ಪ್ರಿಯಾಂಕ್ ಖರ್ಗೆ 
ರಾಜಕೀಯ

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಾಯಿ ವಿವಾದ: ಹತಾಶೆಯ ಕೊನೆಯ ಅಸ್ತ್ರವಷ್ಟೇ; BJP ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಶಾಯಿ ವಿವಾದವನ್ನು ಪ್ರತ್ಯೇಕವಾಗಿ ನೋಡಬೇಡಿ. ಮುಂದಿನ 50 ಅಥವಾ 100 ವರ್ಷಗಳ ಕಾಲ ಶಾಶ್ವತವಾಗಿ ಆಡಳಿತ ನಡೆಸುವ ಉದ್ದೇಶದಿಂದ ಬಿಜೆಪಿ ಕೈಗೊಳ್ಳುತ್ತಿರುವ ಭಾಗವೇ ಇದು.

ಬೆಂಗಳೂರು: ಬೃಹನ್ ಮುಂಬೈ ಮಹಾನಗರ ಪಾಲಿಕೆ (BMC) ಸೇರಿದಂತೆ ಮಹಾರಾಷ್ಚ್ರದ 29 ನಗರ ಪಾಲಿಕೆಗಳಲ್ಲಿ ನಡೆದ ಚುನಾವಣೆಯಲ್ಲಿ ಬಳಸಿದ ಶಾಯಿ ಬಗ್ಗೆ ವಿವಾದ ಭುಗಿಲೆದ್ದಿದೆ. ಹಲವಾರು ವಾರ್ಡ್ ಗಳಲ್ಲಿ ಮತದಾನ ಬಳಿಕ ಬೆರಳಿಗೆ ಹಾಕಿರುವ ಶಾಯಿಯನ್ನು ನೈಲ್ ಪಾಲಿಶ್ ರಿಮೂವರ್ ನಿಂದ ಅಳಿಸಬಹುದು ಎಂದು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವಿವಾದ ಬೆನ್ನಲ್ಲೇ ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆಯವರು ವಾಗ್ದಾಳಿ ನಡೆಸಿದ್ದಾರೆ. ಶಾಯಿ ವಿವಾದವನ್ನು ಪ್ರತ್ಯೇಕವಾಗಿ ನೋಡಬೇಡಿ. ಮುಂದಿನ 50 ಅಥವಾ 100 ವರ್ಷಗಳ ಕಾಲ ಶಾಶ್ವತವಾಗಿ ಆಡಳಿತ ನಡೆಸುವ ಉದ್ದೇಶದಿಂದ ಬಿಜೆಪಿ ಕೈಗೊಳ್ಳುತ್ತಿರುವ ಭಾಗವೇ ಇದು. ಈ ಶಾಯಿ ವಿವಾದ ಹತಾಶೆಯ ಕೊನೆಯ ಅಸ್ತ್ರವಷ್ಟೇ ಎಂದು ಹೇಳಿದ್ದಾರೆ. ಇತರೆ ಕಾಂಗ್ರೆಸ್ ನಾಯಕರೂ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಾದ್ಯಂತ 29 ಪುರಸಭೆಗಳಿಗೆ ಗುರುವಾರ (ಜ.14) ಚುನಾವಣೆ ನಡೆದಿದೆ. ಈ ವೇಳೆ ಮತದಾರರು ಮತ ಚಲಾಯಿಸಿದ್ದಾರೆಂದು ಸೂಚಿಸಲು ತೋರು ಬೆರಳಿಗೆ ಗುರುತು ಹಾಕಲು ಅಳಿಸಲಾಗದ ಶಾಯಿಯ ಬದಲು ಮಾರ್ಕರ್ ಪೆನ್ನುಗಳನ್ನು ಬಳಸಲಾಗಿದೆ.

ಈ ಪೆನ್ನುಗಳಿಂದ ಹಾಕಿದ ಶಾಯಿ ಗುರುತು ಬೇಗನೆ ಅಳಿಸಿಹೋಗುತ್ತದೆ. ನೇಲ್ ಪಾಲಿಶ್ ರಿಮೂವರ್, ಸ್ಯಾನಿಟೈಸರ್ ಅಥವಾ ಸ್ವಲ್ಪ ಜೋರಾಗಿ ಉಜ್ಜಿದರೂ ಶಾಯಿ ಗುರುತು ಹೋಗುತ್ತದೆ ಎಂದು ಹಲವಾರು ಮತದಾರರು, ನಾಯಕರು ಆರೋಪಿಸಿದ್ದಾರೆ.

