ಛಲವಾದಿ ನಾರಾಯಣಸ್ವಾಮಿ 
ರಾಜಕೀಯ

'ಈ ಛಲವಾದಿ ನಾರಾಯಣಸ್ವಾಮಿ ನಾಯಿ ಥರ... ಪಾಪ ಬೊಗಳಿದೆ, ಅದಕ್ಕೆ ನಾವೇನೂ ಕಲ್ಲು ಎಸೆಯಲು ಹೋಗೋದಿಲ್ಲ'

ಛಲವಾದಿ ಒಬ್ಬ ನರಸಣ್ಣನ ತರಹ ಪುಂಗಿ ಊದಿಕೊಂಡು ಬರುತ್ತಾರಲ್ಲಾ. ಪಾಪ ಅವರಿಗಾದರೂ ಸ್ವಲ್ಪ ಬುದ್ದಿ ಇದೆ, ಇವನಿಗೆ ಬುದ್ಧಿ ಇಲ್ಲ ಅಂತ ಅಶೋಕ್ ರೈ ವ್ಯಂಗ್ಯವಾಡಿದ್ದಾರೆ. ಅವನನ್ನು ಬಿಜೆಪಿಯವರು ಯಾಕೆ ಕರೆಯುತ್ತಾರೋ ಗೊತ್ತಿಲ್ಲ.

ಪುತ್ತೂರು: ಈ ಛಲವಾದಿ ನಾರಾಯಣ ಸ್ವಾಮಿ ನಾಯಿ ಥರ.. ಪಾಪ ಬೊಗಳಿದೆ, ಅದಕ್ಕೆ ನಾವೇನೂ ಕಲ್ಲು ಎಸೆಯಲು ಹೋಗೋದಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ನಾರಾಯಣ ಸ್ವಾಮಿ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಪುತ್ತೂರಿನಲ್ಲಿ ಮಾತನಾಡಿದ ಅವರು ಛಲವಾದಿ ನಾರಾಯಣ ಸ್ವಾಮಿ ನಾಯಿ ಥರ ನಾಯಿಗೆ ಯಾರು ಒಳ್ಳೇರು, ಯಾರು ಕೆಟ್ಟವರು ಎಂದು ಗೊತ್ತಾಗುದಿಲ್ಲ, ಅದು ಯಾರು ಬಂದರೂ ಬೊಗಳುತ್ತದೆ. ಛಲವಾದಿ ಕೂಡಾ ನಾಯಿ ತರಹ, ಪಾಪ ಬೊಗಳಿದೆ, ಅದಕ್ಕೆ ನಾವೇನೂ ಕಲ್ಲು ಎಸೆಯಲು ಹೋಗೋದಿಲ್ಲ, ಪ್ರಾಣಿ ಅಲ್ವಾ? ಛಲವಾದಿ ಒಬ್ಬ ನರಸಣ್ಣನ ತರಹ ಪುಂಗಿ ಊದಿಕೊಂಡು ಬರುತ್ತಾರಲ್ಲಾ.

ಪಾಪ ಅವರಿಗಾದರೂ ಸ್ವಲ್ಪ ಬುದ್ದಿ ಇದೆ, ಇವನಿಗೆ ಬುದ್ಧಿ ಇಲ್ಲ ಅಂತ ಅಶೋಕ್ ರೈ ವ್ಯಂಗ್ಯವಾಡಿದ್ದಾರೆ. ಅವನನ್ನು ಬಿಜೆಪಿಯವರು ಯಾಕೆ ಕರೆಯುತ್ತಾರೋ ಗೊತ್ತಿಲ್ಲ. ಅವ ಛಲವಾದಿ ನಾರಾಯಣ ಸ್ವಾಮಿಯಲ್ಲ, ಅವ ಛಲವಾದಿ ನಾಲಾಯಕ್ ಸ್ವಾಮಿ ಅಂತ ಅಶೋಕ್ ರೈ ಕಿಡಿಕಾರಿದ್ದಾರೆ.

