ಶಿವರಾಜ್ ಎಸ್ ತಂಗಡಗಿ  
ರಾಜಕೀಯ

ಕುಮಾರಸ್ವಾಮಿ - ಅಮಿತ್ ಶಾ ಭೇಟಿ ಮಾಡಲು ನಮ್ಮ ನಾಯಕರು ಹೋಗಿಲ್ಲ: ಪಾರ್ಟಿ ಕಚೇರಿಯಲ್ಲಿ ಕಸ ಹೊಡೆಯುವುದಕ್ಕೂ ರೆಡಿ; ಶಿವರಾಜ್ ತಂಗಡಗಿ

ಪಕ್ಷ ಹೇಳಿದರೆ ಸಚಿವ ಸ್ಥಾನ ತ್ಯಾಗ ಮಾಡಿ ಕಾಂಗ್ರೆಸ್ ಪಾರ್ಟಿ ಕಚೇರಿಯಲ್ಲಿ ಕಸ ಗುಡಿಸೋದಕ್ಕೂ ರೆಡಿ ಇದ್ದೇನೆ, ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇನೆ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.

ಕೊಪ್ಪಳ: ಜನರ ಆಶೀರ್ವಾದಿಂದ ಸಚಿವ ಸಂಪುಟ ಸರ್ಜರಿ ಬಳಿಕವೂ ಸಚಿವನಾಗಿರುತ್ತೇನೆ ಎಂಬ ಭರವಸೆ ನನಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು.

ಕೊಪ್ಪಳದಲ್ಲಿನ ಕಾರ್ಯಕ್ರಮದ ಬಳಿಕ ಸುದ್ದಿಗಾರರು, ಸಚಿವ ಸಂಪುಟ ಸರ್ಜರಿ ಬಳಿಕ ನಿಮ್ಮ ಸ್ಥಾನ-ಮಾನದ ಕತೆ ಏನು"? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸಂಪುಟದ ಸರ್ಜರಿ ಅವಶ್ಯಕತೆ ಇದೆ. ಏಳೆಂಟು ವರ್ಷಗಳಿಂದ ಶಾಸಕರಾಗಿರುವವರಿಗೆ ಸಚಿವರಾಗುವ ಆಸೆ ಇದ್ದೇ ಇದೆ. ಹೀಗಾಗಿ ಹೈಕಮಾಂಡ್ ಭೇಟಿಗೆ ಹೋಗುವುದು ಸಹಜ. ಜನರ ಆಶೀರ್ವಾದ, ಕನಕ ಚಲಪತಿಯ ಕೃಪೆಯಿಂದ ಮುಂದೆ ಸಹ ನಾನು ಸಚಿವ ಸ್ಥಾನದಲ್ಲಿ ಮುಂದುವರೆಯತ್ತೇನೆ" ಎಂದರು.

ಪಕ್ಷ ಹೇಳಿದರೆ ಸಚಿವ ಸ್ಥಾನ ತ್ಯಾಗ ಮಾಡಿ ಕಾಂಗ್ರೆಸ್ ಪಾರ್ಟಿ ಕಚೇರಿಯಲ್ಲಿ ಕಸ ಗುಡಿಸೋದಕ್ಕೂ ರೆಡಿ ಇದ್ದೇನೆ, ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇನೆ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.

ವರಿಷ್ಠರು ಹೈಕಮಾಂಡ್ ಭೇಟಿ ಮಾಡುವುದರಲ್ಲಿ ತಪ್ಪೇನಿದೇ?. ಕೇಂದ್ರದ ಎಚ್.ಡಿ. ಕುಮಾರಸ್ವಾಮಿ ಅಥವಾ ಅಮಿತ್ ಶಾ ಅವರನ್ನು ಭೇಟಿ ಮಾಡಲು ನಮ್ಮ ಪಕ್ಷದವರು ತೆರಳಿಲ್ಲ. ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Assembly elections: ಪಶ್ಚಿಮ ಬಂಗಾಳದಲ್ಲಿ ಅಂತಿಮ ಹಂತದ ಮತದಾನ: ಸಿಎಂ ಮಮತಾ ಬ್ಯಾನರ್ಜಿ ಸೇರಿ ಪ್ರಮುಖ ನಾಯಕರ ಭವಿಷ್ಯ ಇಂದು ನಿರ್ಧಾರ

‘ನಾವಿಲ್ಲದಿದ್ದರೆ ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು’: ಹಾಸ್ಯ ಮೂಲಕವೇ ಟ್ರಂಪ್‌ಗೆ ಕಿಂಗ್ ಚಾರ್ಲ್ಸ್ III ಫುಲ್ ರೋಸ್ಟ್..!

ಅಮೆರಿಕಾ ಪಾಸ್‌ಪೋರ್ಟ್‌ನಲ್ಲಿ ಟ್ರಂಪ್ ಫೋಟೋ: 'ಫಾದರ್ ಆಫ್ ನೇಷನ್' ಪಟ್ಟಕ್ಕೇರುವ ತಂತ್ರವೇ..?

‘ಟಾಕ್ಸಿಕ್’ ರಿಲೀಸ್ ಮತ್ತೆ ಮುಂದಕ್ಕೆ; ಜೂನ್ 4ಕ್ಕೆ ಬರ್ತಿಲ್ಲ ಸಿನಿಮಾ, ನಟ ಯಶ್ ಹೇಳಿದ್ದೇನು..?

ಎಸ್‌ಸಿ ಒಳ ಮೀಸಲಾತಿ ಅಧಿಕೃತ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

SCROLL FOR NEXT