ಬೆಂಗಳೂರು: ಕಾಂಗ್ರೆಸ್ ಸರ್ಕಾರವು ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ತೆರಿಗೆದಾರರ ಹಣವನ್ನು ಸರ್ಕಾರಿ ಜಾಹೀರಾತುಗಳ ಮೂಲಕ ಹರಿಸುವ ಮೂಲಕ ನೆಹರೂ-ಗಾಂಧಿ ಕುಟುಂಬಕ್ಕೆ 'ಲಂಚ' ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗುರುವಾರ ಆರೋಪಿಸಿದ್ದಾರೆ.
ಕರ್ನಾಟಕದ ಸರ್ಕಾರವು ದೇಶದ ಯಾವುದೇ ಸ್ಥಾಪಿತ ಪತ್ರಿಕೆಗಳು ಅಥವಾ ನಿಯತಕಾಲಿಕೆಗಳಿಗಿಂತ ಹೆಚ್ಚಿನ ಜಾಹೀರಾತನ್ನು ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ನೀಡಿದೆ. ಇದು ಸಹ ಒಂದು ಹಗರಣ ಕೇಂದ್ರ ಸಚಿವರು ಸುದ್ದಿಗಾರರಿಗೆ ತಿಳಿಸಿದರು.
"ಈ ಪತ್ರಿಕೆಯ ಮಾಲೀಕರು ಎಂದು ಕರೆಯಲ್ಪಡುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಒಂದು ವರ್ಷಕ್ಕೆ ಎರಡು ಕೋಟಿ ರೂ.(2023-24 ರಲ್ಲಿ) ಪಾವತಿಸಿದೆ ಮತ್ತು ಇನ್ನೊಂದು ವರ್ಷಕ್ಕೆ ಒಂದು ಕೋಟಿ ರೂ.(2024-25 ರಲ್ಲಿ) ನೀಡಿದೆ. ಆದರೆ ಈ ವರ್ಷ ಅವರು ಎಷ್ಟು ನೀಡಿದ್ದಾರೆಂದು ನಮಗೆ ಗೊತ್ತಿಲ್ಲ ಎಂದರು.
ಜಾಮೀನಿನ ಮೇಲೆ ಹೊರಗಿರುವ ಜನರಿಗೆ ಹಣವನ್ನು ಪಾವತಿಸಲಾಗಿದೆ. ಅವರು(ಕರ್ನಾಟಕ ಸರ್ಕಾರ) ತುಂಬಾ ಹಣವನ್ನು ನ್ಯಾಷನಲ್ ಹೆರಾಲ್ಡ್ ಗೆ ಪಾವತಿಸುತ್ತಿದ್ದಾರೆ. ಇದು ಸಹ ಒಂದು ರೀತಿಯಲ್ಲಿ "ನಕ್ಲಿ ಗಾಂಧಿ ಕುಟುಂಬಕ್ಕೆ" ಲಂಚ ನೀಡಿದಂತಾಗುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.