ಹೆಚ್. ಸಿ. ಬಾಲಕೃಷ್ಣ 
ರಾಜಕೀಯ

ಬೆಂಗಳೂರು ದಕ್ಷಿಣ ಜಿಲ್ಲೆ: ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣಗೆ ಒಲಿದ ಸಚಿವ ಸ್ಥಾನ!

ಬಾಲಕೃಷ್ಣ ಹೆಸರಿರುವ ಕಾಂಗ್ರೆಸ್ ಹೈಕಮಾಂಡ್ ಅಂಕಿತದ ಪಟ್ಟಿ ಹೊರಬೀಳುತ್ತಿದ್ದಂತೆಯೇ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಾಲಕೃಷ್ಣ ಅಭಿಮಾನಿಗಳು ಸಂಭ್ರಮಪಟ್ಟಿದ್ದಾರೆ.

ರಾಮನಗರ: ಮುಖ್ಯಮಂತ್ರಿ ಆಪ್ತ ಶಾಸಕರಾದ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ಶಾಸಕ ಹೆಚ್. ಸಿ. ಬಾಲಕೃಷ್ಣ ಅವರ ಬಹು ದಿನಗಳ ಕನಸು ಕೊನೆಗೂ ನನಸು ಆಗುತ್ತಿದೆ.

ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನದ ಜೊತೆಗೆ ನಾಡಪ್ರಭು, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ತವರೂರು ಮಾಗಡಿ ಕ್ಷೇತ್ರದ ಶಾಸಕ ಹೆಚ್. ಸಿ. ಬಾಲಕೃಷ್ಣ ಇದೇ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.

ಬಾಲಕೃಷ್ಣ ಹೆಸರಿರುವ ಕಾಂಗ್ರೆಸ್ ಹೈಕಮಾಂಡ್ ಅಂಕಿತದ ಪಟ್ಟಿ ಹೊರಬೀಳುತ್ತಿದ್ದಂತೆಯೇ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಾಲಕೃಷ್ಣ ಅಭಿಮಾನಿಗಳು ಸಂಭ್ರಮ ಪಟ್ಟಿದ್ದು, ಬಾಲಕೃಷ್ಣ ಅವರು ವಿಡಿಯೋ ಮೂಲಕ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಬಿಜೆಪಿಯಿಂದ ಗೆದ್ದು ರಾಜಕೀಯ ಆರಂಭಿಸಿದ ಬಾಲಕೃಷ್ಣ ಅವರು ನಂತರ ಜೆಡಿಎಸ್ ನಲ್ಲಿ ಗೆದ್ದು ಮೂರು ಸಲ ಶಾಸಕರಾಗಿದ್ದರು. 2018ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಅವರು, ಆ ವರ್ಷದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎ. ಮಂಜುನಾಥ್ ವಿರುದ್ಧ ಸೋತಿದ್ದರು.

ನಂತರ 2023ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಡಿಕೆ ಶಿವಕುಮಾರ್ ಅವರ ಬಣದಲ್ಲಿ ಗುರುತಿಸಿಕೊಂಡಿದ್ದರಿಂದ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಜೊತೆಗೆ ಕಾಂಗ್ರೆಸ್ ಗೂ ಶಾಕ್; TMC ಬೆಂಬಲ ಬೆನ್ನಲ್ಲೇ ನಂದಿಗ್ರಾಮ 'ಕೈ' ಅಭ್ಯರ್ಥಿ ಕೊಲೆ ಕೇಸ್`ನಲ್ಲಿ ಅರೆಸ್ಟ್!

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!

18 ಎಸೆತ, 38 ರನ್: ಜೂನಿಯರ್ Dravid ಅಬ್ಬರಕ್ಕೆ ಆಸಿಸ್ ತತ್ತರ; 7 ರನ್‌ಗಳಿಂದ ಗೆದ್ದ ಭಾರತ U-19 ತಂಡ

T20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ; 15,000 ರನ್‌ ಗಡಿ ದಾಟಿದ Jos Buttler; ಪೊಲಾರ್ಡ್ ದಾಖಲೆ ಧ್ವಂಸ!

ChatGPT ತಂದ ಸಾವು: "ಏನಾಗಲ್ಲ, ಈ ಮಿಶ್ರಣ ಸೇವಿಸು" ಎಂದಿದ್ದ OpenAI; ಮಾತು ನಂಬಿದ 19 ವರ್ಷದ ಯುವಕ ಸಾವು; ತಾಯಿಯ ರೋಧನೆ!