ಆರ್ ಅಶೋಕ್  
ರಾಜಕೀಯ

'ಮುಸ್ಲಿಮರ ಸಿಟ್ಟು ತಣಿಸಲು ಹಿಜಾಬ್ ಮುಲಾಮು; ಸಿದ್ದರಾಮಯ್ಯಗೆ ಮುಲ್ಲಾಗಳ ಮೇಲೆ ಬಹಳ ಪ್ರೀತಿ, ಜನಿವಾರ ಕಂಡ್ರೆ ಅವರಿಗೆ ಆಗಲ್ಲ': ಆರ್ ಅಶೋಕ್

ಸಿದ್ದರಾಮಯ್ಯನವರಿಗೆ ಜನಿವಾರ ನೋಡಿದ್ರೆ ಆಗಲ್ಲ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಟೀಕಿಸಿದ್ದಾರೆ.ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದ ರಾಜ್ಯ ಸರ್ಕಾರದ ಆದೇಶವನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರಿಗೆ ಭರಪೂರ ಅವಕಾಶ ನೀಡುತ್ತಾರೆ, ಹಿಂದೂಗಳನ್ನು ಕಡೆಗಣಿಸ್ತಾರೆ, ಸಿದ್ದರಾಮಯ್ಯನವರಿಗೆ ಜನಿವಾರ ನೋಡಿದ್ರೆ ಆಗಲ್ಲ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಟೀಕಿಸಿದ್ದಾರೆ.ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದ ರಾಜ್ಯ ಸರ್ಕಾರದ ಆದೇಶವನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅಂದರೆ ಮುಸ್ಲಿಮರಿಗೆ ಭರಪೂರ ಅವಕಾಶಗಳು. ಸಿದ್ದರಾಮಯ್ಯನವರು ಹಿಂದೂಗಳನ್ನ ಕಡೆಗಣಿಸ್ತಾರೆ, ಹಿಂದೂಗಳಿಗೆ ಅವಮಾನ ಮಾಡ್ತಾರೆ. ಜನಿವಾರ ಕಂಡ್ರೆ ಆಗಲ್ಲ, ಬೊಟ್ಟು ಇಟ್ಟುಕೊಂಡರೆ ಆಗಲ್ಲ, ದೇವಸ್ಥಾನಕ್ಕೆ ಹೋದರೆ ಆಗಲ್ಲ. ಆದರೆ ಮುಲ್ಲಾಗಳ ಮೇಲೆ ಬಹಳ ಪ್ರೀತಿ. ನಮ್ಮ ಸರ್ಕಾರ ಇದ್ದಾಗ ಬ್ಯಾನ್ ಮಾಡಿದ್ದ ಹಿಜಾಬ್ ನ್ನು ಜಾರಿಗೆ ತಂದಿರೋದು ಮುಸಲ್ಮಾನರನ್ನು ಓಲೈಸಲು, ಮತ ಬ್ಯಾಂಕಿಗೋಸ್ಕರ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದು ಮುಸ್ಲಿಮರ ಅತಿಯಾದ ಒಲೈಕೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಇದೇ ತರ ಒಲೈಕೆ ಮಾಡಿ ಸೋತು ಮನೆ ಸೇರಿದರು. ಹಿಂದೂಗಳನ್ನು ಬೈಯುತ್ತಾ ಬಂದ, ದ್ವೇಷಿಸುತ್ತಾ ಬಂದ ಸ್ಟಾಲಿನ್ ಸೋತು ಹೋದರು. ಯಾರ್ಯಾರು ಹಿಂದೂಗಳನ್ನು ಟೀಕೆ, ಅನ್ಯಾಯ ಮಾಡ್ತಾರೋ, ಅಂಥವರನ್ನು ಇಡೀ ಹಿಂದೂ ಸಮುದಾಯ ಒಟ್ಟಿಗೆ ನಿಂತು ಬುದ್ಧಿ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

2028ರಲ್ಲಿ ಸರಿಯಾದ ಪಾಠ

ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಎಲ್ಲಾ ಶಾಸಕರಿಗೆ ಹಿಂದೂಗಳು ಸರಿಯಾದ ಪಾಠ ಕಲಿಸ್ತಾರೆ. ಇದು ಹಿಂದೂ ವಿರೋಧಿ ಸರ್ಕಾರ, ಹಿಂದೂಗಳಿಗೆ ದ್ರೋಹ, ವಂಚನೆ ಮಾಡ್ತಾ ಇದ್ದಾರೆ. 800-900 ಕೋಟಿ ಅನುದಾನವನ್ನು ಮುಸ್ಲಿಮರಿಗೆ ಕೊಟ್ಟರು. ಈ ರೀತಿ ತಾರತಮ್ಯ ಮಾಡುತ್ತಿರುವ ಸಿದ್ದರಾಮಯ್ಯ ಓಟಿಗೋಸ್ಕರ ಏನೂ ಬೇಕಾದರೂ ಮಾಡಲು ಸಿದ್ದ ಅನ್ನೋದನ್ನ ತೋರಿಸ್ತಾ ಇದ್ದಾರೆ ಎಂದಿದ್ದಾರೆ.

