ಪ್ರತಾಪ್ ಸಿಂಹ, ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ 
ರಾಜಕೀಯ

CM ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ; FIR ದಾಖಲಿಸುವಂತೆ ಸುರ್ಜೇವಾಲ ಆಗ್ರಹ

ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸುರ್ಜೇವಾಲ ಅವರು, ಹಿಂದುಳಿದ ಸಮುದಾಯದ ಅತ್ಯಂತ ಹಿರಿಯ ನಾಯಕರಾದ ಸಿದ್ದರಾಮಯ್ಯನವರನ್ನು ಅವಮಾನಿಸಲು ಬಿಜೆಪಿ ಉದ್ದೇಶಪೂರ್ವಕವಾಗಿ ಪ್ರತಾಪ್ ಸಿಂಹರನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು: ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೀನಾಯ "ಕಟ್" ಹೇಳಿಕೆ ಬಿಜೆಪಿಯ ನೀಚ ರಾಜಕಾರಣವನ್ನು ಮತ್ತೊಮ್ಮೆ ಬಟ್ಟಬಯಲು ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಶನಿವಾರ ಮಾಜಿ ಸಂಸದನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸುರ್ಜೇವಾಲ ಅವರು, ಪ್ರತಾಪ್ ಸಿಂಹರ ಈ ಆಕ್ರೋಶ ಹತಾಶೆಯಿಂದ ಹುಟ್ಟಿದ್ದು ಎನ್ನುವುದು ಈಗ ಸ್ಪಷ್ಟ. ಹಿಂದುಳಿದ ಸಮುದಾಯದ ಅತ್ಯಂತ ಹಿರಿಯ ನಾಯಕರಾದ ಸಿದ್ದರಾಮಯ್ಯನವರನ್ನು ಅವಮಾನಿಸಲು ಬಿಜೆಪಿ ಉದ್ದೇಶಪೂರ್ವಕವಾಗಿ ಪ್ರತಾಪ್ ಸಿಂಹರನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಅಲ್ಪಸಂಖ್ಯಾತರನ್ನು ತಮ್ಮ ಮನುವಾದಿ ದೃಷ್ಟಿಕೋನದ ಅನುಸಾರ ಕೀಳಾಗಿ ಮತ್ತು ಅಧೀನರಾಗಿ ಕಾಣುತ್ತೇವೆ ಎಂಬ ಸಂದೇಶವನ್ನು ರವಾನಿಸುವ ಏಕೈಕ ಉದ್ದೇಶದ ಇದರ ಹಿಂದೆ ಇದೆ. ಇಂತಹ ನಡವಳಿಕೆ ಬಿಜೆಪಿಯಲ್ಲಿನ ವಿಚಾರ, ನೈತಿಕತೆ ಮತ್ತು ನಾಯಕತ್ವದ ಸಂಪೂರ್ಣ ದಿವಾಳಿತನವನ್ನು ಬಯಲು ಮಾಡುತ್ತದೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು "ಕೊಂದು ದೇಹವನ್ನು ಫ್ರಿಡ್ಜ್‌ನಲ್ಲಿ ತುಂಬುತ್ತೇವೆ" ಎಂಬ ಹೇಯ ಬೆದರಿಕೆ ಸೇರಿದಂತೆ ಈ ಹಿಂದೆ ಇದೇ ವಿಭಜನಕಾರಿ ಶಕ್ತಿಗಳಿಂದ ಜೀವಬೆದರಿಕೆಗಳು ಕೊಡ ಬಂದಿವೆ.