ನಾನು ನನ್ನ ಬಿಜೆಪಿ ಬಂಧುಗಳ ಹತ್ರ ವಿನಂತಿ ಮಾಡುತ್ತೇನೆ. ಇಂತವರೆಲ್ಲಾ ಮೇಲಿನಿಂದ ಬಂದ ಏನೆಲ್ಲಾ ಬೊಗಳಿ ಹೋಗುತ್ತದೆ. ಯಾರಿಗೆ ಎಷ್ಟು ವರ್ಷ ಅಧಿಕಾರ ಇರುತ್ತದೆ, ಯಾರು ಎಂಎಲ್ಎ,ಮಂತ್ರಿ ಆಗುತ್ತಾರಾ ಗೊತ್ತಿಲ್ಲ, ಅದೆಲ್ಲಾ ಪರ್ಮನೆಂಟ್ ಕೂಡಾ ಅಲ್ಲ, ಇಂತರನ್ನೆಲ್ಲಾ ಕರೆತಂದು ನಮ್ಮ ಬಾಂಧವ್ಯವನ್ನು ಯಾಕೆ ಹಾಳು ಮಾಡೋದು, ಅನುದಾನದ ವಿಚಾರದಲ್ಲಿ ಯಾವುದೇ ಛಾಲೆಂಜಿಗೂ ನಾನು ರೆಡಿ, ಅವರು ಕರೆದಲ್ಲಿ ನಾನು ಹೋಗೋದಿಲ್ಲ, ನಾನು ಶಾಸಕ, ನಾನು ಕರೆದಲ್ಲಿ ಅವರು ಬರಲಿ, ಉತ್ತರ ಕೊಡುವ ಕೆಲಸ ಮಾಡುತ್ತೇನೆ ಎಂದರು. ನಾನು ಯಾರ ತಂಟೆಗೂ ಹೋಗೋದಿಲ್ಲ, ನಮ ತಂಟೆಗೆ ಬಂದರೆ ನಾವು ಉತ್ತರ ಕೊಡುತ್ತೇವೆ, ನನ್ನ ಒಂದೇ ಒಂದು ಉದ್ಧೇಶ ಪುತ್ತೂರಿನ ಅಭಿವೃದ್ಧಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Venezuela Earth quake: ನೆರವಿಗೆ ಧಾವಿಸಿದ ಅಮೆರಿಕ, ಟ್ರಂಪ್ ಆರ್ಥಿಕ ನೆರವು ಘೋಷಣೆ

Venezuela Earth quake: 40 ಸೆಕೆಂಡ್​​ ನಲ್ಲಿ 2 ಬಾರಿ ಭೂಕಂಪ, ಭಾರೀ ವಿನಾಶ, ಕನಿಷ್ಠ 32 ಸಾವು, ಸಾವಿನ ಸಂಖ್ಯೆ 1 ಲಕ್ಷಕ್ಕೇರುವ ಸಾಧ್ಯತೆ!

ಭಾರೀ ಭೂಕಂಪಕ್ಕೆ ವೆನೆಜುವೆಲಾ ತತ್ತರ: ಮೃತರ ಕುಟುಂಬಗಳಿಗೆ ಪ್ರಧಾನಿ ಮೋದಿ ಸಂತಾಪ, ಮಾನವೀಯ ನೆರವಿಗೆ ಭಾರತ ಸಜ್ಜು..!

Passport ಪೌರತ್ವದ ಪ್ರಮಾಣಪತ್ರವಲ್ಲ, Travel document ಅಷ್ಟೇ: MEA ಸ್ಪಷ್ಟನೆ, ಹೊಸ ಚರ್ಚೆಗೆ ನಾಂದಿ..!

ಕೃಷಿ ತಾಪಂಡ ಅಪಾರ್ಟ್ ಮೆಂಟ್ ನಲ್ಲಿ ಗೆಳೆಯ ವೈಶಾಕ್ ಆತ್ಮಹತ್ಯೆ, ನಟಿಗೆ ಅಂತಿಮ ಕರೆ!