ಕುಮಾರಕೃಪಾ ಗೆಸ್ಟ್‌ಹೌಸ್‌ಗೆ 'ಗಂಗಾ' ಎಂದು ನಾಮಕರಣ 
ರಾಜಕೀಯ

CM ಅಧಿಕೃತ ನಿವಾಸ 'ಗಂಗಾ' ನವೀಕರಣಕ್ಕೆ ₹100 ಕೋಟಿ ಖರ್ಚು!: ವಿಜಯೇಂದ್ರ ಆರೋಪಕ್ಕೆ ಡಿಕೆಶಿ ಹೇಳಿದ್ದೇನು?

ಇದೀಗ 'ಗಂಗಾ' ನವೀಕರಣಕ್ಕೆ 100 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಗಂಭೀರ ಆರೋಪ ಮಾಡಿದ್ದಾರೆ.

ಚಿತ್ರದುರ್ಗ: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಐತಿಹಾಸಿಕ ಕುಮಾರ ಕೃಪಾ ಅತಿಥಿಗೃಹವನ್ನು ನವೀಕರಿಸಿ ಅದನ್ನು ತಮ್ಮ ಅಧಿಕೃತ ನಿವಾಸವಾಗಿ ಮಾಡಿಕೊಂಡಿದ್ದಾರೆ. ಅಲ್ಲದೆ ಇದಕ್ಕೆ 'ಗಂಗಾ' ಎಂದು ಹೊಸ ನಾಮಕರಣ ಮಾಡಿದ್ದು, ಇತ್ತೀಚಿಗೆ ಶಾಸ್ತ್ರೋಕ್ತವಾಗಿ ಗೃಹಪ್ರವೇಶ ಸಹ ಮಾಡಿದ್ದಾರೆ.

ಇದೀಗ 'ಗಂಗಾ' ನವೀಕರಣಕ್ಕೆ 100 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಸಿಎಂ ಡಿಕೆ ಶಿವಕುಮಾರ್ ಅವರು ಈ ಆರೋಪ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

'ಗಂಗಾ' ನವೀಕರಣಕ್ಕೆ 100 ಕೋಟಿ ರೂಪಾಯಿ ಖರ್ಚಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಅವರು ಬಿ.ವೈ. ವಿಜಯೇಂದ್ರ ಅವರಿಗೆ ತನಿಖೆಯ ಸವಾಲು ಹಾಕಿದ್ದಾರೆ. ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿಯೇ ತನಿಖಾ ಸಮಿತಿಯನ್ನು ರಚಿಸಲು ಸಿದ್ಧ ಎಂದು ಸಿಎಂ ಹೇಳಿದ್ದಾರೆ.

“ನನ್ನ ಗೃಹಕ್ಕೆ ನೂರು ಕೋಟಿ ಖರ್ಚು ಮಾಡಿಬಿಟ್ಟಿದ್ದಾರೆ ಎಂದು ವಿಜಯೇಂದ್ರ ಅವರು ಹೇಳಿದರು” ಎಂದು ಉಲ್ಲೇಖಿಸಿದ ಡಿಕೆಶಿ, “ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲೇ ಒಂದು ತನಿಖಾ ತಂಡ ಮಾಡ್ತೀನಿ. ನಮ್ಮ ಪಾರ್ಟಿಯವರು ಒಬ್ಬರು ಬೇಡ. ಜನತಾದಳದವರು, ಬಿಜೆಪಿಯವರು, ಎನ್‌ಡಿಎನವರು, ಇನ್ನು ಬೇಕಾದ್ರೆ ಇಂಡಿಪೆಂಡೆಂಟ್‌ ಅವರನ್ನು ಯಾರನ್ನಾದ್ರೂ ಸೇರಿಸಿಕೊಳ್ಳಿ. ಎಲ್ಲಾ ಸೇರಿಸಿಕೊಂಡು ಒಂದು ಐದು ಜನರದ್ದು ಒಂದು ಕಮಿಟಿ ಮಾಡ್ತೀನಿ. ಅವರೇ ತನಿಖೆ ಮಾಡಲಿ” ಎಂದು ಸವಾಲು ಹಾಕಿದರು.

ಸಮಿತಿಯು ಎಲ್ಲಾ ಪುಸ್ತಕಗಳನ್ನು ಪರಿಶೀಲಿಸಿ, ನೂರು ಕೋಟಿ ರೂಪಾಯಿ ಎಲ್ಲಿ ಮತ್ತು ಹೇಗೆ ಖರ್ಚಾಗಿದೆ ಎಂಬುದನ್ನು ದಯವಿಟ್ಟು ಪರಿಶೀಲಿಸಲಿ. ಬಳಿಕ ಒಂದು ವಾರದೊಳಗೆ ವಿಧಾನಸಭೆಗೆ ವರದಿ ಸಲ್ಲಿಸಿ, ಚರ್ಚೆ ಮಾಡಲಿ ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೇಶದ ಅತಿ ಉದ್ದದ ನದಿ ಸೇತುವೆ, ಆರು ಪಥದ 'ನಿತೀಶ್​​ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ

ಇಟಲಿ: ಸೋನಿಯಾ ಗಾಂಧಿ ಬಾಲ್ಯದ ಮನೆ ಖರೀದಿಸಿದ ಸಿಖ್ ಉದ್ಯಮಿ; ಗುರುದ್ವಾರವಾಗಿ ಪರಿವರ್ತನೆ ಆಗಲಿದೆಯೇ ಕಾಂಗ್ರೆಸ್ ನಾಯಕಿಯ ಮನೆ?

CM ರಾಜಕೀಯ ಕಾರ್ಯದರ್ಶಿ ಹುದ್ದೆ ಬೇಡ; ಅದು ನನ್ನ ಹಿರಿತನಕ್ಕೆ ತಕ್ಕುದಲ್ಲ: ತನ್ವೀರ್ ಸೇಠ್ ಆಕ್ರೋಶ

ಬೈಕ್ ಟ್ಯಾಕ್ಸಿಗೆ ಸುಪ್ರೀಂ ಗ್ರೀನ್ ಸಿಗ್ನಲ್: ಕಠಿಣ ನಿಯಮ ಜಾರಿಗೆ ಸರ್ಕಾರ ಸಿದ್ಧತೆ; ಯೆಲ್ಲೋ ಬೋರ್ಡ್, ವಿಮೆ, GPS ಕಡ್ಡಾಯ?

‘50% Owner Of Maruti’: ಸೋನಿಯಾ ಗಾಂಧಿಯೇ 'ಮಾರುತಿ ಕಂಪನಿಯ ನಿಜವಾದ ಮಾಲೀಕರು'; ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಗಳ ಸುರಿಮಳೆ! Video