ಯು ಟಿ ಖಾದರ್  
ರಾಜಕೀಯ

'ಎಲ್ಲಾ ಸಚಿವರೂ ಸಶಕ್ತರೇ, ನಾನು ಟೆಸ್ಟ್ ಮ್ಯಾಚ್ ಆಡಿದರೆ ಅವರು ಒನ್ ಡೇ ಮ್ಯಾಚ್ ಆಡುತ್ತಾರೆ': ಯು.ಟಿ ಖಾದರ್

ತಮ್ಮ ಇಲಾಖೆಗಳ ಹಂಚಿಕೆ ಬಗ್ಗೆ ಕೆಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಯು ಟಿ ಖಾದರ್, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲ ಸಚಿವರೂ ಒಗ್ಗಟ್ಟಾಗಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಇಲಾಖೆಗಳ ಹಂಚಿಕೆ ಬಗ್ಗೆ ಕೆಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಯು ಟಿ ಖಾದರ್, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲ ಸಚಿವರೂ ಒಗ್ಗಟ್ಟಾಗಿದ್ದಾರೆ ಎಂದು ಹೇಳಿದ್ದಾರೆ.

ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಂಪೂರ್ಣವಾಗಿ ಒಗ್ಗಟ್ಟಾಗಿದೆ. ಕೆಲವು ಸಚಿವರು ತಮ್ಮ ಖಾತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳಿದ್ದರೂ, ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದರು.

ಎಲ್ಲಾ ಸಚಿವರು ತಮ್ಮ ತಮ್ಮದೇ ಕ್ಷೇತ್ರದಲ್ಲಿ ಕೆಲಸ ಮಾಡುವಲ್ಲಿ ಸಶಕ್ತರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಜನಪರ ಕೆಲಸ ಮಾಡುತ್ತಿದೆ. ಪ್ರತಿಯೊಬ್ಬರೂ ತಮ್ಮದೇ ಶೈಲಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ, ಎಲ್ಲಾ ಶಾಸಕರು ಉತ್ತಮವಾಗಿ ಕೆಲಸ ಮಾಡುತ್ತಾರೆ, ಎಲ್ಲರೂ ಉತ್ತಮ ಸಚಿವರೇ. ನಾನು ಟೆಸ್ಟ್ ಮ್ಯಾಚ್ ಆಡಿದರೆ ಅವರು ಒನ್ ಡೇ ಮ್ಯಾಚ್ ಆಡುತ್ತಾರೆ ಎನ್ನುತ್ತಾರೆ.

ಬಿಜೆಪಿಯವರಿಗೆ ಕಾಂಗ್ರೆಸ್ ನ್ನು ಟೀಕಿಸುವುದೇ ಕೆಲಸವಾಗಿದೆ. ನಮ್ಮನ್ನು ಟೀಕಿಸಿದರೆ ಅವರಿಗೆ ಅಸ್ತಿತ್ವದಂತೆ, ಅವರ ಅಸ್ತಿತ್ವವೇ ನಮ್ಮನ್ನು ಟೀಕಿಸುವುದಾಗಿ, ಅದು ಆಕ್ಸಿಜನ್ ಸಿಕ್ಕಿದಂತಾಗುತ್ತದೆ. ಜನರು ಇದನ್ನೆಲ್ಲಾ ನೋಡುತ್ತಾರೆ, ಅವರಿಗೆ ಅರ್ಥವಾಗುತ್ತದೆ ಎಂದರು.

ಇಂಡಿಯಾ ಬ್ಲಾಕ್ ಮೈತ್ರಿಕೂಟ ಒಗ್ಗಟ್ಟಾಗಿದೆ. 2029ರಲ್ಲಿ ಭಾರತದಲ್ಲಿ ಇಂಡಿಯಾ ಒಕ್ಕೂಟ ಮತ್ತು 2028ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಸಕರ ನಕಲಿ ಸಹಿ ಸಂಗ್ರಹದ ತನಿಖೆ: ಮಮತಾ ಬ್ಯಾನರ್ಜಿಯ ಕಾಲಿಘಾಟ್ ನಿವಾಸಕ್ಕೆ ಸಿಐಡಿ ತಂಡ!

PoKನಲ್ಲಿ ನಿರಾಯುಧ 30 ಜನರ ಹತ್ಯೆ, ಜಗತ್ತು ನೋಡುತ್ತಿದೆ: ಪಾಕ್‌ನ ಕ್ರೌರ್ಯ ಖಂಡಿಸಿದ ಭಾರತ!

'ದುರಹಂಕಾರದ ಪರಮಾವಧಿ, ನೀವೇನು ಶಬರಿಯಲ್ಲ': ಕಚ್ಚಿ ತಿಂದ ಸೇಬು ಜನರತ್ತ ಎಸೆದ ಸಿಎಂ ಡಿಕೆಶಿ ವಿರುದ್ಧ BJP ಕೆಂಡ

ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆ: ಕಾಂಗ್ರೆಸ್ ಗೆ ಅಡ್ಡ ಮತದಾನದ ಭೀತಿ; ಕೈ ಶಾಸಕರು ಬೆಂಗಳೂರಿಗೆ ಶಿಫ್ಟ್!

ಬಿಟ್​ ಕಾಯಿನ್ ಪ್ರಕರಣ: ಮೊಹಮ್ಮದ್ ನಲಪಾಡ್, ಸಹೋದರಿನಿ​ಗೆ ಬಿಗ್ ಶಾಕ್; ED ನೋಟಿಸ್

SCROLL FOR NEXT