ಬಿ.ಎಸ್.ಯಡಿಯೂರಪ್ಪ 
ರಾಜಕೀಯ

2028 ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 140-150 ಸ್ಥಾನದಲ್ಲಿ BJP ಗೆಲುವು ಖಚಿತ: ಬಿ.ಎಸ್ ಯಡಿಯೂರಪ್ಪ ವಿಶ್ವಾಸ

ನಾನು ಸಂಪೂರ್ಣ ಮನಸ್ಸಿನಿಂದ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 140-150 ಸ್ಥಾನಗಳನ್ನು ಗೆಲ್ಲುವುದು ಖಚಿತ.

ದಾವಣಗೆರೆ: 2028ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೊನ್ನಾಳಿಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, 2028ರ ಚುನಾವಣೆಯಲ್ಲಿ ಬಿಜೆಪಿ ಇತಿಹಾಸವನ್ನು ಮರು ಸೃಷ್ಟಿಸಲಿದೆ ಎಂದು ಹೇಳಿದರು.

ನಾನು ಸಂಪೂರ್ಣ ಮನಸ್ಸಿನಿಂದ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 140-150 ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂದು ತಿಳಿಸಿದರು.

ಕಾಂಗ್ರೆಸ್ ಆಡಳಿತದಿಂದ ಬೇಸತ್ತ ಮತದಾರರು ಬಿಜೆಪಿ ಪರ ಮತ ಚಲಾಯಿಸಲು ನಿರ್ಧರಿಸಿದ್ದಾರೆ. “ಬಿಜೆಪಿಯಿಂದ ದೂರವಾದ ನಾಯಕರು ಮತ್ತೆ ಪಕ್ಷಕ್ಕೆ ಬರಬೇಕು. ಒಗ್ಗಟ್ಟಿನಿಂದ ಇದ್ದರೆ ಬಿಜೆಪಿಯನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ. ಭಿನ್ನಾಭಿಪ್ರಾಯಗಳನ್ನು ತೊರೆದು, ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬುದೇ ನಮ್ಮ ಗುರಿ,” ಎಂದು ತಿಳಿಸಿದರು.

ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ ಹಿನ್ನೆಲೆ ಮತದಾರರು ಅವರಿಗೆ ಸ್ಪಷ್ಟ ಬಹುಮತ ನೀಡಿದರು. ಈ ಕಾರಣದಿಂದ ವಿರೂಪಾಕ್ಷಪ್ಪ. ರಾಮಚಂದ್ರ, ಬಸವರಾಜ ನಾಯಕ್ ಮತ್ತು ಸಂಪಂಗಿ ಸೇರಿದಂತೆ ಹಲವು ನಾಯಕರು ಸೋಲನುಭವಿಸಿದರು. ಇದೀಗ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ, 2028ರ ಚುನಾವಣೆಯಲ್ಲಿ ಸಂಬಂಧಿತ ಕ್ಷೇತ್ರಗಳಲ್ಲಿ ಈ ನಾಯಕರು ಗೆಲ್ಲುವಂತೆ ಕೆಲಸ ಮಾಡಬೇಕೆಂದು ಕರೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾಗೆ ಕೌಂಟರ್: ಇಂಡೋ-ಪೆಸಿಫಿಕ್‌ನಲ್ಲಿ ಭದ್ರತಾ ಸಹಕಾರ ಹೆಚ್ಚಿಸಲು 'Quad' ಮಹತ್ವದ ತೀರ್ಮಾನ, ಹೊಸ ಕಾರ್ಯಯೋಜನೆ ಘೋಷಿಸಿದ ಮಾರ್ಕೊ ರುಬಿಯೋ..!

ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ, ಸ್ಥಿರತೆ-ಸಮೃದ್ಧಿಗೆ ‘ವಿಶ್ವಾಸಾರ್ಹ ಪಾಲುದಾರಿಕೆ’ ಅಗತ್ಯ: Quad ಸಭೆಯಲ್ಲಿ ಜೈಶಂಕರ್‌ ಮಹತ್ವದ ಕರೆ..!

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ತಮಿಳುನಾಡು ಸರ್ಕಾರದಿಂದ ಮತ್ತೊಂದು ಮಹತ್ವದ ಘೋಷಣೆ: ಸಣ್ಣ ರೈತರ ₹50,000 ವರೆಗಿನೆ ಬೆಳೆ ಸಾಲ ಮನ್ನಾ!

ಸತತ 4ನೇ ಬಾರಿ CNG ದರ ಏರಿಕೆ: ಕೆಜಿಗೆ 2 ರೂ. ಹೆಚ್ಚಳ, ವಾಹನ ಸವಾರರಿಗೆ ಶಾಕ್‌

SCROLL FOR NEXT