ಡಿಕೆ ಶಿವಕುಮಾರ್ - ಬಿ ಕೆ ಹರಿಪ್ರಸಾದ್ 
ರಾಜಕೀಯ

ಸಂಪುಟ ವಿಸ್ತರಣೆ ಸರ್ಕಸ್: ಅಂತಿಮವಾಗದ ಸಚಿವರ ಪಟ್ಟಿ; ಮಾತುಕತೆ ಮುಂದೂಡಿಕೆ ಎಂದ ಹರಿಪ್ರಸಾದ್

ಇದಕ್ಕೂ ಮೊದಲು, ಹರಿಪ್ರಸಾದ್ ಅವರಿಗೂ ಸಚಿವ ಸ್ಥಾನ ನೀಡಬಹುದು ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ" ಎಂದರು.

ನವದೆಹಲಿ: ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಕರಸತ್ತು ಮತ್ತಷ್ಟು ತೀವ್ರಗೊಂಡಿದ್ದು, ಕಾಂಗ್ರೆಸ್‌ನ ಹಲವು ಶಾಸಕರು ಸಚಿವ ಸ್ಥಾನಕ್ಕಾಗಿ ತೀವ್ರ ಲಾಭಿ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ನೂತನ ಸಚಿವರ ಪಟ್ಟಿ ಅಂತಿಮವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಚರ್ಚೆಗಳು ಒಂದು ಅಥವಾ ಎರಡು ದಿನ ಮುಂದೂಡಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಗುರುವಾರ ಹೇಳಿದ್ದಾರೆ. ಇದರಿಂದ ಸಚಿವ ಆಕಾಂಕ್ಷಿಗಳಿಗೆ ತೀವ್ರ ನಿರಾಶೆಯಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಹರಿಪ್ರಸಾದ್, "ನಾವು ಕೆಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಅದರ ಹೊರತಾಗಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ(ಮಲ್ಲಿಕಾರ್ಜುನ ಖರ್ಗೆ)ರು ಬೆಂಗಳೂರಿಗೆ ಹೋಗಿದ್ದಾರೆ. ಹೀಗಾಗಿ ಒಂದು ಅಥವಾ ಎರಡು ದಿನ ಮಾತುಕತೆ ಮುಂದೂಡಲಾಗಿದೆ. ಚರ್ಚೆಗಳು ಪುನರಾರಂಭವಾದಾಗ ನಮಗೆ ತಿಳಿಸುತ್ತಾರೆ" ಎಂದರು.

ಇದಕ್ಕೂ ಮೊದಲು, ಹರಿಪ್ರಸಾದ್ ಅವರಿಗೂ ಸಚಿವ ಸ್ಥಾನ ನೀಡಬಹುದು ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ" ಎಂದರು.

ಸಚಿವ ಸಂಪುಟ ವಿಸ್ತರಣೆಯನ್ನು ಒಂದೇ ಹಂತದಲ್ಲಿ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಸಹ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಪಕ್ಷದಲ್ಲಿ ಐದಾರು ಬಾರಿ ಶಾಸಕರಾದವರೂ ಇದ್ದಾರೆ. ಹಲವು ಶಾಸಕರಿಗೆ ಈಗಾಗಲೇ ಹಲವು ಬಾರಿ ಸಚಿವರಾಗುವ ಅವಕಾಶ ಸಿಕ್ಕಿದೆ. ಹೀಗಾಗಿ ಯಾರನ್ನು ಸಂಪುಟಕ್ಕ ಸೇರಿಸಿಕೊಳ್ಳಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.

ನಾನು ದೆಹಲಿಗೆ ಯಾವುದೇ ಪಟ್ಟಿಯನ್ನು ತಂದಿಲ್ಲ. ನಾನು ಪಟ್ಟಿ ಹಿಡಿದುಕೊಂಡು ಓಡಾಡುವ ವ್ಯಕ್ತಿ ಅಲ್ಲ. ಪಕ್ಷದ ಅಧ್ಯಕ್ಷನಾಗಿ ನನಗೆ ಎಲ್ಲಾ ಶಾಸಕರೂ ಸಮಾನರು. ನಾನು ಯಾರ ಪರವಾಗಿಯೂ ಲಾಬಿ ಮಾಡುವುದಿಲ್ಲ ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಮ ಮಂದಿರ ಟ್ರಸ್ಟ್‌ಗೆ ಮೊದಲ CEO ನೇಮಕ; 'ಆಪರೇಷನ್ ಸಿಂಧೂರ್'​​ನಲ್ಲಿ ಭಾಗಿಯಾಗಿದ್ದ ಜಿತೇಂದ್ರ ಮಿಶ್ರಾ ಹೆಸರು ಘೋಷಣೆ!

Nepal Floods: 'ನೀವೇನ್ ದಾನ ಕೊಡ್ತಿಲ್ಲ.. ಪ್ರವಾಹಕ್ಕೆ ನೀವೇ ಕಾರಣ.. ಪರಿಹಾರ ಕೊಡಿ ಅಷ್ಟೇ': ಭಾರತ, ಚೀನಾ, ಅಮೆರಿಕಕ್ಕೆ ನೇಪಾಳ ಖಡಕ್ ಆಗ್ರಹ!

‘15 ರೂ. ಹೇರ್ ಡೈ’: ಕಿಂಗ್ ಚಾರ್ಲ್ಸ್ ಭೇಟಿಗೂ ಮುನ್ನ ಪಾಕಿಸ್ತಾನ ನಾಯಕ Babar Azam ಫುಲ್ ಟ್ರೋಲ್!

ಮೇಕೆದಾಟು ವಿಚಾರದಲ್ಲಿ ಕರ್ನಾಟಕ ದಿಟ್ಟ ಹೆಜ್ಜೆ; CWC ಮುಖ್ಯಸ್ಥರ ಜೊತೆ ಸಚಿವರ ಮಹತ್ವದ ಮಾತುಕತೆ

'ನಿಂಗೇನ್ ಅರ್ಜೆಂಟ್', BJP ಪ್ರತಿಭಟನೆ ವೇಳೆ ಹೈಡ್ರಾಮಾ; ದ್ವಿಚಕ್ರ ವಾಹನ ಸವಾರನ ಹೆಲ್ಮೆಟ್ ಬಡಿದು, ಟೈರ್ ಗಾಳಿ ತೆಗೆದ ಮಾಜಿ ಶಾಸಕ! Video