ಬಸವರಾಜ ಬೊಮ್ಮಾಯಿ  
ರಾಜಕೀಯ

ಸ್ಟಿಂಗ್ ಆಪರೇಷನ್ ವಿಚಾರ ಪ್ರಸ್ತಾಪಿಸಿದ್ದು ಡಿಕೆ.ಶಿವಕುಮಾರ್, ತನಿಖೆಯಾಗದಿದ್ದರೆ ಅವರ ಮೇಲೆಯೇ ಅನುಮಾನ: ಸಂಸದ ಬೊಮ್ಮಾಯಿ

ಸ್ಟಿಂಗ್ ಆಪರೇಷನ್ ವಿಚಾರವನ್ನು ಮುಖ್ಯಮಂತ್ರಿಯವರೇ ಪ್ರಸ್ತಾಪಿಸಿರುವುದರಿಂದ ಸತ್ಯವನ್ನು ಹೊರತರಲು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಕೇವಲ ಹೇಳಿಕೆ ನೀಡಿ, ಆರಾಮವಾಗಿ ಓಡಾಡಿಕೊಂಡು ಜೀವನ ನಡೆಸಿದರೆ ಸಾಲದು. ಇದು ಅತ್ಯಂತ ಗಂಭೀರವಾದ ವಿಚಾರ.

ಗದಗ: ಸ್ಟಿಂಗ್ ಆಪರೇಷನ್ ವಿಚಾರ ಪ್ರಸ್ತಾಪಿಸಿದ್ದು ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಹೀಗಾಗಿ ಸತ್ಯಾಸತ್ಯತೆ ಬಯಲಿಗೆಳೆಯಲು ತನಿಖೆ ನಡೆಸುವುದು ಅತ್ಯಗತ್ಯ. ಇಲ್ಲದಿದ್ದರೆ, ಮುಖ್ಯಮಂತ್ರಿಗಳ ಮೇಲೆಯೇ ಅನುಮಾನ ಹೆಚ್ಚಾಗುತ್ತದೆ ಎಂದು ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನು ಸ್ವತಃ ಮುಖ್ಯಮಂತ್ರಿಯವರೇ ಪ್ರಸ್ತಾಪಿಸಿದ್ದು, ತನಿಖೆ ನಡೆಸದಿದ್ದರೆ ಸಹಜವಾಗಿಯೇ ಅನುಮಾನದ ಮುಳ್ಳು ಅವರತ್ತಲೇ ತಿರುಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಟಿಂಗ್ ಆಪರೇಷನ್ ವಿಚಾರವನ್ನು ಮುಖ್ಯಮಂತ್ರಿಯವರೇ ಪ್ರಸ್ತಾಪಿಸಿರುವುದರಿಂದ ಸತ್ಯವನ್ನು ಹೊರತರಲು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಕೇವಲ ಹೇಳಿಕೆ ನೀಡಿ, ಆರಾಮವಾಗಿ ಓಡಾಡಿಕೊಂಡು ಜೀವನ ನಡೆಸಿದರೆ ಸಾಲದು. ಇದು ಅತ್ಯಂತ ಗಂಭೀರವಾದ ವಿಚಾರ. ಈಗ ಈ ವಿಚಾರದಲ್ಲಿ ಮೌನ ವಹಿಸಿದರೆ ಅವರ ಸಹೋದ್ಯೋಗಿಗಳ ಪರಿಸ್ಥಿತಿ ಏನಾಗಬಹುದು? ಹೀಗಾಗಿ ಡಿಕೆ.ಶಿವಕುಮಾರ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲೇಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಕಾಂಗ್ರೆಸ್ ಸರ್ಕಾರ ಮತ್ತು ಆ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಅರಾಜಕತೆಯನ್ನು ಹರಡಲಾಗುತ್ತಿದೆ. ಪ್ರತಿಯೊಂದು ವಿಚಾರದಲ್ಲೂ ಸಮಗ್ರ ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಮೇಲ್ನೋಟಕ್ಕೆ ತನಿಖೆ ಆರಂಭಿಸಿ ಬಳಿಕ ಸುಮ್ಮನಾಗುವ ಬದಲು, ತಪ್ಪು ಮಾಡಿದವರಿಗೆ ಕಾನೂನಿನ ಅನ್ವಯ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅಭಿಪ್ರಾಯಪಟ್ಟರು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸೋಲಿನ ಹತಾಶೆಯಿಂದ ಕಾಂಗ್ರೆಸ್ ಚುನಾವಣಾ ಆಯೋಗ ಮತ್ತು ವಿದ್ಯುನ್ಮಾನ ಮತಯಂತ್ರಗಳ (EVM) ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಮತ್ತು ಸಿಜೆಪಿ ಒಂದೇ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸಿಜೆಪಿಯ ಮಟ್ಟಕ್ಕೆ ಇಳಿದಿದೆ. ಖರ್ಗೆ ಹೇಳಿರುವುದು ಸರಿಯಾಗಿದೆ ಎಂದು ವ್ಯಂಗ್ಯವಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lehra Do Tiranga ಮೆರವಣಿಗೆ: CEC ರಾಜೀನಾಮೆ ಆಗ್ರಹಿಸಿ ದೆಹಲಿಯಲ್ಲಿ ಹೈಡ್ರಾಮಾ; ಪ್ರತಿಭಟನೆಗೂ ಮುನ್ನ ವಶಕ್ಕೆ ಪಡೆದಿದ್ದ ನೆಹಾ ಬೋರಾ ಬಿಡುಗಡೆ, ಅಭಿಜೀತ್ ದೀಪ್ಕೆಗಿಲ್ಲ ರಿಲೀಫ್..!

'ಅನಗತ್ಯ, ಮಾಹಿತಿ ರಹಿತ': SIR ಕುರಿತು ಭಾರತದ ವಿರುದ್ಧ ಅಮೆರಿಕ ಸಂಸದೆಯ ವಾಗ್ದಾಳಿ ಖಂಡಿಸಿದ ವಿದೇಶಾಂಗ ಸಚಿವಾಲಯ!

ಅಭಿಜೀತ್ ದೀಪ್ಕೆ, ನೇಹಾ ಬೋರಾ ವಶಕ್ಕೆ ಪಡೆದ ದೆಹಲಿ ಪೊಲೀಸರು; ಅಲ್ಲಲ್ಲಿ ದಿಢೀರ್ ಪ್ರತಿಭಟನೆ ಮುಂದುವರಿಕೆ!

ನಿತೀಶ್ ಕುಮಾರ್‌ಗಾಗಿ ‘ಒಂಬತ್ತು ಜನರ ಹತ್ಯೆ’ ಮಾಡಿಸಿದೆ: ಜೆಡಿ(ಯು) ಶಾಸಕ ಅನಂತ್ ಸಿಂಗ್ ಸ್ಫೋಟಕ ಹೇಳಿಕೆ!

ನ್ಯೂಜಿಲೆಂಡ್ ವಿರುದ್ಧದ ಏಕದಿನ, ಟೆಸ್ಟ್ ಸರಣಿಗಳಿಗೆ ಭಾರತ ತಂಡ ಪ್ರಕಟ; 2 ಏಕದಿನ ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ನಾಯಕ