ದಿನೇಶ್ ಗುಂಡೂರಾವ್  
ರಾಜಕೀಯ

ಅಮಾನತು ಅಂತ್ಯವಲ್ಲ, ಅಬ್ದುಲ್ ಜಬ್ಬಾರ್‌ಗೆ ಇನ್ನೂ ಅವಕಾಶ ಇದೆ: ಸಚಿವ ದಿನೇಶ್ ಗುಂಡೂರಾವ್

ಜಬ್ಬಾರ್ ಅಮಾನತುಗೊಂಡಿದ್ದಾರೆ. ಆದರೆ, ಅವರು ಇನ್ನೂ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಅವರನ್ನು ಮೂರೂ ಬಾರಿ ಎಂಎಲ್ಸಿಯಾಗಿ ಮಾಡಿದ್ದು ಪಕ್ಷವೇ.

ಬೆಂಗಳೂರು: ಅಮಾನತು ಅಂತ್ಯವಲ್ಲ, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಂಡಿರುವ ಅಬ್ದುಲ್ ಜಬ್ಬಾರ್ ಅವರಿಗೆ ಇನ್ನೂ ಅವಕಾಶ ಇದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ರಾವ್ ಅವರು ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಬ್ಬಾರ್ ಅಮಾನತುಗೊಂಡಿದ್ದಾರೆ. ಆದರೆ, ಅವರು ಇನ್ನೂ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಅವರನ್ನು ಮೂರೂ ಬಾರಿ ಎಂಎಲ್ಸಿಯಾಗಿ ಮಾಡಿದ್ದು ಪಕ್ಷವೇ. ಅವರು ತಮ್ಮ ಸ್ಪಷ್ಟನೆ ನೀಡಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಬಹುದು” ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರಗಳ ಬಗ್ಗೆ ಮಾತನಾಡಿ, “ನಸೀರ್ ಅಹ್ಮದ್ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದೂ ಮುಖ್ಯಮಂತ್ರಿಗಳೇ. ಅವರನ್ನು ಆ ಹುದ್ದೆಯಿಂದ ತೆಗೆದುಹಾಕುವುದೂ ಸಿಎಂ ನಿರ್ಧಾರ. ಅದರ ಕಾರಣ, ಹಿನ್ನೆಲೆ ವಿವರಗಳು ಮುಖ್ಯಮಂತ್ರಿಗಳಿಗೆ ಮಾತ್ರ ತಿಳಿದಿರುತ್ತದೆ ಎಂದು ತಿಳಿಸಿದರು.

ಪಕ್ಷವು ಇಬ್ಬರು ನಾಯಕರಿಗೂ ಮೂರೂ ಬಾರಿ ಎಂಎಲ್ಸಿ ಸ್ಥಾನ ನೀಡಿದ್ದು, ಹಲವು ಜವಾಬ್ದಾರಿಗಳನ್ನು ಒಪ್ಪಿಸಿದೆ. “ಇದು ಯಾವುದೇ ಓಲೈಕೆಯ ರಾಜಕೀಯವಲ್ಲ. ಪಕ್ಷವು ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ” ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ SUVಗೆ ಕಾರು ಡಿಕ್ಕಿ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!

ಇರಾನ್ ಉಸಿರುಗಟ್ಟಿಸಲು ಟ್ರಂಪ್ ಮಾಸ್ಟರ್ ಪ್ಲ್ಯಾನ್: ಆರ್ಥಿಕ 'ಡಿ-ಡೇ’ ಘೋಷಣೆ, ಅಮೆರಿಕ ಹೊಸ ನಿರ್ಬಂಧದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ..!

ರಾಹುಲ್ ಗಾಂಧಿ ನಿಲುವಿಗೆ ಉಲ್ಟಾ ಹೊಡೆದರೇ ಡಿಕೆಶಿ? CM ನಿವಾಸಕ್ಕೆ ಅದಾನಿ ಭೇಟಿ; ಕೈ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ..!

KPSC ಹಗರಣ: IAS ಅಧಿಕಾರಿ ಗಂಗ್ವಾರ್ ಮನೆ ಮೇಲೆ ED ದಾಳಿ; ಗೇಟ್ ಲಾಕ್ ಮಾಡಿ ಸೆಕ್ಯೂರಿಟಿ ಹೈಡ್ರಾಮಾ, ಕೀ ಮೇಕರ್ ಕರೆಯಿಸಿ ಬಾಗಿಲು ಮುರಿದ ಅಧಿಕಾರಿಗಳು..!

Operation Sindoorನಲ್ಲಿ ಧ್ವಂಸವಾಗಿದ್ದ ಜೈಶ್ ನೆಲೆ ಮರುನಿರ್ಮಾಣ! ಪಾಕ್‌ ಸರ್ಕಾರದಿಂದ 25 ಕೋಟಿ ನೆರವು!