ಇಂದು ನಾಮಪತ್ರ ಸಲ್ಲಿಸಿದ ಸಮರ್ಥ್ ಶಾಮನೂರ್  
ರಾಜಕೀಯ

ದಾವಣಗೆರೆ ದಕ್ಷಿಣ ಉಪಚುನಾವಣೆ: ಟಿಕೆಟ್ ಘೋಷಣೆಗೆ ಮೊದಲೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ

ಇಂದು ಬೆಳಗ್ಗೆ ಪೂಜೆ ಪುನಸ್ಕಾರ ಮಾಡಿ, ದೇವಸ್ಥಾನಕ್ಕೆ ಭೇಟಿ ಕೊಟ್ಟ ನಂತರ ಮಧ್ಯಾಹ್ನ ತಮ್ಮ ತಾಯಿ ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಆಪ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ಬೆಂಗಳೂರು: ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆ ಕಗ್ಗಂಟು ಇನ್ನೂ ಬಗೆಹರಿದಿಲ್ಲ. ಈ ನಡುವೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಇಂದು ಮಹತ್ವದ ಬೆಳವಣಿಗೆಯಾಗಿದ್ದು ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರ ಮಗ ಸಮರ್ಥ್ ಶಾಮನೂರು ಇಂದು ಯಾವುದೇ ಪಕ್ಷದಡಿಯಲ್ಲಿ ಬಿ ಫಾರ್ಮ್ ಇಲ್ಲದೆಯೇ ನಾಮಪತ್ರ ಸಲ್ಲಿಸಿದ್ದಾರೆ.

ಇಂದು ಬೆಳಗ್ಗೆ ಪೂಜೆ ಪುನಸ್ಕಾರ ಮಾಡಿ, ದೇವಸ್ಥಾನಕ್ಕೆ ಭೇಟಿ ಕೊಟ್ಟ ನಂತರ ಮಧ್ಯಾಹ್ನ ತಮ್ಮ ತಾಯಿ ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಆಪ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಟಿಕೆಟ್ ಹಂಚಿಕೆಯ ಗೊಂದಲ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಗೆ ಸಡ್ಡು ಹೊಡೆದು ಸಚಿವ ಮಲ್ಲಿಕಾರ್ಜುನ್ ತಮ್ಮ ಮಗನ ಕೈಯಿಂದ ಟಿಕೆಟ್ ಹಂಚಿಕೆ ಮಾಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇತ್ತ ಕಳೆದ ರಾತ್ರಿ ಬೆಂಗಳೂರಿಗೆ ಆಗಮಿಸಿದ ಸಚಿವ ಮಲ್ಲಿಕಾರ್ಜುನ್ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಜೊತೆ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅವರಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣೆ ಗೆಲುವಿನ ಜವಾಬ್ದಾರಿಯನ್ನು ಕಾಂಗ್ರೆಸ್ ನೀಡಿದೆ. ಆದರೆ ಅಭ್ಯರ್ಥಿ ಯಾರು ಎಂದು ಇದುವರೆಗೆ ಅಧಿಕೃತವಾಗಿ ಘೋಷಣೆಯಾಗಿಲ್ಲ.

ಯುವಕರು ಹೆಚ್ಚೆಚ್ಚು ರಾಜಕೀಯಕ್ಕೆ ಬರಬೇಕು

ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದೆ ಹಾಗೂ ಸಮರ್ಥ್ ತಾಯಿ ಡಾ ಪ್ರಭಾ ಮಲ್ಲಿಕಾರ್ಜುನ್ ಯುವಜನತೆ ಇಂದಿನ ದಿನಗಳಲ್ಲಿ ಹೆಚ್ಚಾಗಿ ರಾಜಕೀಯ ಕ್ಷೇತ್ರಕ್ಕೆ ಬರಬೇಕು, ಆ ಮೂಲಕ ದೇಶದ ಭವಿಷ್ಯ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪೆಟ್ರೋಲಿಯಂ ಉತ್ಪನ್ನಗಳ ಮಿತಬಳಕೆ "ಈಗಿನ ಅಗತ್ಯ"-ಪ್ರಧಾನಿ ಮೋದಿ: ಮುಂದೆ ಕಾದಿದೆಯಾ ಸಂಕಷ್ಟದ ದಿನಗಳು?

IPL 2026: ಕೊನೆಯ ಎಸೆತದಲ್ಲಿ RCBಗೆ ರೋಚಕ ಜಯ; MI ವಿರುದ್ಧದ ಪಂದ್ಯ ಗೆಲ್ಲಿಸಿದ ಕೃನಾಲ್, ಭುವಿ; ಅಗ್ರಸ್ಥಾನಕ್ಕೇರಿದ ಆರ್‌ಸಿಬಿ!

1 ಮತದಿಂದ DMK ಅಭ್ಯರ್ಥಿ ಪೆರಿಯಕರುಪ್ಪನ್ ಸೋಲು; ಅಂಚೆ ಮತ ಗೊಂದಲದ ಬಗ್ಗೆ ECI ವಿರುದ್ಧ ಮದ್ರಾಸ್ ಹೈಕೋರ್ಟ್ ಕಿಡಿ!

S Keerthana: ವಿಜಯ್ ಕ್ಯಾಬಿನೆಟ್ ನಲ್ಲಿ ಪಂಚಭಾಷಾ ಪಾರಂಗತೆ; ಅತಿ ಕಿರಿಯ ಶಾಸಕಿ!

Pak ನಲ್ಲಿ ರಕ್ತದೋಕುಳಿ: ಹೊಸ ಉಗ್ರ ಸಂಘಟನೆ ನಡೆಸಿದ ದಾಳಿಯಲ್ಲಿ 21 ಸೈನಿಕರು ಬಲಿ; ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ!

SCROLL FOR NEXT