ಎಂ ಎಲ್ಸಿ ಅಬ್ದುಲ್ ಜಬ್ಬಾರ್ 
ರಾಜಕೀಯ

'ನನ್ನನ್ನು ಬಲಿಪಶು ಮಾಡಲಾಯಿತು, ರಿಜ್ವಾನ್ ಅರ್ಷಾದ್, ಸಲೀಂ ಅಹ್ಮದ್ 20 ದಿನಗಳಲ್ಲಿ ಸಾಧಿಸದ್ದನ್ನು ಜಮೀರ್ ಖಾನ್ 2 ಗಂಟೆಗಳಲ್ಲಿ ಮಾಡಿ ತೋರಿಸಿದ್ದಾರೆ': ಅಬ್ದುಲ್ ಜಬ್ಬಾರ್

ರಿಜ್ವಾನ್ ಅರ್ಷಾದ್ ಮತ್ತು ಸಲಿಂ ಅಹ್ಮದ್ ಅವರು ಆಡಿದ ಮಾತುಗಳು ನನಗೆ ತುಂಬಾ ನೋವುಂಟುಮಾಡಿವೆ. ನಾನು ಆ ಸ್ಥಾನಕ್ಕೆ ಅರ್ಹನಲ್ಲ ಎಂದು ಹೇಳಿದ್ದರಿಂದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ನಾನು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಿರುವುದನ್ನು ಪರಿಗಣಿಸಿ, ಕಾಂಗ್ರೆಸ್‌ನ ಅಲ್ಪಸಂಖ್ಯಾತ ನಾಯಕರು ತಮ್ಮ ಸಮುದಾಯದ ನಾಯಕನಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಈಗ ಚುನಾವಣೆಯಲ್ಲಿ ಸೋಲುವ ಭಯದಿಂದ ನನ್ನನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎಂದು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

“ನಾನು ನನಗಾಗಿ ಟಿಕೆಟ್ ಕೇಳಿಲ್ಲ, ಅಲ್ಪಸಂಖ್ಯಾತ ಸಮುದಾಯದ ಯಾವುದೇ ನಾಯಕರಿಗೆ ನೀಡುವಂತೆ ಕೇಳಿದ್ದೆ, ನನ್ನ ಮಾತುಗಳನ್ನು ಪರಿಶೀಲಿಸಬಹುದಾಗಿತ್ತು, ಆದರೆ ಹಾಗೆ ಆಗಲಿಲ್ಲ, ನನ್ನ ನಾಯಕರ ನಡೆ ನನಗೆ ನೋವುಂಟುಮಾಡಿದೆ. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಪ್ರಚಾರಕ್ಕೆ ಬಂದವರು ನನ್ನನ್ನು ಭೇಟಿಯಾಗಲಿಲ್ಲ, ಅದು ದೊಡ್ಡ ವಿಷಯವಲ್ಲ. ಆದರೆ ನನ್ನ ಕಾಂಗ್ರೆಸ್ ಪಕ್ಷದ ಮೇಲಿನ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನಿಸಿ, ಪತ್ರಿಕಾಗೋಷ್ಠಿ ಮೂಲಕ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಮಾಡಿದ ಪ್ರಯತ್ನವನ್ನು ನಾನು ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಿಜ್ವಾನ್ ಅರ್ಷಾದ್ ಮತ್ತು ಸಲಿಂ ಅಹ್ಮದ್ ಅವರು ಆಡಿದ ಮಾತುಗಳು ನನಗೆ ತುಂಬಾ ನೋವುಂಟುಮಾಡಿವೆ. ನಾನು ಆ ಸ್ಥಾನಕ್ಕೆ ಅರ್ಹನಲ್ಲ ಎಂದು ಹೇಳಿದ್ದರಿಂದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ನಾನು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಕಾಂಗ್ರೆಸ್ ಪಕ್ಷ ನನಗೆ ಇಷ್ಟರವರೆಗೆ ಎಲ್ಲವನ್ನೂ ನೀಡಿದೆ, ಆದ್ದರಿಂದ ನಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ ಎಂದು ಜಬ್ಬಾರ್ ಹೇಳಿದರು. ಜೊತೆಗೆ, ಈ ಆರೋಪಗಳಿಗೆ ಪಕ್ಷವನ್ನು ದೂರುವುದಿಲ್ಲ ಎಂದೂ ಅವರು ಹೇಳಿದರು.

