ಸತೀಶ್ ಜಾರಕಿಹೊಳಿ  
ರಾಜಕೀಯ

ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ತೆರೆ ಎಳೆಯಿರಿ: ಹೈಕಮಾಂಡ್'ಗೆ ಸತೀಶ್ ಜಾರಕಿಹೊಳಿ ಆಗ್ರಹ

ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ವದಂತಿಗಳಿಗೆ ಸ್ಪಷ್ಟನೆ ನೀಡುವಂತೆ ವಿನಂತಿಸಿದರು.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಹರಿದಾಡುತ್ತಿರುವ ಊಹಾಪೋಹಗಳ ಕುರಿತು ಮಧ್ಯಪ್ರವೇಶಿರಿ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆಯಬೇಕೆಂದು ಸಚಿವ ಸತೀಶ್ ಜಾರಕಿಹೊಳಿಯವರು ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ವದಂತಿಗಳಿಗೆ ಸ್ಪಷ್ಟನೆ ನೀಡುವಂತೆ ವಿನಂತಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಹರಿದಾಡುತ್ತಿರುವ ಸುದ್ದಿಗಳು ಪಕ್ಷ ಮತ್ತು ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಹೈಕಮಾಂಡ್ ಸ್ಪಷ್ಟನೆ ನೀಡುವುದು ಅಗತ್ಯ” ಎಂದು ಹೇಳಿದರು.

ಇಂತಹ ಅನಿಶ್ಚಿತತೆ ಮುಂದುವರಿದರೆ ಆಡಳಿತದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತನಾಗಿ ಪರಿಗಣಿಸಲ್ಪಡುವ ಜಾರಕಿಹೊಳಿ, ಈ ಹಿಂದೆ ಕೂಡ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಮನವಿ ಮಾಡಿದ್ದರು.

ಇದೇ ವೇಳೆ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಕೂಡ ಇತ್ತೀಚೆಗೆ ಖರ್ಗೆ ಅವರನ್ನು ಭೇಟಿಯಾಗಿ ದೀರ್ಘ ಚರ್ಚೆ ನಡೆಸಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ವಿಚಾರ ಚರ್ಚೆ ತಾರಕ್ಕೇರುವಂತೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್

ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್​​ಗೆ ನೋಟಿಸ್; ಸಿಡಿದೆದ್ದ VHP

ಮಲಗಿದ್ದಕ್ಕೆ ಕೆಲಸ ಕಳೆದುಕೊಂಡ ಟೆಕ್ಕಿ; ಈಗ 964 ಕೋಟಿ ರೂ ಪರಿಹಾರಕ್ಕೆ ಬೇಡಿಕೆ!

Asian Games 2026: ಭಾರತದ 'ಚಿನ್ನದ' ಬೇಟೆ; ಶೂಟಿಂಗ್ ನಲ್ಲಿ ಸುರುಚಿ ಸಿಂಗ್-ಕಮಲ್ಜೀತ್ ಚಿನ್ನ; ಬೆಳ್ಳಿಗೆ ಮುತ್ತಿಟ್ಟ ಗುಲ್ವೀರ್ ಸಿಂಗ್!

ಕರ್ನಾಟಕಕ್ಕೆ ನೀಡಬೇಕಿದ್ದ 2,186 ಕೋಟಿ ರೂ. ಅನುದಾನಕ್ಕೆ ಕೇಂದ್ರ ಸರ್ಕಾರ ತಡೆ: ಸಚಿವ ಈಶ್ವರ್ ಖಂಡ್ರೆ