ಕೇಸರಿ ಶಾಲು ಅದು ನಮ್ಮ ಧರ್ಮದ ಸಂಕೇತ, ಕರ್ನಾಟಕದ ಎಲ್ಲಾ ಸ್ವಾಮಿಗಳು ಕೇಸರಿ ಬಟ್ಟೆ ಹಾಕಿಕೊಳ್ಳೋದು. ಅವರಿಗೆ ಹೋಗಿ ನಮಸ್ಕಾರ ಹಾಕ್ತೀರಾ. ಚುನಾವಣೆ ಬಂದಾಗ ಸ್ವಾಮಿಗಳ ಬಳಿ ಹೋಗಿ ನಮಸ್ಕಾರ ಹಾಕ್ತೀರ. ಈಗ ಮಾತ್ರ ಕೇಸರಿ ಬೇಡ, ಓಟ್ ಬೇಕಾದಾಗ ಸುತ್ತೂರು, ಆದಿಚುಂಚನಗಿರಿ, ದಲಿತ ಮಠಕ್ಕೆ ಹೋಗ್ತೀರ. ಇದು ಹಿಂದೂಗಳ ಬೆನ್ನಿಗೆ ಚೂರಿ ಹಾಕುವಂತಹ ಸರ್ಕಾರ. ಈ ಸರ್ಕಾರ ತೊಲಗಬೇಕು. ರಾಜ್ಯದ ಜನ ಹಿಂದೂ ವಿರೋಧಿ ಸರ್ಕಾರವನ್ನು ಕಿತ್ತೊಗೆಯುತ್ತಾರೆ. ಸರ್ಕಾರದ ಈ ಹಿಜಾಬ್ ನೀತಿ ವಿರುದ್ಧ ಬಿಜೆಪಿಯ ಎಲ್ಲಾ ಮುಖಂಡರ ಜೊತೆ ಚರ್ಚಿಸಿ ಹೋರಾಟ ಮಾಡುತ್ತೇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳ CM ಆಯ್ಕೆ ಕಗ್ಗಂಟು: ವಿಡಿ ಸತೀಶನ್ ಅಥವಾ ಕೆಸಿ ವೇಣುಗೋಪಾಲ್? ಎಲ್ಲಾ ಸಸ್ಪೆನ್ಸ್ ಗಳಿಗೆ ಇಂದು ಅಂತಿಮ ತೆರೆ!

'ಬಿಜೆಪಿ ವಿತರಿಸುವ ಕೇಸರಿ ಶಾಲು ಎಲ್ಲಾ ಅತ್ಯಾಚಾರ, ಅನಾಚಾರಗಳಿಗೂ ಲೈಸೆನ್ಸ್: ಯುವ ಸಮುದಾಯದ ಭವಿಷ್ಯದ ಮೇಲೆ ಸರ್ಜಿಕಲ್ ಸ್ಟ್ರೈಕ್'

ದ್ವಿರಾಷ್ಟ್ರ ಸಿದ್ದಾಂತದ ಸಾವರ್ಕರ್ ವೀರ: ದೇಶ ಇಬ್ಭಾಗ ಮಾಡಿದ ಜಿನ್ನಾ ಜಾತ್ಯಾತೀತ; ಸಂಘಪರಿವಾರದ ದೇಶದ್ರೋಹದ ವ್ಯಾಖ್ಯಾನ ಬದಲಾಗಿದೆಯೇ?

'ನಿಮ್ಮನ್ನು ಅಹಿಂದ ಚಾಂಪಿಯನ್ ಮಾಡಿದ್ದು ಯಾರು ಅನ್ನೋದನ್ನು ಮರೆತಿದ್ದೀರಾ? ನಮ್ಮ ಪಕ್ಷದಿಂದ ರಾಜಕೀಯವಾಗಿ ಬೆಳೆದು, ತಿಂದುಂಡು ದ್ರೋಹ'

ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಗೂ ಮುನ್ನ ರಷ್ಯಾದ ಸೆರ್ಗೆಯ್ ಲಾವ್ರೊವ್ ಜೊತೆ ಜೈಶಂಕರ್ ಮಹತ್ವದ ಸಭೆ!

SCROLL FOR NEXT