ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗ ಸಮುದಾಯದ ಮತ್ತೊಬ್ಬ ನಾಯಕನಾಗಿ ಬೆಳೆಯಬಾರದೆಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಕುಟುಂಬ ಕುತಂತ್ರ ಮಾಡಿತು. ಅದಕ್ಕಾಗಿ, ಶಿವಕುಮಾರ್ ವಿರುದ್ಧ ಅಕ್ರಮ ತನಿಖೆಗೆ ಪ್ರಧಾನಿಗೆ ಪತ್ರ ಬರೆದಿದ್ದರು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಆರೋಪಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಶಿವಕುಮಾರ್ ಅವರನ್ನು ಬಲಿ ಹಾಕಲು ಕುಮಾರಸ್ವಾಮಿ ಯಾರ‍್ಯಾರಿಗೆ ಕರೆ ಮಾಡಿದ್ದಾರೆ ಎಂಬುದನ್ನು ಸಮಯ ಬಂದಾಗ ಹೇಳುತ್ತೇನೆ. ಈಗ ಡಿಕೆಶಿ ಮುಖ್ಯಮಂತ್ರಿಯಾಗಿರುವುದಕ್ಕೆ ಹೊಟ್ಟೆಕಿಚ್ಚುಪಡುತ್ತಿದ್ದಾರೆ. ಅದಕ್ಕಾಗಿ ಅವರೇ ಹುಟ್ಟು ಹಾಕಿದ ಬಿಡದಿ ಟೌನ್‌ಶಿಪ್ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ಶಿವಕುಮಾರ್ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಸೇರಿಕೊಂಡಿರುವುದೇ ಶಿವಕುಮಾರ್ ಅವರಿಗೆ ತೊಂದರೆ ಕೊಡಲು. ತಮ್ಮನ್ನು ಬಿಟ್ಟರೆ ಒಕ್ಕಲಿಗರಲ್ಲಿ ಬೇರೊಬ್ಬರು ಸಿ.ಎಂ ಆಗಬಾರದು ಎಂಬುದು ಎಚ್‌ಡಿಕೆ ಮನಸ್ಸಿನಲ್ಲಿತ್ತು. ಅದಕ್ಕಾಗಿ, ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದಾರೆ.
ಅದನ್ನು ಮೀರಿ ಶಿವಕುಮಾರ್ ಮುಖ್ಯಮಂತ್ರಿಯಾದರು. ಒಕ್ಕಲಿಗರಲ್ಲಿ ಈಗ ಎರಡನೇ ನಾಯಕತ್ವ ಪ್ರಬಲವಾಗಿ ಬೆಳೆಯುತ್ತಿದೆ. ಇದನ್ನು ಹೇಗಾದರೂ ಮಾಡಿ ಚಿವುಟಬೇಕು ಎಂದು ಕಸರತ್ತು ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.