ಇದು ಒಬ್ಬ ವ್ಯಕ್ತಿಯ ಹುಚ್ಚಾಟವಲ್ಲ — ಇದು ಬಿಜೆಪಿಯ ರಾಜಕೀಯ ಸಂಸ್ಕೃತಿಯೇ ಆಗಿದೆ. ಇದೇ ಪ್ರತಾಪ್ ಸಿಂಹ ಬಿಜೆಪಿ ಕೇಂದ್ರ ನಾಯಕತ್ವದ ಸೂಚನೆಯ ಮೇರೆಗೆ ಜನರಿಂದ ಆಯ್ಕೆಯಾದ ಕಾಂಗ್ರೆಸ್ ಕರ್ನಾಟಕ ಸರ್ಕಾರವನ್ನು ಒಮ್ಮೆಯಲ್ಲ, ಪದೇ ಪದೇ "ತಾಲಿಬಾನ್ ಸರ್ಕಾರ" ಎಂದು ಕರೆದವರು. ವಿಷಕಾರಿ ಭಾಷಣ ಹರಡುವುದರಲ್ಲಿ ಬಿಜೆಪಿ ನಾಯಕರು ಮರು ಅಪರಾಧಿಗಳು. ಮಾಜಿ ಸಂಸದ ಅನಂತಕುಮಾರ್ ಹೆಗಡೆ ಕೇಂದ್ರ ಸಚಿವರಾಗಿದ್ದಾಗಲೇ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿಯನ್ನು ಬಹಿರಂಗವಾಗಿ ಅವಮಾನಿಸಿದರು. ಬಿಜೆಪಿ ಶಾಸಕ ಸಿ.ಟಿ. ರವಿ ಕರ್ನಾಟಕ ವಿಧಾನಪರಿಷತ್ತಿನ ಒಳಗೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಮಾನಿಸಿ ಅತ್ಯಂತ ಕೆಳಮಟ್ಟಕ್ಕೆ ಇಳಿದರು. ಇತರ ಬಿಜೆಪಿ ನಾಯಕರು ವ್ಯಕ್ತಿಗಳನ್ನು, ಸಮುದಾಯಗಳನ್ನು ಮತ್ತು ಧರ್ಮಗಳನ್ನು ಅವಮಾನಿಸುವ, ಅಗೌರವಿಸುವ ಮತ್ತು ಹೀಯಾಳಿಸುವ ಹೇಳಿಕೆಗಳನ್ನು ನೀಡುವುದರಲ್ಲಿ ಮರು ಅಪರಾದಿಗಳಾಗಿದ್ದರೆ.

ನಿಂದನೆಯೇ ಬಿಜೆಪಿ ನಾಯಕರ ಮ್ಯಾಗ್ನಾ ಕಾರ್ಟಾ ಆಗಿರುವಾಗ, ಅವರಿಂದ ಅಭಿವೃದ್ಧಿ, ಪ್ರಗತಿ ಅಥವಾ ಸೌಹಾರ್ದದ ಭಾಷೆಯನ್ನು ನಿರೀಕ್ಷಿಸುವುದು ವ್ಯರ್ಥ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭೆ ಉಪಚುನಾವಣೆಗಳಲ್ಲಿ ಬಿಜೆಪಿಯ ಹತಾಶೆ ಜನರ ತಿರಸ್ಕಾರ ಮತ್ತು ಏಪ್ರಿಲ್ 9, 2026ರಂದು ಸನ್ನಿಹಿತ ಸೋಲಿನ ಮುನ್ಸೂಚನೆಯಿಂದ ಹುಟ್ಟಿದೆ. ಇದರಿಂದ ವಿಚಲಿತರಾದ ಮತ್ತು ಕನ್ನಡಿಗರ ಮೇಲೆ ಸಿಟ್ಟಿಗೆದ್ದ ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕತ್ವ ಈಗ ಬಡವರ ಮತ್ತು ಶೋಷಿತರ ನಾಯಕತ್ವದ ಮೇಲೆ — ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ನಿಂದನೆ ಮತ್ತು ಅವಮಾನ ಹೊರಿಸುವ ಕಾರ್ಯವನ್ನು ಪ್ರತಾಪ್ ಸಿಂಹರಂತಹ ವ್ಯಕ್ತಿಗಳಿಗೆ ವಹಿಸಿಕೊಟ್ಟಿದೆ ಎಂದು ಕಿಡಿ ಕಾರಿದ್ದಾರೆ.

