ಯತೀಂದ್ರ ಸಿದ್ದರಾಮಯ್ಯ  
ರಾಜಕೀಯ

ಸಚಿವ ಯತೀಂದ್ರ ಸಿದ್ದರಾಮಯ್ಯಗೆ ಮತ್ತೊಂದು ಮಹತ್ವದ ಸ್ಥಾನ: CLP ಸಭೆಯಲ್ಲಿ ಸುಳಿವು!

ಸಂಪುಟದಲ್ಲಿರುವ ಏಕೈಕ ಮೇಲ್ಮನೆ ಸದಸ್ಯರಾಗಿರುವ ಯತೀಂದ್ರ ಅವರ ತಂದೆ ಸಿದ್ದರಾಮಯ್ಯ, ಸಿಡಬ್ಲ್ಯೂಸಿ ಸದಸ್ಯರೂ ಆಗಿದ್ದಾರೆ.

ಬೆಂಗಳೂರು: ಮಂಗಳವಾರ ರೆಸಾರ್ಟ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಮತ್ತು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಅವರಿಗೆ ವೇದಿಕೆಯಲ್ಲಿ ಪ್ರಾಮುಖ್ಯತೆ ನೀಡಲಾಗಿತ್ತು.

ಇದರಿಂದಾಗಿ ಅವರು ವಿಧಾನ ಪರಿಷತ್ತಿನಲ್ಲಿ ಪಕ್ಷದ ನಾಯಕರಾಗುತ್ತಾರೆಯೇ ಎಂಬ ಊಹಾಪೋಹಗಳು ದಟ್ಟವಾಗಿವೆ. ಸಂಪುಟದಲ್ಲಿರುವ ಏಕೈಕ ಮೇಲ್ಮನೆ ಸದಸ್ಯರಾಗಿರುವ ಯತೀಂದ್ರ ಅವರ ತಂದೆ ಸಿದ್ದರಾಮಯ್ಯ, ಸಿಡಬ್ಲ್ಯೂಸಿ ಸದಸ್ಯರೂ ಆಗಿದ್ದಾರೆ.

ಸಿಎಲ್‌ಪಿ ನಾಯಕರಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವರಾದ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಯು.ಟಿ. ಖಾದರ್ ಮತ್ತು ಕೆ.ಎಚ್. ​​ಮುನಿಯಪ್ಪ ಮತ್ತು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಯತೀಂದ್ರಗೆ ಅವಕಾಶ ಸಿಕ್ಕಿತ್ತು.

ಯತೀಂದ್ರ ಸಿದ್ದರಾಮಯ್ಯ ಅವರು ಹಿರಿಯರ ಗುಂಪಿಗೆ ಸೇರ್ಪಡೆಗೊಳ್ಳುವುದರಿಂದ ಪಕ್ಷವು ಅವರಿಗೆ ಪ್ರಾಮುಖ್ಯತೆ ನೀಡುವುದನ್ನು ಮುಂದುವರಿಸುತ್ತದೆ, ಹಾಗೂ ಅವರಿಗೆ ಸದನ ನಾಯಕನ ಹುದ್ದೆಯನ್ನು ಸಹ ನೀಡಬಹುದು ಎಂಬ ಸೂಚನೆಯಾಗಿದೆ ಎಂದು ಹೇಳಲಾಗುತ್ತಿದೆ.

ಸಂಪುಟ ವಿಸ್ತರಣೆಯ ಸಮಯದಲ್ಲಿ ಎಂಎಲ್‌ಸಿಗಳಾದ ಸಲೀಂ ಅಹ್ಮದ್ ಮತ್ತು ವಸಂತ್ ಕುಮಾರ್ ಅವರಿಗೆ ಸಚಿವ ಸ್ಥಾನ ದೊರೆತರೂ ಯತೀಂದ್ರ ಅವರ ಸ್ಥಾನ ಬದಲಾಗುವ ಸಾಧ್ಯತೆ ಕಡಿಮೆ ಎಂದು ಕಾಂಗ್ರೆಸ್ ಎಂಎಲ್‌ಸಿಯೊಬ್ಬರು ತಿಳಿಸಿದ್ದಾರೆ.

