ಪ್ರದೀಪ್ ಈಶ್ವರ್ 
ರಾಜಕೀಯ

ಮುಂದಿನ ಚುನಾವಣೆಯಲ್ಲಿ ನೀನು ಸೋತರೆ HDK ಮನೆಯ ವಾಚ್ ಮೆನ್ ಆಗ್ತೀಯಾ? ಪ್ರದೀಪ್ ಈಶ್ವರ್ ಗೆ JDS ಶಾಸಕನ ಸವಾಲು

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತರೆ ನಿನ್ನ ಮನೆಯ ವಾಚ್ ಮೆನ್ ಆಗ್ತೀನೀ, ನೀನು ಸೋತರೆ ಎಚ್ ಡಿ ಕುಮಾರಸ್ವಾಮಿ ಮನೆಯ ವಾಚ್ ಮೆನ್ ಆಗ್ತೀಯಾ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಗೆ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಸವಾಲು ಹಾಕಿದ್ದಾರೆ.

ಚಿಕ್ಕಬಳ್ಳಾಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತರೆ ನಿನ್ನ ಮನೆಯ ವಾಚ್ ಮೆನ್ ಆಗ್ತೀನೀ, ನೀನು ಸೋತರೆ ಎಚ್ ಡಿ ಕುಮಾರಸ್ವಾಮಿ ಮನೆಯ ವಾಚ್ ಮೆನ್ ಆಗ್ತೀಯಾ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಗೆ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಸವಾಲು ಹಾಕಿದ್ದಾರೆ.

ಜೆಡಿಎಸ್ ಪಕ್ಷ ದೇವೇಗೌಡರು, ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡಿದರೆ ಸಹಿಸುವುದಿಲ್ಲ. ಕುಮಾರಸ್ವಾಮಿಯವರು ಎಲ್ಲಿಯಾದರೂ ಪ್ರದೀಪ್ ಈಶ್ವರ್ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡಿದ್ದಾರಾ? ಮಾಡಿದ್ದರೆ ನಾನು ಪ್ರದೀಪ್ ಅವರ ಕ್ಷಮೆ ಕೇಳುತ್ತೇನೆ. ಆದರೆ ಹೆಚ್.ಡಿ.ಕುಮಾರಸ್ವಾಮಿಯವರು ಸುಮ್ಮನಿದ್ದರೂ ಅವರ ವಿರುದ್ಧ ಪ್ರದೀಪ್ ಈಶ್ವರ್ ಮಾತನಾಡುತ್ತಿದ್ದಾನೆ ಎಂದು ಬಿ.ಎನ್.ರವಿಕುಮಾರ್ ಕಿಡಿಕಾರಿದರು.

ಜೆಡಿಒಎಸ್ ನಾಯಕರ ವಿರುದ್ಧ ಮಾತನಾಡಿದರೆ ಸಚಿವ ಸ್ಥಾನ ಸಿಗುತ್ತದೆ ಎಂಬ ಭ್ರಮೆಯಲ್ಲಿ ಪ್ರದೀಪ್ ಈಶ್ವರ್ ಇದ್ದಂತೆ ಕಾಣುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಸ್ಥಳೀಯ ಚುನಾವಣೆಯಲ್ಲಿಯೇ ಇವರಿಗೆ ಕಾಂಗ್ರೆಸ್ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಶಾಸಕ ಪ್ರದೀಪ್ ಈಶ್ವರ್ ಕೊಡುಗೆ ಏನು? ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 47 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!