ಡಿಎನ್ ಜೀವರಾಜ್ 
ರಾಜಕೀಯ

Video: ಮೂರು ವರ್ಷಗಳ ನಂತರ ಶೃಂಗೇರಿ ಶಾಸಕರಾಗಿ ಡಿ.ಎನ್ ಜೀವರಾಜ್ ಪ್ರಮಾಣ ವಚನ ಸ್ವೀಕಾರ

ಜೀವರಾಜ್ ಅವರು ಶೃಂಗೇರಿಯ ಶಾರದಾಂಬೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಬೆಂಗಳೂರು: ಮೂರು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ನಡೆದ ಮತಗಳ ಮರುಎಣಿಕೆಯಲ್ಲಿ ರೋಚಕ ಗೆಲುವು ಸಾಧಿಸಿದ ಬಿಜೆಪಿ ಬಿಜೆಪಿ ನಾಯಕ ಡಿ ಎನ್ ಜೀವರಾಜ್ ಅವರು ಬುಧವಾರ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇಂದು ಮಧ್ಯಾಹ್ನ 3.30ಕ್ಕೆ ವಿಧಾನಸೌಧದ ಮೊದಲ ಮಹಡಿಯಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಆರ್ ಅಶೋಕ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರ ಸಮ್ಮುಖದಲ್ಲಿ ಡಿಎನ್ ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ಜೀವರಾಜ್ ಅವರು ಶೃಂಗೇರಿಯ ಶಾರದಾಂಬೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

2023ರ ಶೃಂಗೇರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಟಿ ಡಿ ರಾಜೇಗೌಡ ವಿರುದ್ಧ 201 ಮತಗಳ ಅಂತರದಿಂದ ಸೋತಿದ್ದ ಜೀವರಾಜ್ ಅವರು ಅಂಚೆ ಮತಗಳನ್ನು ಮರುಎಣಿಕೆ ಮಾಡಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆಯ ನಂತರ ಕಳೆದ ವಾರಾಂತ್ಯ ಹೈಕೋರ್ಟ್ ಆದೇಶದಂತೆ ನಡೆದ ಮರುಎಣಿಕೆ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರು ಪಡೆದಿದ್ದ 569 ಅಂಚೆ ಮತಗಳಲ್ಲಿ 318 ಮತಗಳು ಅಸಿಂಧು ಎಂದು ಘೋಷಿಸಲ್ಪಟ್ಟಿದ್ದು, ಇದರಿಂದ ಫಲಿತಾಂಶದಲ್ಲಿ ಮಹತ್ತರ ಬದಲಾವಣೆಯಾಗಿದೆ. ಇದರ ಪರಿಣಾಮವಾಗಿ ಬಿಜೆಪಿಯ ಡಿ.ಎನ್. ಜೀವರಾಜ್ ಅವರು 52 ಮತಗಳ ಅಂತರದಿಂದ ಮುನ್ನಡೆ ಪಡೆದು ಅಂತಿಮವಾಗಿ ಜಯಗಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಜಯ್ ಗೆ ಬೆಂಬಲ ನೀಡಲ್ಲ- ಎಡಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ನಾವು ಇನ್ನೂ ನಿರ್ಧರಿಸಿಲ್ಲ- ವಿಸಿಕೆ

Video: ಮಧ್ಯರಾತ್ರಿ ಸಾಮಾನ್ಯ ಮಹಿಳೆಯಂತೆ ರಸ್ತೆಯಲ್ಲಿ ನಿಂತ ಪೊಲೀಸ್ ಕಮಿಷನರ್; 3 ತಾಸಿನಲ್ಲಿ 40 ಕಾಮುಕರಿಂದ ಕಿರುಕುಳ!

'ಇರಾನ್ ಡೀಲ್ ತಿರಸ್ಕರಿಸಿದರೆ ಬಾಂಬ್ ದಾಳಿ ಆರಂಭ, ಇದು ಅತ್ಯಂತ ಭೀಕರವಾಗಿರುತ್ತದೆ': ಟ್ರಂಪ್ ಎಚ್ಚರಿಕೆ

ತಮಿಳುನಾಡು ರಾಜ್ಯಪಾಲರನ್ನು ಭೇಟಿ ಮಾಡಿ, ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್; ನಾಳೆಯೇ ಪ್ರಮಾಣವಚನ ಸಾಧ್ಯತೆ

ವಿಜಯ್ ಸಿಎಂ ಪದಗ್ರಹಣ ಕಾರ್ಯಕ್ರಮ ದಿಢೀರ್ ಮುಂದೂಡಿಕೆ: ಮ್ಯಾಜಿಕ್ ನಂಬರ್ ಬಗ್ಗೆ ರಾಜ್ಯಪಾಲರಿಗೆ...

SCROLL FOR NEXT