ಶಿವಕುಮಾರ್, ಹರಿಪ್ರಸಾದ್ ಮತ್ತು ಸುರ್ಜೆವಾಲಾ ಅವರು ಸಿದ್ದರಾಮಯ್ಯ ಅವರು ಸಿಎಲ್‌ಪಿಯನ್ನು ಉದ್ದೇಶಿಸಿ ಮಾತನಾಡಬೇಕೆಂದು ಒತ್ತಾಯಿಸಿದರೂ, ಸಿದ್ದರಾಮಯ್ಯ ಆ ಪ್ರಸ್ತಾಪವನ್ನು ನಯವಾಗಿಯೇ ತಿರಸ್ಕರಿಸಿದರು. ಒಬ್ಬ ಶಾಸಕರು ಇದನ್ನು ರಾಜತಾಂತ್ರಿಕತೆಯನ್ನು ಪ್ರದರ್ಶನ ಎಂದು ಪರಿಗಣಿಸೆಲಾಗಿದೆ,

ಸಿದ್ದರಾಮಯ್ಯ ಅವರು ನಾಯಕತ್ವ ಬದಲಾವಣೆಗೆ ಮುಂಚಿತವಾಗಿ ತಮ್ಮ ಕೆಲವು ನಿಷ್ಠಾವಂತರು ತಮ್ಮ ವಿರುದ್ಧ ಹೋದರು ಎಂದು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ. ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ಮತದಾರರ ಪಟ್ಟಿಯ ಬಗ್ಗೆ ಜಾಗರೂಕರಾಗಿರಲು ಶಾಸಕರಿಗೆ ಸೂಚಿಸಿದರು .

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಧ್ಯಪ್ರಾಚ್ಯ ಸಂಘರ್ಷ ಕೊನೆಗೂ ಅಂತ್ಯ: Pak ಮಧ್ಯಸ್ಥಿಕೆಯಲ್ಲಿ US-Iran ನಡುವೆ ಶಾಂತಿ ಒಪ್ಪಂದ; ನೌಕಾ ದಿಗ್ಬಂಧನ ತೆರವು, ತಕ್ಷಣದಿಂದಲೇ Hormuz ಜಲಸಂಧಿ ಓಪನ್‌..!

ಇದು ಅಂತಿಮ ಒಪ್ಪಂದವಲ್ಲ, ದುರ್ವರ್ತನೆ ತೋರಿದರೆ ಯುದ್ಧ ಪುನರಾರಂಭ: ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್- ಜೆಡಿಎಸ್ ಪೈಪೋಟಿ -ಅಡ್ಡ ಮತದಾನದ ಭೀತಿ! 7ನೇ ಸ್ಥಾನ ಗೆಲ್ಲೋರು ಯಾರು?

ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್ Power game: ವೈಯಕ್ತಿಕ ಪ್ರತಿನಿಧಿಯಾಗಿ ಜೋಬಿನ್ ಜೋಸೆಫ್ ನೇಮಕ, ಹಿಂದಿನ ರಾಜಕೀಯ ಲೆಕ್ಕಾಚಾರವೇನು..?

ಗೃಹಲಕ್ಷ್ಮಿ ದುರುಪಯೋಗಕ್ಕೆ ಬ್ರೇಕ್; ಅರ್ಜಿ ನಮೂನೆಯಲ್ಲಿ ಸರ್ಕಾರ ಮಹತ್ವದ ಬದಲಾವಣೆ, Voter ID, Aadhaar-Link ಮಾಹಿತಿ ಕಡ್ಡಾಯ ಸಾಧ್ಯತೆ..!

SCROLL FOR NEXT