ಡಿ ಕೆ ಶಿವಕುಮಾರ್  
ರಾಜಕೀಯ

'ಪ್ರತಿದಿನ, ಪ್ರತಿ ಮುಹೂರ್ತ ನನಗೆ ಒಳ್ಳೆಯದೇ; ನನ್ನ ನಿಷ್ಠಾವಂತರು ಎಂದೇನಿಲ್ಲ, ಎಲ್ಲಾ 136 ಶಾಸಕರು ನಮ್ಮವರೇ': ಡಿ.ಕೆ ಶಿವಕುಮಾರ್; Video

ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಕೂಡ ನಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿಕೊಂಡು ನಮ್ಮ 5 ಗ್ಯಾರಂಟಿಗಳಿಗೆ ಗೌರವ ನೀಡಿದೆ.

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಈ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಿದೆ. ಕೊಟ್ಟಿರುವ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ ಎಂಬ ತೃಪ್ತಿ ಇದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಕೂಡ ನಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿಕೊಂಡು ನಮ್ಮ 5 ಗ್ಯಾರಂಟಿಗಳಿಗೆ ಗೌರವ ನೀಡಿದೆ. ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳು ಸಹ ನಮ್ಮಂತೆ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದ್ದಾರೆ. ಸಮಾಜದ ಕಟ್ಟಕಡೆಯ ಜನರನ್ನು ಮೇಲೆತ್ತುವ ರೀತಿಯ ಯೋಜನೆಗಳಿದ್ದು ಎಲ್ಲರಿಗೂ ಮಾದರಿಯಾಗಿದೆ ಎಂದರು.

ನಾವು ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಹೈಕಮಾಂಡ್ ದೆಹಲಿಗೆ ಕರೆದಾಗ ಹೋಗುತ್ತೇವೆ, ಜಿಬಿಎ ಚುನಾವಣೆ ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಲು ನಾನು ಮತ್ತು ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಲಿದ್ದೇವೆ ಎಂದರು.

ನನಗೆ ನಿಷ್ಠಾವಂತ ಶಾಸಕರು ಎಂದೇನಿಲ್ಲ, ಎಲ್ಲಾ ಶಾಸಕರು ನಮ್ಮವರೇ.ಮುಖ್ಯಮಂತ್ರಿಗಳು ಸಹ ನಮ್ಮ ಮುಖ್ಯಮಂತ್ರಿಗಳು ಎಂದರು. ಈ ಬಾರಿ ಏನಾದರೂ ಗುಡ್ ನ್ಯೂಸ್ ತರುತ್ತೀರಾ ಎಂದು ಕೇಳಿದಾಗ ಪ್ರತಿದಿನವೂ ನನಗೆ ಒಳ್ಳೆಯ ದಿನವೇ, ಪ್ರತಿಮುಹೂರ್ತವೂ ನನಗೆ ಒಳ್ಳೆಯ ಮುಹೂರ್ತವೇ ಎಂದರು,

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel

ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurel

EVM ದೋಷ, ನನ್ನನ್ನೇ ವಿಜೇತನೆಂದು ಘೋಷಿಸಿ: ಕೊಲತ್ತೂರ್ ಸೋಲನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ MK Stalin!