ಜಿ.ಪರಮೇಶ್ವರ್  
ರಾಜಕೀಯ

2ಸಲ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ: ನನ್ನ ಸಾಮರ್ಥ್ಯವನ್ನ ಯಾರೂ ಪ್ರಶ್ನೆ ಮಾಡುವಂತಿಲ್ಲ; ವಿರೋಧಿಗಳಿಗೆ ಪರಮೇಶ್ವರ್ ತಿರುಗೇಟು

ಅಧಿಕಾರ ಹಂಚಿಕೆ ವಿಚಾದಲ್ಲಿ ಮಾಜಿ ಸಚಿವ ಕೆ ಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅದರಲ್ಲಿ ಏನಾದರೂ ತಪ್ಪು ಇದ್ಯಾ? ತಪ್ಪು ಇದ್ರೆ ಹೇಳಿ ಸರಿ ಮಾಡೋಣ. ಸಾರ್ವಜನಿಕವಾಗಿ ಹಾದಿ ಬೀದಿಯಲ್ಲಿ ಚರ್ಚೆ ಮಾಡೋದಲ್ಲ.

ಬೆಂಗಳೂರು: ಎರಡು ಸಲ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದೇನೆ. ಉಪಮುಖ್ಯಮಂತ್ರಿ ಆಗಿದ್ದೇನೆ. ಸಾಮರ್ಥ್ಯ ಇಲ್ಲದೇ ಡಿಸಿಎಂ ಮಾಡ್ತಾರಾ? ಸಾಮರ್ಥ್ಯದ ಬಗ್ಗೆ ನನ್ನ ವಿಷಯದಲ್ಲಿ ಯಾರು ಪ್ರಶ್ನೆ ಮಾಡುವಂತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಧಿಕಾರ ಹಂಚಿಕೆ ವಿಚಾದಲ್ಲಿ ಮಾಜಿ ಸಚಿವ ಕೆ ಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅದರಲ್ಲಿ ಏನಾದರೂ ತಪ್ಪು ಇದ್ಯಾ? ತಪ್ಪು ಇದ್ರೆ ಹೇಳಿ ಸರಿ ಮಾಡೋಣ. ಸಾರ್ವಜನಿಕವಾಗಿ ಹಾದಿ ಬೀದಿಯಲ್ಲಿ ಚರ್ಚೆ ಮಾಡೋದಲ್ಲ. ಅದು ಏನಿದ್ರೂ ಹೈ ಕಮಾಂಡ್ ಜೊತೆ ಕ್ಲೋಸ್ ಡೋರಿನಲ್ಲಿ ಚರ್ಚೆ ಮಾಡಬೇಕು. ಇಲ್ಲ ಅಂದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಭಿಪ್ರಾಯ ಮಂಡಿಸಬೇಕು. ನಂತರದಲ್ಲಿ ಸಾಧಕಬಾಧಕಗಳ ಬಗ್ಗೆ ಚರ್ಚೆ ಆಗಲಿದೆ ಎಂದರು.

ನನ್ನ ಹೆಸರು ಕೂಗಿದ ತಕ್ಷಣ ಏನು ಆಗಲ್ಲ, ಹಾಗಂತ ಅದು ತಪ್ಪು ಅಂತಾನೂ ಹೇಳಕ್ಕೆ ಆಗಲ್ಲ. ನಾನು ಒಬ್ಬ ಶಿಸ್ತಿನ ಪಕ್ಷದ ಸಿಪಾಯಿ. ಹೈ ಕಮಾಂಡ್ ಏನು ತೀರ್ಮಾನ ಮಾಡ್ತಾರೆ ಅದಕ್ಕೆ ಬದ್ದನಾಗಿರುತ್ತೇನೆ. ನಾನು ನಿಮ್ಮ ಮುಂದೆ ಹೇಳಿಕೆ ನೀಡಿ ಸಿಎಂ ಆಗಬೇಕು ಅಂದ್ರೆ ಆಗಕ್ಕೆ ಆಗುತ್ತಾ? ಅದು ಸಾರ್ವಜನಿಕವಾಗಿ ಚರ್ಚೆ ಆಗುತ್ತೆ ಅಷ್ಟೇ ನಾನು ಸಮರ್ಥ ಅಂತಾ ಎಷ್ಟು ಬಾರಿ ಸಾಬೀತು ಮಾಡಬೇಕು? ಐದು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಸಮರ್ಥ ಇಲ್ಲದೇ ಕೆಲಸ ಮಾಡಿದ್ದೇನಾ? ಎಂದು ಮರು ಪ್ರಶ್ನಿಸಿದರು.

ಶಿವಮೊಗ್ಗದಲ್ಲಿ ಶಾಲಾ ಬಾಲಕನ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುಂಜಾಗರೂಕತಾ ಕ್ರಮವಾಗಿ ಹೆಚ್ಚುವರಿಗೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಪರಮೇಶ್ವರ್ ಮಾಹಿತಿ ನೀಡಿದರು.

