ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್ ಆಪರೇಷನ್’ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೃಪಾ ಆಳ್ವಾ ಅವರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿದ್ದಾಗ ಆಯೋಗಕ್ಕೆ ಕಳುಹಿಸಿದ್ದ ಇ-ಮೇಲ್ ಎಲ್ಲಿ ಹೋಯಿತು? ಅದನ್ನು ಇಟ್ಟುಕೊಂಡಿದ್ದೀರಾ? ಅಥವಾ ಅಳಿಸಿ ಹಾಕಿದ್ದೀರಾ?’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಪ್ರಶ್ನಿಸಿದ್ದಾರೆ.
ಇ-ಮೇಲ್ ನನ್ನ ವ್ಯಾಪ್ತಿಗೆ ಬರಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ, ಯಾಕೆ ಪ್ರಿಯಾಂಕ್ ಖರ್ಗೆ ವ್ಯಾಪ್ತಿಗೆ ಆಮೇಲ್ ಬರಲ್ಲ. ಗೃಹ ಇಲಾಖೆ ನನ್ನ ಕೈಯಲ್ಲಿ ಇದ್ಯಾ? ನಿಮಗೆ ಅದನ್ನ ಕಂಡು ಹಿಡಿಯಲು ಯೋಗ್ಯತೆ ಇಲ್ಲದಿದ್ರೆ ನೀವು ಇರೋದು ಯಾಕೆ? ಅನ್ಪಿಟ್ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ಗುಡುಗಿದ್ರು.
ರಾಹುಲ್ ಗಾಂಧಿ ಬಳಿ ಹೋಗಿ ಸಿದ್ದರಾಮಯ್ಯ ದೂರು ಕೊಟ್ಟಿದ್ದಾರೆ. ಸಿದ್ದರಾಮಯ್ಯ ಹೇಳಿದ್ದ ವಿಷಯವನ್ನೇ ನಾವು ಹೇಳಿದ್ದು, ನಾನು ಕೂಡ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡಿದವನು, ಈಗ ಅನುಕಂಪಕ್ಕೆಂದು ಹೇಳ್ತಿಲ್ಲ. ತನಿಖೆಯ ದಾರಿ ತಪ್ಪಿಸಿದ್ದಾರೆ. ಮೇಲ್ ಎಲ್ಲೋಯ್ತು ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ತನಿಖೆ ಮಾಡಲು ಹೇಳಿದ್ದು ಸರಿ ಇದೆ. ಕೊಲೆ ಮಾಡಿದವರನ್ನು ಹಿಡಿಲಿಲ್ಲ. ಕೊಲೆ ಆಯ್ತು ಅಂತ ಕೂಗಿದವರ ಮೇಲೆ ತನಿಖೆ ನಡೆಯುತ್ತಿದೆ. ರಾಜಕೀಯವಾಗಿ ಸಿದ್ದರಾಮಯ್ಯ ಮುಗಿಸಲು ಈ ಸ್ಟಿಂಗ್ ನಡೆದಿದೆ. ಅದನ್ನು ನಾನು ಹೇಳಿದ್ದು, ರಾಜಕೀಯವಾಗಿ ಸಿದ್ದರಾಮಯ್ಯ ಅವರನ್ನ ನಾನು ವಿರೋಧ ಮಾಡಿರಬಹುದು. ಆದರೆ ಈಗ ಅನುಕಂಪಕ್ಕೆ ಮಾಡ್ತಾ ಇಲ್ಲ ಅಥವಾ ನಮ್ಮವನೊಬ್ಬ ಸಿಎಂ ಆದ ಅಂತ ಹೊಟ್ಟೆಕಿಚ್ಚಿಗೆ ಮಾತಾಡಿದ್ದಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಲೈಂಗಿಕ ಶೋಷಣೆಗೆ ಒಳಗಾದ ಯುವತಿಯನ್ನು ಸ್ಟಿಂಗ್ ಗೆ ಬಳಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಕುಮಾರಸ್ವಾಮಿ ಅವ್ರು, ಇ-ಮೇಲ್ ಎಲ್ಲಿಗೆ ಹೋಯ್ತು? ಇದೇನಾ ತನಿಖೆ...? ಇಮೇಲ್ ತಮ್ಮ ವ್ಯಾಪ್ತಿಗೆ ಬರಲ್ಲ ಅಂತ ಗೃಹ ಸಚಿವ ಖರ್ಗೆ ಹೇಳಿದ್ದು, ಉಳಿದ ಎಲ್ಲಾ ವಿಚಾರ ಇವರ ವ್ಯಾಪ್ತಿಗೆ ಬರುತ್ತದೆ, ಇದು ಬರಲ್ವಾ? ನಾನು ಮಾಹಿತಿ ಕೊಡಬೇಕು ಅಂತಾರಲ್ಲ. ಇವರು ಯಾಕೆ ಇರಬೇಕು. ಇವರು ಆ ಸ್ಥಾನದಲ್ಲಿ ಇರಲು ಲಾಯಕ್ ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ರು.
ಈ ರೀತಿಯ ವಿಚಾರ ಮುಂದುವರೆದ್ರೆ ಮುಂದಿನ ಯಾವುದೇ ಚುನಾವಣೆಯಲ್ಲಿ ನಾನು ಪ್ರಚಾರ ಮಾಡಲ್ಲ ಅಂತ ರಾಹುಲ್ ಗಾಂಧಿಗೆ ಹೇಳಿದ್ದಾರೆ. ಸಿದ್ದರಾಮಯ್ಯ, ರಾಹುಲ್ ಗಾಂಧಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಆಗ್ತಿರೋದು ನನ್ನ ತೇಜೋವಧೆ ಮಾಡೋಕೆ ಆಗ್ತಿದೆ ಅಂತ. ಈಗ ಸಿದ್ದರಾಮಯ್ಯ ದೂರು ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಈ ಸರ್ಕಾರಕ್ಕೆ ಏನ್ ಸೂಚನೆ ಕೊಟ್ಟಿದ್ದಾರೆ ಏನ್ ಆಗುತ್ತೆ ಕಾದು ನೋಡೋಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ.