ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ 
ರಾಜಕೀಯ

'ಡಿಕೆಶಿ ಜತೆ 10 ಸಚಿವರು ಪ್ರಮಾಣ ವಚನ ಸ್ವೀಕಾರ'; ಎರಡು ಹಂತದಲ್ಲಿ ಸಂಪುಟ ರಚನೆ: ಕಾಂಗ್ರೆಸ್ ನಾಯಕ

ಸಿದ್ದರಾಮಯ್ಯ ಅವರ ಮಗ ಸಂಪುಟದ ಭಾಗವಾಗಿರುತ್ತಾರೆ ಎಂಬ ಊಹಾಪೋಹದ ಬಗ್ಗೆ ಮಾತನಾಡಿದ ಅವರು, 'ನನಗೆ ತಿಳಿದಿರುವಂತೆ, ಅವರು ಸಂಪುಟದಲ್ಲಿ ಇರುತ್ತಾರೆ' ಎಂದು ಹೇಳಿದರು.

ನವದೆಹಲಿ: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕದ ಹೊಸ ಸರ್ಕಾರದ ಪ್ರಮಾಣವಚನ ಸಮಾರಂಭ ಬುಧವಾರ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಕಾಂಗ್ರೆಸ್ ಶಾಸಕ ಅಶೋಕ್ ಎಂ ಪಟ್ಟಣ್ ಸೋಮವಾರ ಹೇಳಿದ್ದಾರೆ.

'ಇಂದು ರಾತ್ರಿ ಸಭೆ ನಡೆಯಲಿದೆ ಮತ್ತು ನಾಳೆ, ಸಚಿವರ ನೇಮಕದ ಬಗ್ಗೆಯೂ ಸಭೆ ನಡೆಯಲಿದೆ ಎಂದು ನಾನು ಭಾವಿಸುತ್ತೇನೆ. ಪ್ರಮಾಣವಚನ ಸ್ವೀಕಾರ ಸಮಾರಂಭ ಬುಧವಾರ ಸಂಜೆ 4 ಗಂಟೆಗೆ ನಡೆಯಲಿದೆ. ನಾನು ಸಹ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಆದರೆ, ಎರಡು ಹಂತಗಳಲ್ಲಿ ಇದು ನಡೆಯುತ್ತದೆ. ನನಗಿರುವ ಮಾಹಿತಿ ಪ್ರಕಾರ, ಮೊದಲ ಭಾಗದಲ್ಲಿ, 10 ಸದಸ್ಯರ ಪ್ರಮಾಣವಚನ ಸಮಾರಂಭ ಇರುತ್ತದೆ' ಎಂದು ಪಟ್ಟಣ್ ಹೇಳಿದರು.

'ಉಳಿದವರನ್ನು ಮುಂದಿನ ತಿಂಗಳು, ಮೊದಲ ವಾರ ಘೋಷಿಸಲಾಗುವುದು. ಏಕೆಂದರೆ, ವಿಧಾನ ಪರಿಷತ್ ಚುನಾವಣೆ ಇದೆ, ರಾಜ್ಯಸಭಾ ಚುನಾವಣೆ ಇದೆ. ಅದರ ನಂತರ ಸಂಪೂರ್ಣ ಸಚಿವ ಸಂಪುಟ ರಚಿಸಲಾಗುತ್ತದೆ' ಎಂದರು.

ಮೊದಲ ಪಟ್ಟಿಯಲ್ಲಿ ಅವರ ಸೇರ್ಪಡೆ ಬಗ್ಗೆ ಕೇಳಿದಾಗ, 'ನಾನು ತುಂಬಾ ಹಿರಿಯ ವ್ಯಕ್ತಿಯಾಗಿರುವುದರಿಂದ ಮೊದಲ ಪಟ್ಟಿಯಲ್ಲಿಯೇ ಬರುವ ನಿರೀಕ್ಷೆಯಿದೆ. ಮೊದಲ ಪಟ್ಟಿ ಇಲ್ಲದಿದ್ದರೆ, ಎರಡನೇ ಪಟ್ಟಿಯಲ್ಲಿ ಬರುವ ನಿರೀಕ್ಷೆಯಿದೆ' ಎಂದು ಅವರು ಹೇಳಿದರು.

ಪ್ರಸ್ತಾವಿತ ಸಮನ್ವಯ ಸಮಿತಿ ಬಗ್ಗೆ ಸ್ಪಷ್ಟಪಡಿಸುತ್ತಾ, 'ಇಲ್ಲ, ಇಲ್ಲ, ಸಮನ್ವಯ ಸಮಿತಿ ಬಗ್ಗೆ ನನಗೆ ತಿಳಿದಿಲ್ಲ. ಸಮನ್ವಯ ಸಮಿತಿ ಅಥವಾ ಇತರ ಎಲ್ಲ ಸ್ಕ್ರೀನಿಂಗ್ ಸಮಿತಿಗಳ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ನಾವು ಏನನ್ನೂ ನಿರ್ಧರಿಸಲು ಸಾಧ್ಯವಿಲ್ಲ. ಅವರು ನಮ್ಮ ಅಭಿಪ್ರಾಯವನ್ನು ಕೇಳುವುದಿಲ್ಲ, ಏಕೆಂದರೆ ಅದು ಸಂಪೂರ್ಣವಾಗಿ ಹೈಕಮಾಂಡ್ ನಿರ್ಧಾರವಾಗಿದೆ' ಎಂದರು.

