ಸಿಎಂ ಸಿದ್ದರಾಮಯ್ಯ 
ರಾಜಕೀಯ

ಸಿಎಂ ಸಿದ್ದರಾಮಯ್ಯ ಬಣದ 20 ಶಾಸಕರ ವಿದೇಶ ಪ್ರವಾಸ: ಆಸ್ಟ್ರೇಲಿಯಾಗೆ ಹಾರಲು ಸಜ್ಜು!

ವಿದೇಶ ಪ್ರವಾಸದ ಕುರಿತು ಪರ-ವಿರೋಧದ ಚರ್ಚೆಗಳ ಶುರುವಾಗಿರುವ ನಡುವೆಯೂ ರಾತ್ರಿ 8 ಗಂಟೆಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲು ಶಾಸಕರು ಸಜ್ಜಾಗಿದ್ದಾರೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಗುಂಪಿನಲ್ಲಿ ಗುರುತಿಸಿಕೊಂಡವರೇ ಹೆಚ್ಚಿದ್ದಾರೆ .

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆಯೇ 20ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಶಾಸಕರ ತಂಡ ಮಂಗಳವಾರ ವಿದೇಶಕ್ಕೆ ಹಾರಲು ಸಜ್ಜಾಗಿದೆ.

ವಿದೇಶ ಪ್ರವಾಸದ ಕುರಿತು ಪರ-ವಿರೋಧದ ಚರ್ಚೆಗಳ ಶುರುವಾಗಿರುವ ನಡುವೆಯೂ ರಾತ್ರಿ 8 ಗಂಟೆಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲು ಶಾಸಕರು ಸಜ್ಜಾಗಿದ್ದಾರೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಗುಂಪಿನಲ್ಲಿ ಗುರುತಿಸಿಕೊಂಡವರೇ ಹೆಚ್ಚಿದ್ದಾರೆ ಎನ್ನಲಾಗಿದೆ.

ಪಶುಸಂಗೋಪನಾ ಸಚಿವ, ಸಿಎಂ ಆಪ್ತ ಕೆ.ವೆಂಕಟೇಶ್‌ ನೇತೃತ್ವದಲ್ಲಿ ಅವರದ್ದೇ ಇಲಾಖೆ ವತಿಯಿಂದ ಹಮ್ಮಿಕೊಂಡ ಪ್ರವಾಸ ಇದಾಗಿದೆ. ಈ ಅಧ್ಯಯನ ಪ್ರವಾಸದಲ್ಲಿ 17 ಜನ ಕಾಂಗ್ರೆಸ್‌ ಶಾಸಕರು ಹಾಗೂ ಮೂವರು ವಿಧಾನ ಪರಿಷತ್ತಿನ ಕಾಂಗ್ರೆಸ್‌ ಸದಸ್ಯರು ಇದ್ದಾರೆ. ಮಂಗಳವಾರ ಬೆಂಗಳೂರಿನಿಂದ ಮೊದಲಿಗೆ ಆಸ್ಟ್ರೇಲಿಯಾ ಪ್ರವಾಸ ಮಾಡಲಿರುವ ಶಾಸಕರ ತಂಡವು ನಂತರ ನ್ಯೂಜಿಲೆಂಡ್‌ ಕಡೆಗೆ ಮುಖ ಮಾಡಲಿದೆ. ಮಾರ್ಚ್‌ 3ಕ್ಕೆ ಈ ತಂಡ ಬೆಂಗಳೂರಿಗೆ ಹಿಂತಿರುಗಲಿದೆ ಎಂದು ಮೂಲಗಳು ತಿಳಿಸಿವೆ.

