ಔತಣಕೂಟಕ್ಕೆ ಹೋಗಬಾರದು ಎಂದಿದ್ದರೆ ಮೊದಲೇ ಹೇಳಬೇಕಿತ್ತು: ಬಿ.ವೈ. ವಿಜಯೇಂದ್ರ ವಿರುದ್ಧ ಜನಾರ್ದನ ರೆಡ್ಡಿ ಗರಂ Online Desk
ರಾಜಕೀಯ

ಕತ್ತಲಲ್ಲಿ ಹೋಗಿ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಬರುವ ರಾಜಕಾರಣಿ ನಾನಲ್ಲ: ವಿಜಯೇಂದ್ರಗೆ ಜನಾರ್ದನ ರೆಡ್ಡಿ ಪರೋಕ್ಷ ಟಾಂಗ್!

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂತನ ಸರ್ಕಾರಿ ನಿವಾಸದ ಗೃಹಪ್ರವೇಶ ಔತಣಕೂಟದಲ್ಲಿ ಬಿಜೆಪಿ ಶಾಸಕರು ಭಾಗಿಯಾಗಿದ್ದಕ್ಕೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ, ಶಾಸಕ ಗಾಲಿ ಜನಾರ್ದನ ರೆಡ್ಡಿ ತೀವ್ರ ತಿರುಗೇಟು ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕಾರಟಗಿ (ಕೊಪ್ಪಳ): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸದ ಗೃಹಪ್ರವೇಶ ಹಾಗೂ ಔತಣಕೂಟದಲ್ಲಿ ಬಿಜೆಪಿ ಶಾಸಕರು ಭಾಗವಹಿಸಿದ ವಿಚಾರ ಈಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಕ್ತಪಡಿಸಿದ ಅಸಮಾಧಾನಕ್ಕೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಖಡಕ್ ತಿರುಗೇಟು ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಏನಿದು ವಿವಾದ?

ನವೆಂಬರ್ 19 ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ನೂತನ ಅಧಿಕೃತ ನಿವಾಸ 'ಗಂಗಾ' (ಹಳೆಯ ಕುಮಾರಕೃಪಾ ಅತಿಥಿಗೃಹ) ದಲ್ಲಿ ಗೃಹಪ್ರವೇಶದ ಪ್ರಯುಕ್ತ ಪಕ್ಷಾತೀತವಾಗಿ ಔತಣಕೂಟ ಆಯೋಜಿಸಿದ್ದರು. ಇದರಲ್ಲಿ ಜನಾರ್ದನ ರೆಡ್ಡಿ, ಎಸ್.ಆರ್. ವಿಶ್ವನಾಥ್, ಕೆ. ಗೋಪಾಲಯ್ಯ, ಎಂ. ಕೃಷ್ಣಪ್ಪ, ಎಲ್.ಎ. ರವಿ ಸುಬ್ರಹ್ಮಣ್ಯ ಸೇರಿದಂತೆ ಹಲವು ಬಿಜೆಪಿ ಶಾಸಕರು ಪಾಲ್ಗೊಂಡಿದ್ದರು. ಆದರೆ, ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿಎಂ ಆಯೋಜಿಸಿದ್ದ ಔತಣಕೂಟದಲ್ಲಿ ತಮ್ಮ ಪಕ್ಷದ ಶಾಸಕರು ಭಾಗಿಯಾಗಿರುವುದನ್ನು ವೈಯಕ್ತಿಕವಾಗಿ ಒಪ್ಪುವುದಿಲ್ಲ ಎಂದಿದ್ದರು.

ಕತ್ತಲಲ್ಲಿ ಹೋಗಿ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಬರುವ ರಾಜಕಾರಣಿಯಲ್ಲ

ವಿಜಯೇಂದ್ರ ಅಸಮಾಧಾನಕ್ಕೆ ಪ್ರತಿಕ್ರಿಯಿಸಿರುವ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, "ಔತಣಕೂಟಕ್ಕೆ ಬಿಜೆಪಿ ಶಾಸಕರು ಹೋಗಬಾರದು ಎಂದು ರಾಜ್ಯಾಧ್ಯಕ್ಷರು ಮೊದಲೇ ಸೂಚನೆ ನೀಡಬೇಕಿತ್ತು. ಹಾಗೆ ಹೇಳಿದ್ದರೆ ನಾವ್ಯಾರೂ ಹೋಗುತ್ತಿರಲಿಲ್ಲ" ಎಂದಿದ್ದಾರೆ.

ಇದೆ ವೇಳೆ, ತಮ್ಮ ಭೇಟಿಯನ್ನು ಸಮರ್ಥಿಸಿಕೊಂಡ ರೆಡ್ಡಿ, "ನಾನೊಬ್ಬ ಶಾಸಕನಾಗಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಭಾಗವಹಿಸಿದ್ದೇನೆ ಹೊರತು, ಯಾವುದೇ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಹೋಗಿಲ್ಲ ಎಂದು ಜನಾರ್ದನ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ, ನಾನು ಬೇರೆಯವರ ರೀತಿ ಹಿಂದಿನ ಬಾಗಿಲಿನಿಂದ ಅಥವಾ ಕತ್ತಲಲ್ಲಿ ಹೋಗಿ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಬರುವ ರಾಜಕಾರಣಿಯಲ್ಲ; ನೇರವಾಗಿ ರಾಜಕಾರಣ ಮಾಡುವವನು" ಎಂದು ವಿಜಯೇಂದ್ರ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಾಯು ಮಾಲಿನ್ಯದಲ್ಲಿ ದೆಹಲಿಯನ್ನೂ ಹಿಂದಿಕ್ಕಿದ ಚೆನ್ನೈ: ದೇಶದಲ್ಲೇ ಅತ್ಯಂತ ಕಲುಷಿತ ನಗರವಾದ ಗುಮ್ಮಿಡಿಪೂಂಡಿ; ವಾಯು ಗುಣಮಟ್ಟ ಸೂಚ್ಯಂಕ 342ಕ್ಕೆ ಏರಿಕೆ..!

'ಒಂದೇ ಕೋಟೆ, ಇಬ್ಬರು ಆಡಳಿತಗಾರರು': Purana Qilaದಲ್ಲಿ ಸಹಬಾಳ್ವೆಯ ಸಂದೇಶ ಸಾರಿದ ಪಾಕ್ ಸಚಿವ ಮುಸಾದಿಕ್ ಮಲಿಕ್..!

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ; ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ, ಒಂದೇ ಕುಟುಂಬದ 9 ಮಂದಿ ದುರ್ಮರಣ..!

ರಣ್ ಆಫ್ ಕಚ್ ಪ್ರವಾಸ ಮುಗಿಸಿ ಮರಳುತ್ತಿದ್ದಾಗ ಘೋರ ದುರಂತ: 3 ತಿಂಗಳ ಕಂದಮ್ಮ ಸೇರಿ ಒಂದೇ ಸೇನಾ ಯೋಧನ ಕುಟುಂಬದ 7 ಮಂದಿ ದುರ್ಮರಣ

ಹಿರಿಯೂರು ಉಪಚುನಾವಣೆಗೆ ರಣಕಹಳೆ: ದಿನಾಂಕ ಘೋಷಣೆಗೂ ಮುನ್ನವೇ ರಂಗೇರಿದ ಅಖಾಡ; ಅನುಕಂಪದ ಅಲೆ v/s ಮೈತ್ರಿ ಬಲ, ಯಾರ ಪಾಲಾಗಲಿದೆ ಕ್ಷೇತ್ರ..?