ನಮ್ಮ ಸಮುದಾಯಕ್ಕೆ ಪ್ರಾತಿನಿಧಿತ್ವ ಇರಲಿಲ್ಲ ಎಂಬ ಕಾರಣಕ್ಕೆ ನ್ಯಾಯಸಮ್ಮತ ಅವಕಾಶವನ್ನು ಕೇಳಿದ್ದೇವೆ. ಅಹಿಂದ ಸಮುದಾಯದ ಸಾಮಾನ್ಯ ಕಾರ್ಯಕರ್ತರ ಗೆಲುವಿಗಾಗಿ ಕೆಲಸ ಮಾಡುವುದಾಗಿ ನಾವು ಭರವಸೆ ನೀಡಿದ್ದೆವು. ಅಭ್ಯರ್ಥಿಯ ವಿರುದ್ಧ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದಾಗ ಹಾಗೂ ಸಮುದಾಯದ ಜನರು ಆಕ್ರೋಶಗೊಂಡಾಗ, ಸಚಿವ ಜಮೀರ್ ಅಹ್ಮದ್ ಖಾನ್ ಅವರು ಒಂದು ಬಾರಿ ಭೇಟಿ ಮಾಡಿ ಮಾತನಾಡಿದಾಗಲೇ ಪರಿಸ್ಥಿತಿಯನ್ನು ಶಮನಗೊಳಿಸಿತು ಎಂದು ವಿವರಿಸಿದ್ದಾರೆ.

ಇದಲ್ಲದೆ, ಜಮೀರ್ ಖಾನ್ ಅವರನ್ನು ಪ್ರಶಂಸಿಸಿದ ಜಬ್ಬಾರ್, “ರಿಜ್ವಾನ್ ಅರ್ಷಾದ್ ಮತ್ತು ಸಲಿಂ ಅಹ್ಮದ್ ಅವರು 20 ದಿನಗಳಲ್ಲಿ ಸಾಧಿಸದ್ದನ್ನು ಜಮೀರ್ ಖಾನ್ ಕೇವಲ ಎರಡು ಗಂಟೆಗಳಲ್ಲಿ ಸಾಧಿಸಿದ್ದಾರೆ,” ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran Peace Talks: ಹಾರ್ಮುಜ್ ಜಲಸಂಧಿಯಲ್ಲಿ ಮುಂದುವರೆದ ಉದ್ವಿಗ್ನತೆ; ಇರಾನ್‌-ಅಮೆರಿಕಾ ನಡುವೆ ಶೀಘ್ರದಲ್ಲೇ ಮತ್ತೊಂದು ಸುತ್ತಿನ ಮಾತುಕತೆ..!

ದೇಶದ ಹಿತಾಸಕ್ತಿಯೇ ಮುಖ್ಯ, ಭಾರತದ ಪರವಾಗಿ ಲಾಬಿ ನಡೆಸುವಂತೆ ಅತ್ತೆ-ಮಾವ ಎಂದಿಗೂ ಒತ್ತಡ ಹೇರಿಲ್ಲ: H-1B ಕಠಿಣ ನಿಯಮ ಸಮರ್ಥಿಸಿಕೊಂಡ ಜೆಡಿ ವ್ಯಾನ್ಸ್..!

'ಹಾರ್ಮುಜ್ ಜಲಸಂಧಿ' ದಿಗ್ಬಂಧನ ನಡುವೆ ಟ್ರಂಪ್-ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ! ಏನೆಲ್ಲಾ ಮಾತುಕತೆ ಆಯ್ತು?

ಅಮೆರಿಕದ ಹಾರ್ಮುಜ್ ದಿಗ್ಬಂಧನದಿಂದ ಇರಾನ್‌ಗೆ ದಿನಕ್ಕೆ ಅಂದಾಜು $435 ಮಿಲಿಯನ್ ನಷ್ಟ; ಆದರೂ ದೀರ್ಘಾವಧಿಯ ಬ್ಲಾಕೇಡ್ ಕಷ್ಟ!

ಚಿಕ್ಕಮಗಳೂರು: ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ಅವಘಡ, ಬಾಲಕಿ ಸಾವು, 9 ಮಂದಿಗೆ ಗಾಯ

SCROLL FOR NEXT