ಆರೋಪ ಪ್ರತ್ಯಾರೋಪಗಳ ನಡುವೆಯೇ ರಾಜ್ಯ ಚುನಾವಣಾ ಆಯೋಗ ಅಧಿಕಾರಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಪತ್ರಿಕಾಗೋಷ್ಠಿ ನಡೆಸಿದರು.

ಈವರೆಗೆ ಬಳಸಲಾಗುತ್ತಿದ್ದ ಅದೇ ಶಾಯಿಯನ್ನು ಇಲ್ಲಿಯೂ ಬಳಸಲಾಗುತ್ತಿದೆ. ಯಾವುದೇ ಹೊಸ ವಸ್ತುವನ್ನು ಪರಿಚಯಿಸಲಾಗಿಲ್ಲ. ಚುನಾವಣಾ ಆಯೋಗವು 2011 ರಿಂದ ಮಾರ್ಕರ್ ಪೆನ್ ರೂಪದಲ್ಲಿ ಈ ಶಾಯಿಯನ್ನು ಬಳಸುತ್ತಿದೆ ಎಂದು ಹೇಳಿದೆ.

ಶಾಯಿ ಹಚ್ಚಿದ ನಂತರ ಒಣಗಲು ಸುಮಾರು 10 ರಿಂದ 12 ಸೆಕೆಂಡುಗಳು ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ, ಮತದಾರರು ಇನ್ನೂ ಮತಗಟ್ಟೆಯೊಳಗೆ ಇರುತ್ತಾರೆ. ಅದು ಒಣಗಿದ ನಂತರ ಅದನ್ನು ಅಳಿಸಲಾಗುವುದಿಲ್ಲ. ಇದು ಭಾರತೀಯ ಚುನಾವಣಾ ಆಯೋಗವು ಬಳಸುವ ಅದೇ ಶಾಯಿಯಾಗಿದೆ. ಎರಡು ಬಾರಿ ಮತದಾನ ನಡೆದರೆ, ಮತಗಟ್ಟೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮತದಾರರು ಶಾಯಿ ಒಣಗುವ ಮೊದಲೇ ಅದನ್ನು ಉಜ್ಜಿ ತೆಗೆದರೆ, ಅದು ಮತದಾರರ ತಪ್ಪು. ಅಂತಹ ಮತದಾರರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಡಿಯೊಗಳನ್ನು ತನಿಖೆ ಮಾಡಲಾಗುವುದು. ತಪ್ಪು ಮಾಹಿತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿನಲ್ಲಿ 'ಬಹು ಅಂಗಾಂಗ ಕಸಿ' ಆಸ್ಪತ್ರೆ: ಐದು ವರ್ಷಗಳಲ್ಲಿ 4,000 ಕೋಟಿ ರೂ. ವೆಚ್ಚದ ಗುರಿ- ಸಿಎಂ ಸಿದ್ದರಾಮಯ್ಯ

'ಫೈರಿಂಗ್ ಘಟನೆ' ಸಿಬಿಐ ತನಿಖೆಗೆ ಆಗ್ರಹ: ಬಳ್ಳಾರಿಯಲ್ಲಿ ಬಿಜೆಪಿ ಬಲಪ್ರದರ್ಶನ, ಬೃಹತ್ ಪ್ರತಿಭಟನೆ!

ದೆಹಲಿಯಲ್ಲಿ ಖರ್ಗೆ- ಡಿಕೆಶಿ ಭೇಟಿ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

WPL 2026: ಐದು ವಿಕೆಟ್ ಕಬಳಿಸಿ ದಾಖಲೆ ಬರೆದ ಶ್ರೇಯಾಂಕಾ, ಗುಜರಾತ್ ವಿರುದ್ಧ 32 ರನ್ ಗಳಿಂದ ಗೆದ್ದ RCB!

ಕೇರಳ JDS ಘಟಕದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ: ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ; HD ದೇವೇಗೌಡ

SCROLL FOR NEXT