

ಮ್ಯಾಂಚೆಸ್ಟರ್: ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಪೋರ್ಡ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮರಿಝಾನ್ ಕಾಪ್ ಅವರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ಭಾರತ ವಿರುದ್ಧ ಆರು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 17 ರನ್ ಗಳಿಸಿ ಬೇಗನೆ ಔಟಾದರು. ಬಳಿಕ ಶಫಾಲಿ ವರ್ಮಾ 31, ಯಸ್ಟಿಕಾ ಭಾಟಿಯಾ 15 ರನ್ ಕಲೆಹಾಕಿ ಫೆವಿಲಿಯನ್ ಸೇರಿದರು.
ರೋಡ್ರಿಗೆಸ್ 12, ನಾಯಕಿ ಹರ್ಮತ್ ಫ್ರೀತ್ ಕೌರ್ 24, ದೀಪ್ತಿ ಶರ್ಮಾ 29 ರನ್ ಗಳಿಸಿ ಔಟಾದರೆ, ರಿಚಾ ಘೋಷ್ 15, ಅರುಂಧತಿ ರೆಡ್ಡಿ 6, ಪ್ರೇಮ ರಾವತ್ ಕೇವಲ 3 ರನ್ ಗಳಿಸಿದರು. ಇದರಿಂದಾಗಿ ಭಾರತ ಕೇವಲ 158 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತ ನೀಡಿದ 159 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ಪರ ನಾಯಕಿ ಲೌರಾ ವೋಲ್ವಾರ್ಡ್ 20, ತಾಜ್ಮಿನ್ ಬ್ರಿಟ್ಸ್ 40 ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು. ಬಳಿಕ ಮರಿಝಾನ್ ಕಾಪ್ ಅವರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದ (ಅಜೇಯ 81 ರನ್ಸ್) ಮೂಲಕ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು.
ಅನ್ನೆರಿ ಡೆರ್ಕ್ಸೆನ್ ಶೂನ್ಯಕ್ಕೆ ಔಟಾದರೆ, ನಾಡಿನ್ ಡಿ ಕ್ಲರ್ಕ್ 5, ಕ್ಲೋಯ್ ಟ್ರಯಾನ್ 10 ರನ್ ಗಳಿಸಿ ಔಟಾದರು. ಇದರೊಂದಿಗೆ ದಕ್ಷಿಣ ಆಫ್ರಿಕಾ 19.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 161 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
Advertisement