ಥಾಮಸ್‌ ಕೂಕ್‌ ಟ್ರಾವೆಲ್‌ ಏಜೆನ್ಸಿಯಿಂದ ಶಾಸಕರ ಪ್ರವಾಸಕ್ಕೆ ವಿಮಾನದ ಟಿಕೆಟ್‌ ಬುಕಿಂಗ್‌ ಮಾಡಲಾಗಿದೆ. ಪ್ರವಾಸ ಹೊರಟ ಶಾಸಕರ ತಂಡದಲ್ಲಿ ಬಹುತೇಕರು ಸಿಎಂ ಬಣದಲ್ಲಿ ಗುರುತಿಸಿಕೊಂಡವರೇ ಆಗಿದ್ದಾರೆ. ನಾಯಕತ್ವ ಬದಲಾವಣೆಯ ಚರ್ಚೆಯ ಸಂದರ್ಭದಲ್ಲೇ ಹಮ್ಮಿಕೊಂಡ ಈ ಪ್ರವಾಸ ಹಲವು ರೀತಿಯ ರಾಜಕೀಯ ವ್ಯಾಖ್ಯಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಇದೇ ಕಾರಣಕ್ಕೆ ಹೈಕಮಾಂಡ್‌ ಬ್ರೇಕ್‌ ಹಾಕಿತ್ತು. ಆ ‘ಬ್ರೇಕ್‌’ಗೂ ಕೆಲ ಶಾಸಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಪ್ರವಾಸಕ್ಕೆ ಪ್ರತಿಯಾಗಿ ಕೆಲವರನ್ನು ರೆಸಾರ್ಟ್‌ಗೆ ಕರೆದೊಯ್ಯುವ ಪ್ಲಾನ್‌ ಮತ್ತೊಂದು ಬಣದ್ದಾಗಿತ್ತು. ಅಂತಿಮವಾಗಿ ಅದೆಲ್ಲದಕ್ಕೂ ತೆರೆಬಿದ್ದಿದ್ದು, 20 ಶಾಸಕರ ವಿದೇಶ ಪ್ರವಾಸ ಫಿಕ್ಸ್‌ ಆಗಿದೆ.

ವಿದೇಶಕ್ಕೆ ಹೊರಟು ನಿಂತ ಶಾಸಕರ ಪೈಕಿ ಕೆಲವರು ವೀಸಾ ಸಿಗದ ಕಾರಣ ಪ್ರವಾಸ ರದ್ದು ಮಾಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಅನಗತ್ಯ ವಿವಾದದ ವಿಷಯ ಆಗುವುದು ಬೇಡ ಅಥವಾ ಹೈಕಮಾಂಡ್ ಕೆಂಗಣ್ಣಿಗೆ ಗುರಿ ಆಗುವುದು ಯಾಕೆ ಎಂದು ನಿಗದಿಯಾಗಿದ್ದ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದೂ ಹೇಳಲಾಗಿದೆ. ಇನ್ನು ಹಲವು ಶಾಶಕರು ಕುಟುಂಬ ಸಹಿತ ಪ್ರವಾಸ ತೆರೆಳಲು ಮುಂದಾಗಿದ್ದರು. ಅದು ಕೂಡ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು.

ಈಚೆಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಶಾಸಕರ ವಿದೇಶ ಪ್ರವಾಸದ ಬಗ್ಗೆ ಕೇಳಿದಾಗ, ‘ಈ ಪ್ರವಾಸದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಿಲ್ಲ. ಹೈಕಮಾಂಡ್‌ ಕೂಡ ಅದರ ಬಗ್ಗೆ ನನ್ನ ಜತೆ ಮಾತನಾಡಿಲ್ಲ. ವಿದೇಶಕ್ಕೆ ಹೋಗುವವರು ಮತ್ತು ಕಳುಹಿಸಿಕೊಟ್ಟವರೂ ಮಾತನಾಡಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದ್ದರು.

ಇದೆಲ್ಲದರ ನಡುವೆ ವಿದೇಶ ಪ್ರವಾಸದ ಹುರುಪಿನಲ್ಲಿರುವ ಶಾಸಕರು, ‘ಇದೊಂದು ಖಾಸಗಿ ಪ್ರವಾಸವಾಗಿದೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಕೃಷಿ ಕುರಿತ ಅಧ್ಯಯನಕ್ಕೆ ಇದು ಸೀಮಿತವಾಗಿರಲಿದೆ’ ಎಂದು ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!