'ಎಲ್ಲದಕ್ಕೂ ಪರಿಹಾರ ಬೇಕು ಅಂದ್ರೆ ಸರ್ಕಾರ ಹೇಗೆ ನಡೆಸೋದು?': ಸಚಿವ ಶಿವಲಿಂಗೇಗೌಡ ಗರಂ
ರೈತರಿಗೆ ಹಾಲು ಉತ್ಪಾದಕರಿಗೆ ನೇರವಾಗಿ ಹಣ ನೀಡುತ್ತಿದ್ದೇವೆ. 7 ರೂ. ರೈತರ ಅಕೌಂಟ್ ಗೆ ಹೋಗ್ತಾ ಇದೆ. ಒಳ್ಳೆಯ ನಿರ್ಧಾರ ನಮ್ಮ ಸಿಎಂ ಡಿಕೆ ಶಿವಕುಮಾರ್ ಅವರ ಸರ್ಕಾರ ತೆಗೆದುಕೊಂಡಿದೆ...
ಬೆಂಗಳೂರು: ರೈತರಿಗೆ ಬೆಳೆ ಪರಿಹಾರ ಹಾಗೂ ಬರ ಪರಿಹಾರ ನೀಡುವ ಕುರಿತ ಪ್ರಶ್ನೆಗೆ ಗರಂ ಆದ ಸಚಿವ ಶಿವಲಿಂಗೇಗೌಡ, 'ಎಲ್ಲದಕ್ಕೂ ಪರಿಹಾರ ಬೇಕು ಅಂದ್ರೆ ಸರ್ಕಾರ ಹೇಗೆ ನಡೆಸೋದು' ಎಂದು ಪ್ರಶ್ನಿಸಿದರು.
ಸೋಮವಾರ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಲಿಂಗೇಗೌಡ ಅವರು, 'ಎಲ್ಲದಕ್ಕೂ ಪರಿಹಾರ ಕೊಟ್ಟುಕೊಂಡು ಕುಳಿತರೇ ಸರ್ಕಾರ ನಡೆಸಬಾರಾದಾ? ಎಲ್ಲವನ್ನೂ ಸರ್ಕಾರದಿಂದಲೇ ಕೊಟ್ಟರೇ ಸರ್ಕಾರ ನಡೆಯುವುದು ಹೇಗೆ?' ಎಂದು ಪ್ರಶ್ನಿಸಿದರು.
ಹೈನುಗಾರಿಕೆ ಒಳ್ಳೆಯ ಪ್ರಮಾಣದಲ್ಲಿ ಹೊರಹೊಮ್ಮುತ್ತಿದೆ!
ಇದೇ ವೇಳೆ ರೈತರಿಗೆ ಹಾಲು ಉತ್ಪಾದಕರಿಗೆ ನೇರವಾಗಿ ಹಣ ನೀಡುತ್ತಿದ್ದೇವೆ. 7 ರೂ. ರೈತರ ಅಕೌಂಟ್ ಗೆ ಹೋಗ್ತಾ ಇದೆ. ಒಳ್ಳೆಯ ನಿರ್ಧಾರ ನಮ್ಮ ಸಿಎಂ ಡಿಕೆ ಶಿವಕುಮಾರ್ ಅವರ ಸರ್ಕಾರ ತೆಗೆದುಕೊಂಡಿದೆ. ಹೈನುಗಾರಿಕೆ ಒಳ್ಳೆಯ ಪ್ರಮಾಣದಲ್ಲಿ ಹೊರಹೊಮ್ಮುತ್ತಿದೆ ಎಂದರು.
'ರೈತರಿಗೆ ಹಾಲು ಉತ್ಪಾದಕರಿಗೆ ನೇರವಾಗಿ ಹಣ ನೀಡುತ್ತಿದ್ದೇವೆ. 7 ರೂ. ರೈತರ ಅಕೌಂಟ್ ಗೆ ಹೋಗ್ತಾ ಇದೆ. ಒಳ್ಳೆಯ ನಿರ್ಧಾರ ನಮ್ಮ ಸಿಎಂ ಸರ್ಕಾರ ತೆಗೆದುಕೊಂಡಿದೆ. ಹೈನುಗಾರಿಕೆ ಒಳ್ಳೆಯ ಪ್ರಮಾಣದಲ್ಲಿ ಹೊರಹೊಮ್ಮುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ಹಾಲಿನ ದರ ಏರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಣ ನೇರವಾಗಿ ರೈತರು ಮತ್ತು ಹಾಲು ಉತ್ಪಾದಕರಿಗೆ ಹೋಗುತ್ತದೆ (ರೈತರ ಖಾತೆಗೆ ₹7 ಹೋಗುವುದನ್ನು ಉಲ್ಲೇಖಿಸಿ) ಮತ್ತು ಹೈನುಗಾರಿಕೆಗೆ ಬೆಂಬಲ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.