ಪರಮ ವಿಪರ್ಯಾಸ ಎಂದರೆ — ಬಿಜೆಪಿ ನಾಯಕತ್ವ ಮೊದಲು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲು ನಿರಾಕರಿಸಿತ್ತು. ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಬಹಿರಂಗವಾಗಿ "ಭ್ರಷ್ಟ ಕುಟುಂಬ" ಎಂದು ಕರೆಯುತ್ತಾರೆ. ಬಾಗಲಕೋಟೆ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಅದರ ಅಭ್ಯರ್ಥಿ ವೀರಣ್ಣ ಚರಂತಿಮಠ ಈಗ ಯತ್ನಾಳ್ ಅವರನ್ನೇ ತಮ್ಮ "ಸ್ಟಾರ್ ಪ್ರಚಾರಕ"ರನ್ನಾಗಿ ನೇಮಿಸಿಕೊಂಡಿದ್ದಾರೆ. ಸಾವಿರ ಹೋಳಾಗಿ ಒಡೆದಿರುವ, ಸ್ವಂತ ಮನೆಯನ್ನೇ ಸರಿ ಮಾಡಿಕೊಳ್ಳಲಾಗದ ಪಕ್ಷ ಈಗ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಅಲ್ಪಸಂಖ್ಯಾತರನ್ನು ಹಾಗೂ ಅವರ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅವಮಾನಿಸುತ್ತಿದೆ.

ಕರ್ನಾಟಕಕ್ಕೆ ಪ್ರಗತಿಪರ ಚಿಂತನೆ, ವೈಜ್ಞಾನಿಕ ಮನೋಭಾವ, ಸರ್ವಧರ್ಮ ಸಮಭಾವ ಮತ್ತು ಸಾಮಾಜಿಕ ಸೌಹಾರ್ದದ ಹೆಮ್ಮೆಯ ಪರಂಪರೆ ಇದೆ. ರಾಜಕಾರಣವನ್ನು ಚರಂಡಿಗೆ ಎಳೆಯಲು ಹೊರಟ ಬಿಜೆಪಿ ನಾಯಕರ ಹಿಂದೆ ಸ್ವಾಭಿಮಾನಿ ಕನ್ನಡಿಗರು ಹೋಗುವುದಿಲ್ಲ.

ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಸುರ್ಜೇವಾಲ ಅವರು,

ಬಿಜೆಪಿ ಮತ್ತು ಅದರ ನಾಯಕರು ಕ್ಷಮೆ ಕೇಳದಿದ್ದರೆ, ಬಡವರು ಮತ್ತು ತುಳಿತಕ್ಕೊಳಗಾದವರು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಕಾಂಗ್ರೆಸ್‌ 'ಪ್ರಚೋದನಕಾರಿ' ಹೇಳಿಕೆ; ಭಾರತೀಯರ ಸುರಕ್ಷತೆಗೆ ಅಪಾಯ: ಪ್ರಧಾನಿ ಮೋದಿ

West-Asia war: 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೇ ಇರಾನ್‌ನಲ್ಲಿ ನರಕ ಸೃಷ್ಟಿಸುತ್ತೇವೆ: Trump ಕೊನೆ ಎಚ್ಚರಿಕೆ!

Sex Video ಪ್ರಕರಣ: ಡಿಸಿಎಂಗೆ 17 ಬಾರಿ ಕರೆ ಮಾಡಿದ ಸ್ವಯಂ ಘೋಷಿತ 'ದೇವಮಾನವ'; CDR ಬಿಡುಗಡೆ

ಭಾರತದ ರಾಜತಂತ್ರಕ್ಕೆ ಜಗತ್ತೇ ನಿಬ್ಬೆರಗು: ಸಂಘರ್ಷದ ನಡುವೆ ಯಾರಿಗೂ ಸಿಗದ ಸೌಲಭ್ಯ!; Hormuz ದಾಟಿದ 8ನೇ ಹಡಗು; ಇರಾನ್ ನಿಂದ ವಿಶೇಷ ಸಂದೇಶ!

Iran war: ಬುಶೆಹರ್ ಅಣುಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿ, ಓರ್ವ ಸಾವು

SCROLL FOR NEXT