ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಸಿದ್ದಾರ್ಥ ವಿಹಾರ್ ಟ್ರಸ್ಟ್‌ ಬದಲು ಮನೆಯಲ್ಲಿ ಅವರ ಮಕ್ಕಳು ಏನು ಮಾಡ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿ: HDKಗೆ ಪ್ರಿಯಾಂಕ್ ತಿರುಗೇಟು

ಹಿರಿಯ ನಾಯಕರು ನೀವು ಆರ್‌ಎಸ್‌ಎಸ್ ಹೇಳಿಕೊಟ್ಟಿರುವ ಪಾಠ ಹೇಳಿದ್ರೆ ನಾವು ಮಾತಾಡಬೇಕಾಗುತ್ತದೆ. ನೀವು ಮರ್ಯಾದೆ ಕೊಡಿ ನಾವು ಮರ್ಯಾದೆ ಕೊಡುತ್ತೇವೆ.

ಹೆಚ್ ಡಿ ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ
Shilpa D
Updated On : 7 Oct 2026, 10:02 am

ಬೆಂಗಳೂರು: ಸಿದ್ದಾರ್ಥ ಟ್ರಸ್ಟ್‌ ನಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಬದಲು ಅವರ ಮನೆಯಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ಅಂತ ತಿಳಿದುಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಸಿದ್ದಾರ್ಥ ಟ್ರಸ್ಟ್‌ನಿಂದ ಫಾರ್ಮ್ 7 ಪ್ರಿಂಟ್ ಆಗುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದಾರ್ಥ ವಿಹಾರ್ ಟ್ರಸ್ಟ್‌ನಲ್ಲಿ ಏನಾಗುತ್ತಿದೆ ಅಂತ ಕುಮಾರಸ್ವಾಮಿಗೆ ಗೊತ್ತಿಲ್ಲ. ಮೊದಲು ಅವರ ಮನೆ ಮಕ್ಕಳಿಗೆ ನೋಡಿಕೊಳ್ಳೋಕೆ ಹೇಳಿ. ಮನೆಯಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ನಿಮಗೆ ಗೊತ್ತಿಲ್ಲ. ಸಿದ್ದಾರ್ಥ ವಿಹಾರ್ ಟ್ರಸ್ಟ್‌ನಲ್ಲಿ ಏನಾಗುತ್ತೆ ಗೊತ್ತಾ ನಿಮಗೆ? ಚುನಾವಣೆ ಆಯೋಗದಲ್ಲಿ ಏನಾಗುತ್ತಿದೆ ಗೊತ್ತಾ ಅವರಿಗೆ ಎಂದು ಕಿಡಿಕಾರಿದರು.

ಹಿರಿಯ ನಾಯಕರು ನೀವು.. ಆರ್‌ಎಸ್‌ಎಸ್ ಹೇಳಿಕೊಟ್ಟಿರುವ ಪಾಠ ಹೇಳಿದ್ರೆ ನಾವು ಮಾತಾಡಬೇಕಾಗುತ್ತದೆ. ನೀವು ಮರ್ಯಾದೆ ಕೊಡಿ ನಾವು ಮರ್ಯಾದೆ ಕೊಡುತ್ತೇವೆ. ಮರ್ಯಾದೆ ಬಿಟ್ಟು ಮಾತಾಡೋಕೆ ನೀವು ರೆಡಿ ಇದ್ದರೆ ನಾವೂ ರೆಡಿ ಇದ್ದೇವೆ ಎಂದು ವಾಗ್ದಾಳಿ ನಡೆಸಿದರು.

