ಎಚ್.ಸಿ ಬಾಲಕೃಷ್ಣ 
ರಾಜಕೀಯ

ಜಮೀರ್ ನಮ್ಮನ್ನ ಕಾಂಗ್ರೆಸ್ ಪಕ್ಷಕ್ಕೆ ಕರ್ಕೊಂಡು ಬಂದ: ಈಗ ವಾಪಸ್‌ jds ಗೆ ಹೋದ್ರೆ ನಮ್ಮನ್ನೂ ಕರೆದುಕೊಂಡು ಹೋಗಲೇಬೇಕು; ಎಚ್.ಸಿ ಬಾಲಕೃಷ್ಣ

ಸಚಿವ ಜಮೀರ್‌ ಅಹ್ಮದ್‌ ಜೆಡಿಎಸ್‌ ಪಕ್ಷಕ್ಕೆ ವಾಪಸ್‌ ಹೋಗುವುದಾದರೆ ನಮ್ಮನ್ನೂ ಕರೆದುಕೊಂಡೇ ಹೋಗಬೇಕಾಗುತ್ತದೆ. ಆಂತರಿಕವಾಗಿ ಇಂತಹ ಬೆಳವಣಿಗೆ ಆಗಿದೆಯೋ, ಇಲ್ಲವೋ ಎಂಬುದು ಗೊತ್ತಿಲ್ಲ,

ಬೆಂಗಳೂರು: ಜೆಡಿಎಸ್‌ನಲ್ಲಿದ್ದ ನಮ್ಮನ್ನ ಕಾಂಗ್ರೆಸ್‌ಗೆ ಕರೆತಂದು ಕೊಂಡು ಬಂದರು. ಈಗ ವಾಪಸ್‌ ಹೋದ್ರೆ ಜೊತಗೆ ನಮ್ಮನ್ನು ಕರೆದುಕೊಂಡು ಹೋಗಿ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ಗೆ ಮಾಗಡಿ ಕಾಂಗ್ರೆಸ್‌ ಶಾಸಕ ಎಚ್‌ಸಿ ಬಾಲಕೃಷ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್‌ ಅಹ್ಮದ್‌ ಜೆಡಿಎಸ್‌ ಪಕ್ಷಕ್ಕೆ ವಾಪಸ್‌ ಹೋಗುವುದಾದರೆ ನಮ್ಮನ್ನೂ ಕರೆದುಕೊಂಡೇ ಹೋಗಬೇಕಾಗುತ್ತದೆ. ಆಂತರಿಕವಾಗಿ ಇಂತಹ ಬೆಳವಣಿಗೆ ಆಗಿದೆಯೋ, ಇಲ್ಲವೋ ಎಂಬುದು ಗೊತ್ತಿಲ್ಲ, ನಮ್ಮಜೊತೆ ಚರ್ಚಿಸಿಲ್ಲ ಎಂದರು.

ಜಮೀರ್‌ ಅವರಿಗೆ ನಾವು ಹೆಚ್ಚು ಆಪ್ತರಾಗಿದ್ದರೂ ಈ ಬಗ್ಗೆ ನಮ್ಮ ಜತೆ ಅವರು ಚರ್ಚಿಸಿಲ್ಲ. ಜೆಡಿಎಸ್‌ನಲ್ಲಿದ್ದಾಗ ಇಲ್ಲಿಏಕೋ ಸರಿ ಬರುತ್ತಿಲ್ಲಎಂದು ನಮ್ಮನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದರು.

ಈಗ ವಾಪಸ್‌ ಹೋಗುವುದಾದರೆ ಒಬ್ಬರೇ ಹೋಗಲು ಸಾಧ್ಯವಿಲ್ಲ. ವಾಪಸ್‌ ಜೆಡಿಎಸ್‌ಗೆ ಹೋದರೆ ಡಿಸಿಎಂ ಮಾಡುತ್ತಾರಾ? ಸುಮ್ಮನೆ ಖಾಲಿ ಕೈಯಲ್ಲಿಹೋದರೆ ಪ್ರಯೋಜನವೇನು? ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Tamilnadu & West Bengal Election 2026 Live Updates | 9 ಗಂಟೆ ವೇಳೆಗೆ ತಮಿಳುನಾಡಿನಲ್ಲಿ ಶೇ. 17.69, ಪಶ್ಚಿಮ ಬಂಗಾಳದಲ್ಲಿ ಶೇ.18.76ರಷ್ಟು ಮತದಾನ

US-Iran war:: ಅಮೆರಿಕಾ ನೌಕಾ ದಿಗ್ಭಂಧನ ಮುಂದುವರಿದರೆ ಹಾರ್ಮುಜ್ ಜಲಸಂಧಿ ತೆರೆಯಲ್ಲ; ಇರಾನ್ ಕಠಿಣ ನಿಲುವು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ

ಇಂದು SSLC ರಿಸಲ್ಟ್: 8.6 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ, ಹೈಕೋರ್ಟ್ ಆದೇಶ ಹಿನ್ನೆಲೆ ಹಿಂದಿ ಗ್ರೇಡ್'ಗೆ ಕೊಕ್..!

ಕದನ ವಿರಾಮ ಒಪ್ಪಂದಕ್ಕೆ ಬೆಲೆ ಇಲ್ಲವೇ?: ಲೆಬನಾನ್‌ ಮೇಲೆ ಮುಂದುವರೆದ ಇಸ್ರೇಲ್ ದಾಳಿ, ಪತ್ರಕರ್ತೆ ಸೇರಿ ಐವರ ಸಾವು..!

ಕಬ್ಬಡ್ಡಿ ಪಂದ್ಯದ ವೇಳೆ ಬೆಟ್ಟಿಂಗ್: ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ, ಈಗ ತಮಾಷೆನೂ ಮಾಡುವಂತಿಲ್ಲ‌ ಎಂಬಂತಾಗಿದೆ; ಗೃಹ ಸಚಿವ ಪರಮೇಶ್ವರ್

SCROLL FOR NEXT