪುತ್ತೂರಿನಲ್ಲಿ ಆಗಿದ್ದೇನು?

'ಶೋಲೆ' ಖ್ಯಾತಿಯ ಬಾಲಿವುಡ್ ನಟ ಗೋವರ್ಧನ್ ಅಸ್ರಾನಿ ವಿಧಿವಶ

Israel ಸೈನಿಕರ ಹತ್ಯೆಯ ನಂತರ ಮುರಿದುಬಿದ್ದ ಕದನ ವಿರಾಮ: ಗಾಜಾದ ಮೇಲೆ ಇಸ್ರೇಲ್ ವಾಯುದಾಳಿಯಲ್ಲಿ 45 ಮಂದಿ ಸಾವು!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಗೆಲುವಿನ ಸಂಭ್ರಮದ ಬಳಿಕ ಹೃದಯಾಘಾತವಾಗಿ ಮಾಜಿ ಅಧ್ಯಕ್ಷ ಸಾವು

10,000 ಅಡಿ ದಿಢೀರ್ ಕುಸಿದ 737 ಬೋಯಿಂಗ್ ವಿಮಾನ; ಮಾರ್ಗ ಮಧ್ಯೆ ವಿಂಡ್ ಶೀಲ್ಡ್ ಗೆ ಹಾನಿ; ಪೈಲೆಟ್, ಪ್ರಯಾಣಿಕರು ಬದುಕಿದ್ದೇ ಪವಾಡ!

SCROLL FOR NEXT