ಸಿದ್ದರಾಮಯ್ಯ ಮತ್ತು ಮಹಾದೇವಪ್ಪ 
ರಾಜಕೀಯ

ಸಂವಿಧಾನ ದಿನಾಚರಣೆ: ಆಪ್ತ ಮಿತ್ರನಿಗಿಲ್ಲ ಆಹ್ವಾನ, ಸಂವಿಧಾನ ರಕ್ಷಕರು ಭಾಗವಹಿಸ್ತಾರೆ -ಮಹದೇವಪ್ಪ; ಮುಂದುವರಿದ ದೋಸ್ತಿಗಳ ಮುನಿಸು!

ಸಿದ್ದರಾಮಯ್ಯ ಅವರಿಗೆ ಆಹ್ವಾನ ಇಲ್ಲದೇ ಮಹದೇವಪ್ಪ ಅವರು ಮೈಸೂರಿನಲ್ಲಿ ‌ʻರಾಷ್ಟ್ರೀಯ ಸಂವಿಧಾನ ದಿನʼ ಕಾರ್ಯಕ್ರಮ ಆಯೋಜನೆ ಮಾಡಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ.

ಮೈಸೂರು: ಆಪ್ತ ಮಿತ್ರರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಹೆಚ್‌.ಸಿ ಮಹದೇವಪ್ಪ ನಡುವಿನ ಮುನಿಸು 2ನೇ ಹಂತಕ್ಕೆ ತಲುಪಿದಂತಿದೆ.

ಸಿದ್ದರಾಮಯ್ಯ ಅವರಿಗೆ ಆಹ್ವಾನ ಇಲ್ಲದೇ ಮಹದೇವಪ್ಪ ಅವರು ಮೈಸೂರಿನಲ್ಲಿ ‌ʻರಾಷ್ಟ್ರೀಯ ಸಂವಿಧಾನ ದಿನʼ ಕಾರ್ಯಕ್ರಮ ಆಯೋಜನೆ ಮಾಡಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ.

ನವೆಂಬರ್‌ 26, 27 ರಂದು ಮೈಸೂರಿನಲ್ಲಿ ಸಂವಿಧಾನದ ಹೆಸರಿನಲ್ಲಿ ರಾಷ್ಟ್ರೀಯ ಸಂವಿಧಾನ ದಿನ ಸಮ್ಮೇಳನವನ್ನ ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನ ಮಾಜಿ ಸಚಿವ ಡಾ. ಹೆಚ್‌.ಸಿ ಮಹದೇವಪ್ಪ ಅವರ ನೇತೃತ್ವದಲ್ಲಿ ಆಯೋಜನೆಗೊಳ್ಳುತ್ತಿದೆ. ಅಲ್ಲದೇ ಸಿದ್ದರಾಮಯ್ಯ ಅವರನ್ನ ಆಹ್ವಾನಿಸಲ್ವಾ? ಅನ್ನೋ ಪ್ರಶ್ನೆಗೂ ಮಹದೇವಪ್ಪ ಅವರು ಸ್ಪಷ್ಟ ಉತ್ತರ ನೀಡದಿರುವುದು ಇಬ್ಬರ ನಡುವಿನ ಮುನಿಸು ಮುಂದಿನ ಹಂತ ತಲುಪಿದೆಯಾ ಎನ್ನುವ ಪ್ರಶ್ನೆ ಮೂಡಿದೆ.

ಸಿದ್ದರಾಮಯ್ಯ ಮೈಸೂರಿಗೆ ಬಂದ್ರೆ ಮಹದೇವಪ್ಪ ಜೊತೆಯಲ್ಲೇ ಇರುತ್ತಿದ್ದರು. ಇನ್ನು ಮೈಸೂರಿನಲ್ಲಿ ಯಾವುದೇ ಕಾರ್ಯಕ್ರಮಗಳ ಇರಲಿ ಒಟ್ಟಿಗೆ ಭಾಗವಹಿಸುತ್ತಿದ್ದರು. ಆದ್ರೆ, ಇದೀಗ ಇಬ್ಬರೂ ಅಂತರ ಕಾಯ್ದುಕೊಂಡಿದ್ದಾರೆ.

ಸಿದ್ದರಾಮಯ್ಯ ಅವರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲ್ವಾ ಅನ್ನೋ ಪ್ರಶ್ನೆಗೆ ಹೆಸರು ಹೇಳದೇ ಖಡಕ್‌ ಉತ್ತರ ಕೊಟ್ಟ ಮಹದೇವಪ್ಪ, ಇಲ್ಲಿ ಯಾವ ವ್ಯಕ್ತಿಯ ಪ್ರಶ್ನೆಯೂ ಇರಲ್ಲ. ಸಂವಿಧಾನದ ರಕ್ಷಕರು ಎಲ್ಲಾ ಸೇರಿ ಇದರಲ್ಲಿ ಭಾಗವಹಿಸುತ್ತಾರೆ ಎಂದಷ್ಟೇ ಹೇಳಿದ್ದಾರೆ.

ತಮ್ಮ ಹಾಗೂ ಸಿದ್ದರಾಮಯ್ಯ ನಡುವಿನ ಫ್ರೆಂಡ್‌ಶಿಪ್‌ ಕುರಿತ ಪ್ರಶ್ನೆಗೂ ಉತ್ತರ ಕೊಡದೇ ನುಣುಚಿಕೊಂಡ ಮಾಜಿ ಸಚಿವರು, ONCE A FRIEND IS ALWAYS A FRIEND, ಸ್ನೇಹದ ಪ್ರೀತಿ ಜಾಸ್ತಿಯೂ ಆಗಲ್ಲ, ಕಡಿಮೆಯೂ ಆಗಲ್ಲ. ನಾನು ಈಗ ಬೇರೆ ಯಾವ ಪ್ರಶ್ನೆಗಳಿಗೂ ಈಗ ಉತ್ತರ ಕೊಡಲ್ಲ. ಬೇರೆ ಯಾವುದೇ ವಿಷಯವನ್ನ ಇಲ್ಲಿ ತರೋದು ಬೇಡ, ಮುಕ್ತ ಮನಸ್ಸಿನಿಂದ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಲ್ಲರೂ ಪಾಲ್ಗೊಳ್ಳಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಭದ್ರಕೋಟೆ ಮುರಿಯಲು BJP-JDS ರಣತಂತ್ರ; HDK ನೇತೃತ್ವದಲ್ಲಿ ಮಹತ್ವದ ಸಭೆ..!

ಮಲೆನಾಡು, ಕರಾವಳಿ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ: ಕೇಂದ್ರ ಸಚಿವ ವಿ. ಸೋಮಣ್ಣ