Advertisement

Advertisement

ಇನ್ನು ಕಾಂಗ್ರೆಸ್ ವಿರುದ್ದ ರಾಜ್ಯಪಾಲರಿಗೆ ಎನ್‌ಡಿಎ ಕೂಟ್ಟ ದೂರು ಕೊಟ್ಟ ಕುರಿತು ಪ್ರತಿಕ್ರಿಯಿಸಿದ ಅವರು, ಎನ್‌ಡಿಎ ನಾಯಕರು ರಾಜ್ಯಪಾಲರಿಗೆ ದೂರು ಕೊಡಲಿ. ಅವರ ಲೆಟರ್ ಹೆಡ್‌ನಲ್ಲಿ ಫಾರ್ಮ್ 7 ಹೋಗಿದೆ. ಅದರ ಬಗ್ಗೆ ದೂರು ಕೊಡಲಿ.

Also Read

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ ಕುಮಾರಸ್ವಾಮಿ ಆರೋಪ

ಕಾರ್ಪೋರೇಟರ್, ನಾಯಕರು, ಲೆಟರ್ ಹೆಡ್‌ನಲ್ಲಿ ಫಾರ್ಮ್ 7 ಯಾಕೆ ಇದೆ? 7 ಸಾವಿರ 5 ಸಾವಿರ ಫಾರ್ಮ್ 7 ಡಿಲೀಟ್ ಮಾಡಲು ಕೊಡುತ್ತಿದ್ದೀರಾ. ಅದೆಲ್ಲವನ್ನು ರಾಜ್ಯಪಾಲರು, ಚುನಾವಣೆ ಆಯೋಗಕ್ಕೆ ಹೇಳಲಿ. ಇವರು ಏನು ಬೇಕಾದರೂ ಮಾಡಬಹುದಾ ಎಂದು ಹರಿಹಾಯ್ದರು.

ಕುಮಾರಸ್ವಾಮಿ ಫಾರ್ಮ್ 7 ಕೊಡೋದು ಸಂವಿಧಾನ ಹಕ್ಕು ಅಂತಾರೆ. ಮತದಾರರು ತಮ್ಮ ಮತ ಡಿಫೆಂಡ್ ಮಾಡಿಕೊಳ್ಳೋದು ಅವರ ಹಕ್ಕು ಅಲ್ಲವಾ? ಮತದಾರರಿಗೆ ಮೋಸ ಮಾಡಿದ್ರೆ, ಪಟ್ಟಿಯಿಂದ ಹೊರಗೆ ಇಟ್ಟರೆ ನನ್ನ ಹಕ್ಕು ಅಂತ ಅವರು ದೂರು ಕೊಡಬಹುದು ಅಲ್ಲವಾ? ನಾನು ಬದುಕಿದ್ದೇನೆ ಅಂತ ದೂರು ಕೊಡೋದು ತಪ್ಪಾ ಎಂದು ಗುಡುಗಿದರು.

ಎಫ್‌ಐಆರ್ ರದ್ದು ಮಾಡದೇ ಹೋದ್ರೆ ನಮ್ಮ ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ನುಗ್ಗಿಸುತ್ತೇವೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪೊಲೀಸ್ ಠಾಣೆಗೆ ನುಗ್ಗಿದ್ರೆ ಏನು ಮಾಡ್ತೀನಿ ಗೊತ್ತಲ್ಲ. ನುಗ್ಗಿದ್ರೆ ಕರ್ನಾಟಕದ ಗೃಹ ಸಚಿವರು ಏನು ಮಾಡ್ತಾರೆ ಅವರಿಗೂ ಗೊತ್ತಿದೆ. ನುಗ್ಗುತ್ತೇನೆ, ಹೊಡೆಯುತ್ತೇನೆ, ಬಡಿಯುತ್ತೇನೆ ಇವೆಲ್ಲ ಇಲ್ಲಿ ನಡೆಯಲ್ಲ. ಉತ್ತರ ಪ್ರದೇಶದಲ್ಲಿ ಇಟ್ಟುಕೊಳ್ಳಿ. ಇಲ್ಲಿ ಏನೇ ನಡೆದರೂ ಅಂಬೇಡ್ಕರ್ ಅವರ ಸಂವಿಧಾನ ನಡೆಯುತ್ತದೆ ಅಷ್ಟೇ ಎಂದು ತಿರುಗೇಟು ಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments