ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಭೂಮಿ ಕೊಡದಿದ್ದರೆ ರಾಜಕೀಯ ನಿವೃತ್ತಿ: ಸುಳ್ಳು ಹೇಳುವುದರಲ್ಲಿ, ಅಸೂಯೆ ಪಟ್ಟುಕೊಳ್ಳುವುದರಲ್ಲಿ HDKಗೆ ಪದ್ಮಶ್ರೀ ಕೊಡಿಸಬೇಕು; ಡಿಕೆ ಸುರೇಶ್

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವಧಿಯಲ್ಲಿ ಮಂಚನಬೆಲೆಯಿಂದ ಕನಕಪುರದವರೆಗೆ 20 ಸಂಪರ್ಕ ಸೇತುವೆಗಳು ನಿರ್ಮಾಣವಾಗಿವೆ.

ಡಿ.ಕೆ ಸುರೇಶ್ ಮತ್ತು ಎಚ್.ಡಿ ಕುಮಾರಸ್ವಾಮಿ
Shilpa D
Updated On : 24 Nov 2026, 8:38 am

ರಾಮನಗರ: ಕೈಗಾರಿಕೆ ಸ್ಥಾಪಿಸಲು ಕೇಂದ್ರ ಸಚಿವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ನಾಗಮಂಗಲ ಸೇರಿದಂತೆ ಎಲ್ಲಾದರೂ ಭೂಮಿ ಕೊಡಿ ಎಂದು ರಾಜ್ಯ ಸರ್ಕಾರವನ್ನು ಕೇಳಲಿ, ಸರ್ಕಾರ ಭೂಮಿ ಕೊಡದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ.

ತಾಲ್ಲೂಕಿನ ಕೂಟಗಲ್ ಹೋಬಳಿ ವ್ಯಾಪ್ತಿಯ ಯರೇಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಎಚ್‌ಡಿಕೆ ಹೆಸರೇಳದೆ ವಾಗ್ದಾಳಿ ನಡೆಸಿದ ಅವರು, ತಮ್ಮನ್ನು ಮುಖ್ಯಮಂತ್ರಿ ಮಾಡಿದ ರಾಮನಗರ ಮತ್ತು ಚನ್ನಪಟ್ಟಣ ಜನರ ಋಣ ತೀರಿಸಲಾಗದ ಅವರು, ಕೈಗಾರಿಕೆ ಸ್ಥಾಪಿಸಿ ಮಂಡ್ಯದ ಋಣವನ್ನಾದರೂ ತೀರಿಸಲಿ. ಅಲ್ಲಿ ಜೆಡಿಎಸ್‌ನವರಿಗೇ ಉದ್ಯೋಗ ಕೊಡಿಸಲಿ. ನಾವು ಅದನ್ನು ಪ್ರಶ್ನಿಸುವುದಿಲ್ಲ ಎಂದು ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೇಕೆದಾಟು ಯೋಜನೆಗೆ ಕೇವಲ ಹತ್ತು ನಿಮಿಷದಲ್ಲಿ ಅನುಮತಿ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದ ಅವರು, ಈಗ ಕೇಂದ್ರ ಸರ್ಕಾರದ ಭಾಗವಾಗಿದ್ದರೂ ಯಾಕೆ ಕೊಡಿಸುತ್ತಿಲ್ಲ? ಸುಳ್ಳು ಹೇಳುವುದು, ಸುಮ್ಮನೆ ಟೀಕಿಸುವುದು, ಹೊಟ್ಟೆಯುರಿ ಮಾಡಿಕೊಳ್ಳುವುದರಲ್ಲಿ ಅವರಿಗೆ ಪದ್ಮಶ್ರೀ ಕೊಡಿಸಬೇಕು ಎಂದು ಕಿಡಿಕಾರಿದರು.

Advertisement

Advertisement

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವಧಿಯಲ್ಲಿ ಮಂಚನಬೆಲೆಯಿಂದ ಕನಕಪುರದವರೆಗೆ 20 ಸಂಪರ್ಕ ಸೇತುವೆಗಳು ನಿರ್ಮಾಣವಾಗಿವೆ.

Also Read

ಹಾಲಿನ ದರ ಏರಿಕೆಯ ₹8 ರಲ್ಲಿ ₹7 ರೈತರಿಗೇ ಸಿಗಲಿದೆ; ರೈತರ ಹಿತಕ್ಕಾಗಿ ಬೆಲೆ ಏರಿಕೆ ಅನಿವಾರ್ಯ: ಡಿ.ಕೆ ಸುರೇಶ್ ಸಮರ್ಥನೆ

ಜಿಲ್ಲೆಯಲ್ಲಿ 25 ವರ್ಷ ಅಧಿಕಾರ ಮಾಡಿದರೂ ಎಚ್‌ಡಿಕೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಅವರಿಗೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಮಾಡಲು ಕೆಲಸವಿಲ್ಲ. ಅದಕ್ಕಾಗಿಯೇ ಬೆಳಿಗ್ಗೆ ಮತ್ತು ಸಂಜೆ ಮಾಧ್ಯಮದವರ ಮುಂದೆ ಭಾಷಣ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಹಳ್ಳಿ ಹಳ್ಳಿಗೆ ಹೋಗಿ ಕೆಲಸ ಮಾಡುವುದು ಅಭಿವೃದ್ಧಿಯೇ ಹೊರತ, ಟಿವಿ ಮುಂದೆ ಬಂದು ಭಾಷಣ ಮಾಡಿ ಕೇವಲ ಡವ್ ಮಾಡಿಕೊಂಡು ಹೋಗುವುದಲ್ಲ ಎಂದು ಸುರೇಶ್ ಕಿಡಿ ಕಾರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments