ಬೈರತಿ ಸುರೇಶ್ 
ರಾಜಕೀಯ

ಬೈರತಿ ಸುರೇಶ್ 2ನೇ ಸಿಎಂ ಇದ್ದಂತೆ: ಮುಖ್ಯಮಂತ್ರಿಗಿಂತ ತುಂಬಾ ಪವರ್‌ಫುಲ್‌; ಜಿ.ಟಿ ದೇವೇಗೌಡ

ಇದಕ್ಕೆ ಬೈರತಿ ಸುರೇಶ್‌ ಉತ್ತರ ನೀಡುವ ಸಂದರ್ಭದಲ್ಲಿ ದೇವೇಗೌಡ ಈ ಮಾತುಗಳನ್ನು ಹೇಳಿದರು. ಮೈಸೂರಿನ ಕುಡಿಯುವ ನೀರು ಮತ್ತು ಒಳಚರಂಡಿ ಸಮಸ್ಯೆಯ ಅರಿವು ಮುಖ್ಯಮಂತ್ರಿ ಅವರಿಗಿದೆ.

ಬೆಂಗಳೂರು: ನೀವು ರಾಜ್ಯದ ಎರಡನೇ ಮುಖ್ಯಮಂತ್ರಿ ಇದ್ದ ಹಾಗೆ. ಹಾಗೆ ನೋಡಿದರೆ ಮುಖ್ಯಮಂತ್ರಿಗಿಂತ ನೀವೇ ಪವರ್‌ಫುಲ್‌ ಎಂದು ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರು ಸಚಿವ ಬೈರತಿ ಸುರೇಶ್ ಅವರ ಕಾಲೆಳೆದರು.

ವಿಧಾನಸಭೆಯಲ್ಲಿ ಪ್ರಶ್ನೋತರ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಒಳಚರಂಡಿ ಕಾಮಗಾರಿ ಬಗ್ಗೆ ಶಾಸಕ ಜಿ.ಟಿ ದೇವೇಗೌಡ ಪ್ರಸ್ತಾಪಿಸಿದರು. ಇದಕ್ಕೆ ಬೈರತಿ ಸುರೇಶ್‌ ಉತ್ತರ ನೀಡುವ ಸಂದರ್ಭದಲ್ಲಿ ದೇವೇಗೌಡ ಈ ಮಾತುಗಳನ್ನು ಹೇಳಿದರು. ಮೈಸೂರಿನ ಕುಡಿಯುವ ನೀರು ಮತ್ತು ಒಳಚರಂಡಿ ಸಮಸ್ಯೆಯ ಅರಿವು ಮುಖ್ಯಮಂತ್ರಿ ಅವರಿಗಿದೆ. ನಗರಾಭಿವೃದ್ಧಿ ಸಚಿವರು ಹೇಳಿದರೆ ಮುಖ್ಯಮಂತ್ರಿ ಕೇಳಿಯೇ ಕೇಳುತ್ತಾರೆ ಎಂದು ಕಿಚಾಯಿಸಿದರು.

ಈ ವೇಳೆ ಸಮಸ್ಯೆ ಪರಿಹಾರಕ್ಕೆ ಸಿಎಂಗೆ 40 ವರ್ಷದ ಅನುಭವ ಇದೆ. ನಗರಾಭಿವೃದ್ಧಿ ಸಚಿವರು ಹೇಳಿದರೆ ಮುಖ್ಯಮಂತ್ರಿಗಳು ಕೇಳಿಯೇ ಕೇಳ್ತಾರೆ. ಬೈರತಿ ಸುರೇಶ್ ಅಂದ್ರೆ ಎರಡನೇ ಮುಖ್ಯಮಂತ್ರಿ ಇದ್ದಂಗೆ. ಮುಖ್ಯಮಂತ್ರಿ ಗಳಿಗಿಂತ ನೀವೇ ಪವರ್ ಫುಲ್ ಎಂದು ಜಿಟಿ ದೇವೇಗೌಡ ಹೇಳಿದರು.

ಜಿಟಿ ದೇವೇಗೌಡ ಅವರ ಮಾತು ಸದನದ ಗಮನ ಸೆಳೆಯಿತು. ಉತ್ತರ ಕೊಡುವ ಸಂದರ್ಭದಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ ಬೈರತಿ ಸುರೇಶ್, 'ಹೇಳಿ ಹೇಳಿ ಇರೋ ಮಂತ್ರಿಸ್ಥಾನವನ್ನೂ ತೆಗೆದುಬಿಟ್ಟಾರು' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಚಿವ ಸಂಪುಟ ವಿಸ್ತರಣೆಯಲ್ಲಿ ಭಾರೀ ಗೊಂದಲ: ಕೊನೇ ಕ್ಷಣದಲ್ಲಿ ಮಂಕಾಳು ವೈದ್ಯಗೆ ಕಾಂಗ್ರೆಸ್ ಶಾಕ್‌; ಸಚಿವರ ಪಟ್ಟಿಯಲ್ಲಿ ಹೆಸರು ಇದ್ದರೂ ಕೈತಪ್ಪಿದ ಮಂತ್ರಿಗಿರಿ..!

ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ: ಇಂದು ಸಂಜೆ 4.05 ಕ್ಕೆ ಪ್ರಮಾಣವಚನ ಕಾರ್ಯಕ್ರಮ, ನೂತನ ಸಚಿವರ ಪಟ್ಟಿ ಹೀಗಿದೆ ನೋಡಿ…

ಸಂಪುಟ ವಿಸ್ತರಣೆಯ ಬೆನ್ನಲ್ಲೇ ವಿಧಾನಸಭೆಗೆ ಸ್ಪೀಕರ್​​, ಪರಿಷತ್ತಿಗೆ​​ ಸಭಾಪತಿ ಹೆಸರು ಪ್ರಕಟಿಸಿದ AICC

ಸಂಪುಟ ವಿಸ್ತರಣೆಯಲ್ಲಿ ಭಾರೀ ಟ್ವಿಸ್ಟ್; ಸಿದ್ದು ಸಂಪುಟದ 12 ಸಚಿವರಿಗೆ ಕೊಕ್; ಹಿರಿಯರಿಗೂ ಕೈತಪ್ಪಿದ ಸಚಿವ ಸ್ಥಾನ..!

ಬೆಂಗಳೂರು ದಕ್ಷಿಣ ಜಿಲ್ಲೆ: ಮುಖ್ಯಮಂತ್ರಿ ಸ್ಥಾನದ ಜೊತೆಗೆ ಮಾಗಡಿ ಶಾಸಕ ಹೆಚ್. ಸಿ. ಬಾಲಕೃಷ್ಣಗೆ ಒಲಿದ ಸಚಿವ ಸ್ಥಾನ!