ಸಿದ್ದರಾಮಯ್ಯ 
ರಾಜಕೀಯ

ಪಿಣರಾಯಿ ವಿಜಯನ್ ನಿರ್ಗಮನ: ಸಿಎಂ ಸಿದ್ದರಾಮಯ್ಯಗೆ ಅಗ್ರಸ್ಥಾನ; ದೇಶದ ಅತ್ಯಂತ 'ಹಿರಿಯ' ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ!

ಸಿದ್ದರಾಮಯ್ಯ 1983 ರಲ್ಲಿ ಮೊದಲು ಶಾಸಕರಾದರು, ಆ ವೇಳೆ ಅವರಿಗೆ 36 ವರ್ಷ. ಅಂದಿನಿಂದ ಅವರು ಸಚಿವ, ವಿರೋಧ ಪಕ್ಷದ ನಾಯಕ ಮತ್ತು ಈಗ ಎರಡು ಬಾರಿ ಸಿಎಂ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಬೆಂಗಳೂರು: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್ ಸೋತ ಹಿನ್ನೆಲೆಯಲ್ಲಿ 80 ವರ್ಷದ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ, ಕರ್ನಾಟಕದ 78 ವರ್ಷದ ಸಿದ್ದರಾಮಯ್ಯ ಅವರು ಈಗ ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿಯಾಗಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (75), ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಮತ್ತು ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೊ (74) ಪಟ್ಟಿಯಲ್ಲಿದ್ದಾರೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿದ್ದಾರೆ ಅವರಿಗೆ 46 ವರ್ಷ ವಯಸ್ಸಾಗಿದೆ.

ಸಿದ್ದರಾಮಯ್ಯ 1983 ರಲ್ಲಿ ಮೊದಲು ಶಾಸಕರಾದರು, ಆ ವೇಳೆ ಅವರಿಗೆ 36 ವರ್ಷ. ಅಂದಿನಿಂದ ಅವರು ಸಚಿವ, ವಿರೋಧ ಪಕ್ಷದ ನಾಯಕ ಮತ್ತು ಈಗ ಎರಡು ಬಾರಿ ಸಿಎಂ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು 17 ರಾಜ್ಯ ಬಜೆಟ್‌ಗಳನ್ನು ಮಂಡಿಸಿದ ದಾಖಲೆಯನ್ನು ಹೊಂದಿದ್ದಾರೆ.

ಸಿದ್ದರಾಮಯ್ಯ ಈಗ ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ಡಿ. ದೇವರಾಜ್ ಅರಸು ದಾಖಲೆಯನ್ನು ಮೀರಿಸಿದ್ದಾರೆ. ಅರಸು ಎರಡು ಅವಧಿಗೆ ಈ ಹುದ್ದೆಯನ್ನು ಅಲಂಕರಿಸಿ 7 ವರ್ಷ 239 ದಿನಗಳ ಕಾಲ ಅಧಿಕಾರದಲ್ಲಿದ್ದರು. 2013 ರಿಂದ 2018 ರವರೆಗೆ ಪೂರ್ಣ ಅವಧಿಯನ್ನು ಪೂರೈಸಿದ ನಂತರ, ಸಿದ್ದರಾಮಯ್ಯ ಅವರು ಮೇ 2023 ರಿಂದ ಈ ಹುದ್ದೆಯನ್ನು ಅಲಂಕರಿಸಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಈಗ 78 ವರ್ಷ ಒಂಬತ್ತು ತಿಂಗಳು. ಕರ್ನಾಟಕದಲ್ಲಿ ಈ ವಯಸ್ಸಿನಲ್ಲಿ ಬೇರೆ ಯಾವ ರಾಜಕಾರಣಿಯೀ ಈ ಉನ್ನತ ಹುದ್ದೆಯನ್ನು ಅಲಂಕರಿಸಿಲ್ಲ.

ಬಿಜೆಪಿಯ ಪ್ರಬಲ ನಾಯಕ ಬಿಎಸ್ ಯಡಿಯೂರಪ್ಪ ಜುಲೈ 2021 ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅವರಿಗೆ 78 ವರ್ಷ ಐದು ತಿಂಗಳು ವಯಸ್ಸಾಗಿತ್ತು.

2004 ರಲ್ಲಿ ಎಸ್‌ಎಂ ಕೃಷ್ಣ ಅವರು ರಾಜೀನಾಮೆ ನೀಡಿದಾಗ 72 ವರ್ಷ ವಯಸ್ಸು. ಜೆಹೆಚ್ ಪಟೇಲ್ ಮತ್ತು ಧರಂ ಸಿಂಗ್ 69 ವರ್ಷ ವಯಸ್ಸಿನವರಾಗಿದ್ದರು.

1980 ರಲ್ಲಿ ಪ್ರಮಾಣವಚನ ಸ್ವೀಕರಿಸಿದಾಗ ಆರ್ ಗುಂಡೂರಾವ್ ಅವರು 43 ನೇ ವಯಸ್ಸಿನಲ್ಲಿ ರಾಜ್ಯದ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗುಂಡಿಟ್ಟು ಸುವೇಂದು ಅಧಿಕಾರಿ ಆಪ್ತನ ಹತ್ಯೆ: CCTV ಪರಿಶೀಲನೆ; ಆರೋಪಿಗಳಿಗಾಗಿ ಪೊಲೀಸರ ತೀವ್ರ ಶೋಧ, ಉತ್ತರ 24 ಪರಗಣದಲ್ಲಿ ಪರಿಸ್ಥಿತಿ ಉದ್ವಿಗ್ನತೆ

Operation Sindoorಗೆ 1 ವರ್ಷ: 'ಭಾರತ ಯಾವುದನ್ನೂ ಮರೆಯಲ್ಲ-ಯಾರನ್ನೂ ಕ್ಷಮಿಸಲ್ಲ'; ಶತ್ರುರಾಷ್ಟ್ರಕ್ಕೆ ಕಠಿಣ ಸಂದೇಶ ರವಾನಿಸಿದ ಭಾರತೀಯ ಸೇನೆ

TVK ವಿಜಯ್ ಗೆ ಮತ್ತೊಂದು ಹಿನ್ನಡೆ: ರಾತ್ರೋರಾತ್ರಿ ದಳಪತಿಗೆ ನೀಡಿದ್ದ ಭದ್ರತೆ ವಾಪಸ್!

ಹಾರ್ಮುಜ್ ನೌಕಾ ದಿಗ್ಬಂಧನ ಉಲ್ಲಂಘನೆ ಆರೋಪ; ಇರಾನ್ ಹಡಗಿನ ಮೇಲೆ ದಾಳಿ, ಅಮೆರಿಕಾ-ಇರಾನ್ ಸಂಘರ್ಷ ತೀವ್ರ..!

'ಜಪ್ಪಯ್ಯ ಅಂದರೂ ಸಿಎಂ ಸ್ಥಾನದಿಂದ ಕೆಳಗಿಳಿಯುವುದಿಲ್ಲ, ಬೇಕಾದರೆ ಕೇಂದ್ರ ಸರ್ಕಾರವೇ ನನ್ನನ್ನು ವಜಾ ಮಾಡಲಿ': ಮಮತಾ ಬ್ಯಾನರ್ಜಿ

SCROLL FOR NEXT