ಘಟನೆಯ ಹಿನ್ನೆಲೆಯಲ್ಲಿ ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ಹೀಗಾಗಿ ಜನರು ಶಾಂತಿಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಘಟನೆಗೆ ಕಾರಣ ಏನು ಎಂಬುವುದನ್ನು ವಿವರಿಸಿದ ಪರಮೇಶ್ವರ್, ಹಿಂದೆ ಇದೇ ಹುಡುಗರು ಗಲಾಟೆ ಮಾಡಿಕೊಂಡಿದ್ದರು. ಮತ್ತೆ ಯಾವ ಕಾರಣಕ್ಕೆ ಘರ್ಷಣೆ ಆಯ್ತು ಅಂತಾ ಗೊತ್ತಾಗಿಲ್ಲ, ಆದ್ರೆ ಹೊಡೆದಾಡಿಕೊಂಡಿದ್ದಾರೆ. ಕೈ‌ಯಿಂದ ಎದೆಭಾಗಕ್ಕೆ ಹೊಡೆದ ಪರಿಣಾಮ ಬಾಲಕ ಸಂಕೇತ್ ಮೃತಪಟ್ಟಿದ್ದಾನೆ ಎಂದು ವಿವರಿಸಿದರು.

ಧಾರವಾಡದಲ್ಲಿ ಉದ್ಯೋಗ ಆಕಾಂಕ್ಷಿಗಳ ಪ್ರತಿಭಟನೆ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಅಧಿಕಾರದಲ್ಲಿದ್ದಾಗ ಎಷ್ಟು ಉದ್ಯೋಗ ಕೊಟ್ಟಿದ್ದರು? ಒಳಮೀಸಲಾತಿ ಜಾರಿ ಬಳಿಕ ನೇಮಕಾತಿ ಮಾಡಲು ತಯಾರಿ‌ ಮಾಡಿಕೊಂಡಿದ್ದೇವೆ. ರಾಜ್ಯಪಾಲರು ಅಂತಿಮ ಅಂಕಿತ ಹಾಕಿಲ್ಲ.ಆದಾದ ನಂತರ ನಾವು ನೇಮಕಾತಿ ಪ್ರಕ್ರಿಯೆ ಆರಂಭಿಸುತ್ತೇವೆ’ ಎಂದರು.

ಸ್ಟೇಷನ್ ಗಳಲ್ಲಿ ಸಬ್ ಇನ್ಸಪೆಕ್ಟರ್ ಗಳೇ ಇಲ್ಲ ಎಂಬ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್ ಪಿ ಎಸ್ ಐ ಸ್ಕ್ಯಾಮ್ ಯಾವಾಗ ಆಯ್ತು ಅಂತಾ ಅವರಿಗೂ ಗೊತ್ತಿರಬೇಕಲ್ವ. ಅದರಲ್ಲಿ 412 ಪೋಸ್ಟ್ ನೇಮಕಾತಿಗೆ ಮಾಡಲು ಸಾಧ್ಯವಾಗಿಲ್ಲ. ಇನ್ನೆರಡು ತಿಂಗಳಲ್ಲಿ 543 ಜನ ಸಬ್ ಇನ್ಸ್ ಪೆಕ್ಟರ್ ಗಳು ಬರ್ತಾರೆ. ಅವರು ಇದಾಗಲೇ ಟ್ರೈನಿಂಗ್ ಮುಗಿಸಿ ಫೀಲ್ಡ್ ಗೆ ಬರ್ತಿದ್ದಾರೆ. ಅವರಿಗೆ ಪೋಸ್ಟಿಂಗ್ ಕೂಡ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಮತ್ತೆ ವೈಭವದತ್ತ ಮರಳಿದ್ದೇವೆ, ಹಿಂದೆಂದಿಗಿಂತ ಶ್ರೀಮಂತ ಮತ್ತು ಬಲಿಷ್ಠರಾಗಿದ್ದೇವೆ': ದೇಶವನ್ನುದ್ದೇಶಿಸಿ Donald Trump ಭಾಷಣ-Video

'ಸಂಪುಟಕ್ಕೆ ಹೊಸ ಪೀಳಿಗೆ, ಹೊಸ ಆಲೋಚನೆ ಇರುವವರು ಸೇರಬೇಕು, ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ'?: ಡಿ ಕೆ ಶಿವಕುಮಾರ್

ಕೇರಳ- ಕೇರಳಂ: ಯಾವುದೇ ಪ್ರಯೋಜನವಿಲ್ಲ, ಹೆಸರು ಬದಲಿಸುವ ಬದಲು ಹೆಚ್ಚಿನ ಅನುದಾನ ಘೋಷಿಸಿ; ಅಚ್ಚರಿ ಮೂಡಿಸಿದ ಶಶಿ ತರೂರ್ ವಿರೋಧ!

ಕೃಷಿ ಭೂಮಿ ಸೇರಿದಂತೆ ಎಲ್ಲಾ ಸ್ವತ್ತಿಗೂ ಸ್ವಯಂ ಚಾಲಿತ ಮ್ಯುಟೇಷನ್‌: ಕಂದಾಯ ಸಚಿವ ಕೃಷ್ಣಬೈರೇಗೌಡ

ಪಲಾಯನವಾದಿಯಲ್ಲ, ನಾನು ರಾಮನಗರಕ್ಕೆ ಫಿಕ್ಸ್: ಎಲ್ಲಾ ಕಡೆಯಿಂದಲೂ ವಿರೋಧಿಗಳು ನನ್ನ ರೌಂಡಪ್ ಮಾಡ್ತಾರೆ; ನಿಖಿಲ್

SCROLL FOR NEXT