ಟಿಡಿ ರಾಜೇಗೌಡ-ಜೀವರಾಜ್ 
ರಾಜಕೀಯ

ಬಿಜೆಪಿಗೆ ಬಿಗ್ ಶಾಕ್: 'ಮರುಎಣಿಕೆ' ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್ ತಡೆ; ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಕೆ; ಜೀವರಾಜ್ ಕಥೆ ಏನು?

ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್‌ ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ ಒಂದೇ ವಾರದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವಂತಾಗಿದೆ.

ನವದೆಹಲಿ: ಮೂರು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಅಂಚೆ ಮತಗಳ ಮರುಎಣಿಕೆಯಲ್ಲಿ ರೋಚಕ ಗೆಲುವು ಸಾಧಿಸಿ ಕಳೆದ ಬುಧವಾರ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಜೆಪಿ ನಾಯಕ ಡಿ ಎನ್ ಜೀವರಾಜ್ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಬಿಗ್ ಶಾಕ್ ನೀಡಿದೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಫಲಿತಾಂಶ ಮತ್ತು ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಪ್ರಶ್ನಿಸಿ ಕಾಂಗ್ರೆಸ್​ನ ಪರಾಜಿತ ಅಭ್ಯರ್ಥಿ ಟಿ.ಡಿ ರಾಜೇಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇಂದು ಮಹತ್ವದ ಆದೇಶ ನೀಡಿದೆ.

ಮತಗಳ ಮರು ಎಣಿಕೆ ಫಲಿತಾಂಶಕ್ಕೆ ತಡೆ ನೀಡಿರುವ ಸುಪ್ರೀಂ ಕೋರ್ಟ್‌, 'ಯಥಾಸ್ಥಿತಿ' ಕಾಯ್ದುಕೊಳ್ಳುವಂತೆ ಸೂಚಿಸಿರುವುದರಿಂದ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್‌ ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ ಒಂದೇ ವಾರದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವಂತಾಗಿದೆ.

ರಾಜೇಗೌಡ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ, 'ಯಥಾಸ್ಥಿತಿ' ಕಾಯ್ದುಕೊಳ್ಳುವಂತೆ ಆದೇಶಿಸಿದೆ.

ರಾಜೇಗೌಡ ಅವರ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಪ್ರಬಲವಾದ ಮಂಡಿಸಿದರು. ಚುನಾವಣಾ ಆಯೋಗದ ನಡವಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಮರುಎಣಿಕೆಯ ಸಂದರ್ಭದಲ್ಲಿ ಪಾರದರ್ಶಕತೆ ಇರಲಿಲ್ಲ ಎಂದು ವಾದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಉದ್ದೇಶಪೂರ್ವಕವಾಗಿ ದಾರಿತಪ್ಪಿಸಲಾಗುತ್ತಿದೆ': Op Sindoor ಕುರಿತು ರಾಜನಾಥ್ ಸಿಂಗ್ ಹೇಳಿಕೆಗಳ ಕುರಿತ ಪೋಸ್ಟ್‌ಗಳಿಗೆ ಕೇಂದ್ರದ ಪ್ರತಿಕ್ರಿಯೆ

ಅಫ್ಘಾನಿಸ್ತಾನದಲ್ಲಿ 6.2 ತೀವ್ರತೆಯ ಭೂಕಂಪ, ಪಾಕಿಸ್ತಾನ, ಜಮ್ಮು ಮತ್ತು ಕಾಶ್ಮೀರ ಮತ್ತು ದೆಹಲಿಯಲ್ಲಿ ಕಂಪನದ ಅನುಭವ

ಸಿಸಿಟಿವಿ ನಾಪತ್ತೆ, SOP ನಿರ್ಲಕ್ಷ್ಯ, ಶೌಚಾಲಯದಲ್ಲಿ ಹಣ!: ರಾಮ ಮಂದಿರ ದೇಣಿಗೆ ಕುರಿತು ಎಸ್‌ಐಟಿ ತನಿಖೆಯಲ್ಲಿ 'ವಂಚನೆ'ಯ ಜಾಲ ಬಯಲು!

ನಟ ಕಿಚ್ಚ ಸುದೀಪ್ ಹೊಸ ಕ್ಯಾರವ್ಯಾನ್: 6.5 ಕೋಟಿ ರೂ ಮೌಲ್ಯ, ಹೈಟೆಕ್ ಸೌಲಭ್ಯದ 'ರಸ್ತೆ ಮೇಲಿನ ವಿಮಾನ', Video

'ಅವ್ರು ನಿಜವಾದ ರಾಮ ಭಕ್ತರಲ್ಲ: ದೇಣಿಗೆ ವಿವಾದ, ಪ್ರಧಾನಿ ಮೋದಿಯ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್!