ಕೋಲಾರ: ಕರ್ನಾಟಕ ಹೈಕೋರ್ಟ್ ಆದೇಶದಂತೆ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಕೆ.ಎಸ್. ಮಂಜುನಾಥ ಗೌಡ ವಿಜೇತರಾದರ, ರಾಜಕೀಯ ತ್ಯಜಿಸುವುದಾಗಿ ಶಾಸಕ ಕೆ.ವೈ. ನಂಜೇಗೌಡ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸಕೋಟೆಯಿಂದ ಮಂಜುನಾಥ ಗೌಡ ಅವರನ್ನು ಕರೆತಂದು ಮಾಲೂರು ಕ್ಷೇತ್ರದಿಂದ ಗೆಲ್ಲುವಂತೆ ಮಾಡಿದ್ದು ನಾನು. ಆದರೆ ಈಗ ಚುನಾವಣೆಯನ್ನು ಪ್ರಶ್ನಿಸುವ ಮೂಲಕ ಶಾಸಕರಾಗಲು ಬಯಸಿದ್ದಾರೆ ಎಂದು ನಂಜೇಗೌಡ ಹೇಳಿದರು.
ಮತಎಣಿಕೆ ಅಥವಾ ಹೊಸದಾಗಿ ಚುನಾವಣೆ ನಡೆದರೆ, ಅವರು ಮತ್ತೆ ಸೋಲುತ್ತಾರೆ ಎಂದು ಅವರು ಹೇಳಿದರು. ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಮತ್ತು ಇಡೀ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ನಂಜೇಗೌಡ ಹೇಳಿದರು.
2023ರ ವಿಧಾನಸಭಾ ಚುನಾವಣೆ ನಡೆಯುವಾಗ ರಾಜ್ಯದಲ್ಲಿ ಇದ್ದುದ್ದು ಬಿಜೆಪಿ ಸರಕಾರ, ಅವರದ್ದೇ ಅಧಿಕಾರಿಗಳು ಮತ್ತು ಪೊಲೀಸರು ಇದ್ದರು. ಮತ ಎಣಿಕೆ ದಿನ ನಾನು ಮನೆಯಲ್ಲಿ ಇದ್ದೆ. ಎಣಿಕೆ ಕಾರ್ಯ ಮುಕ್ತಾಯಗೊಂಡ ನಂತರ ಮಂಜುನಾಥಗೌಡ ಮನವಿ ಮೇರೆಗೆ ಚುನಾವಣಾಧಿಕಾರಿಗಳು ವಿ.ವಿ.ಪ್ಯಾಟ್ ತಾಳೆ ಮಾಡಲು ಲಾಟರಿ ಎತ್ತಿ ನಂತರ ಫಲಿತಾಂಶ ಘೋಷಿಸಿದರು.
ಈಗ ಆತ ಬೇರೇನೋ ಮಾತನಾಡುತ್ತಿದ್ದಾರೆ. ಮೂರು ಎಣಿಕೆ ನಡೆಯಲಿ ಅಥವಾ ಹೊಸದಾಗಿ ಚುನಾವಣೆ ನಡೆಯಲಿ. ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಅವರು ಹೇಳಿದರು.
ಹೈಕೋರ್ಟ್ ತನ್ನ ಆದೇಶದ ಅನುಷ್ಠಾನಕ್ಕೆ ನಾಲ್ಕು ವಾರಗಳ ತಡೆಯಾಜ್ಞೆ ನೀಡಿದ್ದು, ನಂಜೇಗೌಡ ಸುಪ್ರೀಂ ಕೋರ್ಟ್ ಸಂಪರ್ಕಿಸಲು ಅವಕಾಶ ಮಾಡಿಕೊಟ್ಟಿದೆ. ನಾನು ವೀಡಿಯೊವನ್ನು ಏಕೆ ಕದಿಯಬೇಕು? ದೃಶ್ಯಗಳನ್ನು ಸಂಗ್ರಹಿಸಿ ಅದನ್ನು ರಕ್ಷಿಸುವುದು ಚುನಾವಣಾ ಅಧಿಕಾರಿಗಳ ಜವಾಬ್ದಾರಿ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು.
ಸಿಎಂ ಸಿದ್ದರಾಮಯ್ಯ ತಮ್ಮೊಂದಿಗೆ ಮಾತನಾಡಿದ್ದಾರೆ ಮತ್ತು ಅಕ್ಟೋಬರ್ 31 ರಂದು ಕ್ಷೇತ್ರದಲ್ಲಿ ನಿಗದಿಯಾಗಿದ್ದ ಸಿಎಂ ಕಾರ್ಯಕ್ರಮ ವೇಳಾಪಟ್ಟಿಯ ಪ್ರಕಾರ ನಡೆಯಲಿದೆ ಎಂದು ನಂಜೇಗೌಡ ಹೇಳಿದರು.