ಕುಮಾರ್ ಬಂಗಾರಪ್ಪ ಮತ್ತು ಯತ್ನಾಳ್ 
ರಾಜಕೀಯ

ಅಡ್ಡಮತದಾನದಿಂದ ಭುಗಿಲೆದ್ದ ಅಸಮಾಧಾನ: ಪಕ್ಷ ನಿಷ್ಠ ಯತ್ನಾಳ್‌ ಗೆ ವಿಪಕ್ಷ ನಾಯಕನ ಸ್ಥಾನ ನೀಡಿ; ಕುಮಾರ್ ಬಂಗಾರಪ್ಪ

ಅವರ ನಿಷ್ಠೆಯನ್ನು ಪರಿಗಣಿಸಿ, ಹೈಕಮಾಂಡ್ ತಪ್ಪುಗಳನ್ನು ಮನ್ನಿಸಬೇಕು. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ವಿಪಕ್ಷ ನಾಯಕನ ಸ್ಥಾನ ನೀಡಬೇಕುಅಲ್ಲದೆ, ಯತ್ನಾಳ್‌ ಅವರಿಗೆ ವಿಪಕ್ಷ ನಾಯಕ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.

ಬೆಂಗಳೂರು: ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನ ಪಕ್ಷದಿಂದ ಉಚ್ಛಾಟನೆ ಮಾಡಿದ್ರೂ, ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ. ಅವರ ತಪ್ಪನ್ನು ಮನ್ನಿಸಬೇಕು. ಪಕ್ಷಕ್ಕೆ ಕರೆತಂದು ಬಿಜೆಪಿಯಿಂದ ವಿಪಕ್ಷ ನಾಯಕರನ್ನಾಗಿ ಮಾಡಬೇಕು ಎಂದು ರೆಬೆಲ್‌ ನಾಯಕ ಕುಮಾರ್‌ ಬಂಗಾರಪ್ಪ ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಆಕ್ರೋಶ ಹೊರಹಾಕಿರುವ ಕುಮಾರ್‌ ಬಂಗಾರಪ್ಪ ಅವರು, ಬಿಜೆಪಿ ರಾಜ್ಯ ಘಟಕದಲ್ಲಿ ಬದಲಾವಣೆ ತರುವಂತೆ ದೆಹಲಿ ನಾಯಕರಿಗೆ ಮನವಿ ಮಾಡಿದ್ದಾರೆ.

ಪಕ್ಷದಿಂದ ಉಚ್ಛಾಟನೆ ಮಾಡಿದ್ದರೂ ಯತ್ನಾಳ್ ಅವರು ಬಿಜೆಪಿ ಪರವಾಗಿಯೇ ಮತ ಚಲಾಯಿಸಿದ್ದಾರೆ. ಅವರ ನಿಷ್ಠೆಯನ್ನು ಪರಿಗಣಿಸಿ, ಹೈಕಮಾಂಡ್ ತಪ್ಪುಗಳನ್ನು ಮನ್ನಿಸಬೇಕು. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ವಿಪಕ್ಷ ನಾಯಕನ ಸ್ಥಾನ ನೀಡಬೇಕುಅಲ್ಲದೆ, ಯತ್ನಾಳ್‌ ಅವರಿಗೆ ವಿಪಕ್ಷ ನಾಯಕ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.

ಹಾಲಿ ವಿಪಕ್ಷ ಸ್ಥಾನಗಳು, ರಾಜ್ಯಾಧ್ಯಕ್ಷ ಸ್ಥಾನ, ಪದಾಧಿಕಾರಿಗಳನ್ನ ಮುಂದುವರೆಸುವ ವಿಚಾರದಲ್ಲಿ ಮರು ಅವಲೋಕನ ಮಾಡಬೇಕಿದೆ. ಬೇರೆ ರಾಜ್ಯಗಳ ಬಿಜೆಪಿ ಘಟಕಗಳಲ್ಲಿ ಬದಲಾವಣೆ ಮಾಡಿದಂತೆ ರಾಜ್ಯ ಬಿಜೆಪಿಯಲ್ಲೂ ಮಾಡಬೇಕಿದೆ ಎಂದರಲ್ಲದೇ ಪಕ್ಷದ ಬಲವರ್ಧನೆಗೆ ಪಕ್ಷ ಬಿಟ್ಟವರ ಘರ್ ವಾಪಸಿಗೂ ಕುಮಾರ್ ಬಂಗಾರಪ್ಪ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದನ ವಿರಾಮ ಒಪ್ಪಂದವಾದ 24 ಗಂಟೆಗಳಲ್ಲೇ ಲೆಬನಾನ್ ಮೇಲೆ ಇಸ್ರೇಲ್ ದಾಳಿ; ಐವರ ಸಾವು, ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ

ಮೋದಿ Great leader, ಯುದ್ಧಗಳಿಂದ ದೂರ ಉಳಿಯುವ ಬುದ್ಧಿವಂತ, ಇಂತಹ ನಾಯಕ Hollywoodನಲ್ಲೂ ಸಿಗಲ್ಲ: ಡೊನಾಲ್ಡ್ ಟ್ರಂಪ್

ಇಸ್ರೇಲ್-ಲೆಬನಾನ್ ನಡುವೆ ಮುಂದುವರೆದ ಸಂಘರ್ಷ: ಇನ್ನು ಸುಮ್ಮನಿರಲ್ಲ, ‘ಒಪ್ಪಂದ ಪಾಲಿಸಿ-ಇಲ್ಲವೇ ಪರಿಣಾಮ ಎದುರಿಸಿ’; ಅಮೆರಿಕ ವಿರುದ್ಧ ಇರಾನ್ ಗುಡುಗು

ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು: FATF ಉಪಾಧ್ಯಕ್ಷರಾಗಿ ವಿವೇಕ್ ಅಗರ್ವಾಲ್ ಆಯ್ಕೆ

ಗ್ಯಾರೆಂಟಿ ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸಿಎಂ ಡಿ.ಕೆ ಶಿವಕುಮಾರ್ ಸೂಚನೆ