ಸಿದ್ದರಾಮಯ್ಯ ಅವರ ಮಗ ಸಂಪುಟದ ಭಾಗವಾಗಿರುತ್ತಾರೆ ಎಂಬ ಊಹಾಪೋಹದ ಬಗ್ಗೆ ಮಾತನಾಡಿದ ಅವರು, 'ನನಗೆ ತಿಳಿದಿರುವಂತೆ, ಅವರು ಸಂಪುಟದಲ್ಲಿ ಇರುತ್ತಾರೆ' ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಾಂಗ್ರೆಸ್ ಸರ್ಕಾರ ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡು "ಶಿಕ್ಷಣಕ್ಕೆ ಹೊಸ ರೂಪ" ನೀಡಲಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಇಂದು ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದಂತೆ ಶಾಲಾ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.

'ನನಗೆ ಶಿಕ್ಷಣ ತುಂಬಾ ಇಷ್ಟ. ಶೈಕ್ಷಣಿಕ ವರ್ಷ ಇಂದಿನಿಂದ ಆರಂಭವಾಗುತ್ತಿದೆ. ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ರಾಷ್ಟ್ರಕ್ಕೆ ಕೊಡುಗೆ ನೀಡಿದ್ದಾರೆ. ನಮ್ಮ ವಿದ್ಯಾರ್ಥಿಗಳು ಪ್ರಪಂಚದಾದ್ಯಂತದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇದರ ಮೂಲ ಶಿಕ್ಷಣ ಕರ್ನಾಟಕದಲ್ಲಿದೆ. ಅವರು ಕರ್ನಾಟಕದ ಮೂಲಕ ಭಾರತವನ್ನು ನೋಡುತ್ತಿದ್ದಾರೆ' ಎಂದು ಹೇಳಿದರು.

'ಈಗ ನಾವು ಹೊಸ ಯುಗಕ್ಕೆ ಹೋಗುತ್ತಿದ್ದೇವೆ. ಇದು ಕೃತಕ ಬುದ್ಧಿಮತ್ತೆಯ ಯುಗ; ಭವಿಷ್ಯದಲ್ಲಿ ನಾವು ಕೃತಕ ಬುದ್ಧಿಮತ್ತೆಯ ಮೂಲಕ ಹೋಗಲಿದ್ದೇವೆ. ಅದು ನಮ್ಮ ನೀತಿಯಾಗಿರುತ್ತದೆ. ಭವಿಷ್ಯದಲ್ಲಿ ನಾವು ಶಿಕ್ಷಣಕ್ಕೆ ಹೊಸ ರೂಪ ನೀಡುತ್ತೇವೆ. ಆದ್ದರಿಂದ, ಪ್ರಸ್ತುತ ಸರ್ಕಾರ ಮತ್ತು ಭವಿಷ್ಯದ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಝೀರೋ ಟ್ರಾಫಿಕ್ ಎಫೆಕ್ಟ್: ಕಾರಿನಲ್ಲಿ ಸಿಲುಕಿದ್ದ ಗರ್ಭಿಣಿ ಮಹಿಳೆ, ರಸ್ತೆಯಲ್ಲೇ ಪತಿ ಪ್ರತಿಭಟನೆ, ತನಿಖೆಗೆ ಆದೇಶ

ಕಾಯಿರಿ, ಇನ್ನೆರೆಡು ದಿನಗಳಲ್ಲಿ ಹೇಳ್ತೀನಿ: ಹೊಸ ಪಕ್ಷ ಸ್ಥಾಪನೆಯ ಊಹಾಪೋಹಗಳ ಬಗ್ಗೆ BJP ನಾಯಕ ಅಣ್ಣಾಮಲೈ ಹೇಳಿಕೆ!

ಬಾಲಿವುಡ್ ನಟಿ ತಾಪ್ಸಿ ಪನ್ನು ತನ್ನ ದೇಹಕ್ಕೆ ತಾನೇ ಟಾರ್ಚರ್ ಕೊಟ್ಟಿದ್ದೇಕೆ?

ಕಲಬುರಗಿ: ಎಮ್ಮೆ ಕರೆತರಲು ಹೋಗಿದ್ದ ತಂದೆ ನೀರಿನಲ್ಲಿ ಮುಳುಗಿ ಸಾವು, ಅಸಹಾಯಕನಾಗಿ ವಿಡಿಯೋ ಮಾಡುತ್ತ ನಿಂತ ಮಗ!

ಹೃದಯ ವಿದ್ರಾವಕ ಘಟನೆ: ಹನಿಮೂನ್‌ಗೆ ತೆರಳುತ್ತಿದ್ದಾಗ ಹೆಲಿಕಾಪ್ಟರ್‌ ಪತನ; ಮದುವೆಯಾದ ಕೆಲವೇ ಗಂಟೆಗಳಲ್ಲಿ ಪತ್ನಿ ಮಡಿಲಲ್ಲೇ ಪ್ರಾಣಬಿಟ್ಟ ಪೈಲಟ್!

SCROLL FOR NEXT